ಉಚಿತವಾಗಿ ಊಟ ಹಂಚಲು ಸ್ಕೂಟರ್ ಮಾರಿದ ಯುವಕ : ಒಳ್ಳೆಯ ಕಾರ್ಯಕ್ಕೆ ಸಾಥ್ ಕೊಟ್ಟ ಸ್ನೇಹಿತರು

www.karnatakatv.net ಬೆಂಗಳೂರು : ದುಡ್ ಇದ್ದವರು ಸಹಾಯ ಮಾಡಿದ್ರೆ ದೊಡ್ಡತನ ಅಂತಾರೆ. ಕಷ್ಟದಲ್ಲಿರೋರೆ ಸಹಾಯ ಮಾಡಿದ್ರೆ ಅವರನ್ನ ದೇವರ ರೀತಿ ಕಾಣ್ತಾರೆ.. ಹೌದು, ಬೆಂಗಳೂರಿನ ಈ ಹುಡುಗರು ನಿಜವಾಗಿಯೂ ದೇವರ ಮಕ್ಕಳೆ.. ಬೆಂಗಳೂರಿನ ಬಾಣಸವಾಡಿಯ ಸ್ನೇಹಿತರಾದ ರಾಜೇಶ್ & ವಿಷ್ಣು ಲಾಕ್ ಡೌನ್ ವೇಳೆ ಕೆಲಸ ನಿಮಿತ್ತ ಬಳ್ಳಾರಿಗೆ ಹೋಗಿ ಬರುವಾಗ ದಾರಿ ಮಧ್ಯೆ ಎಲ್ಲೂ ಊಟ ಸಿಗೋದಿಲ್ಲ.. ಬೆಂಗಳೂರಿನವರೆಗೂ ಹಸಿದುಕೊಂಡೇ ಬರುವ ರಾಜೇಶ್ ಹಾಗೂ ವಿಷ್ಣು ಬೆಂಗಳೂರು ತಲುಪುವ ವೇಳೆಗೆ ಒಂದು ನಿಧರ್ಾರಕ್ಕೆ ಬರ್ತಾರೆ.

ಲಾಕ್ ಡೌನ್ ಟೈಂನಲ್ಲಿ ಅಗತ್ಯವಸ್ತು ಸಾಗಾಣೆ ಮಾಡುವ ವಾಹನ ಚಾಲಕರು, ಬಡವರು, ಸ್ವಿಗ್ಗಿ, ಜೊಮೊಟೋ ಹುಡುಗರು ಊಟಕ್ಕಾಗಿ ಪರದಾಡ್ತಾರೆ.. ಏನಾದ್ರೂ ಮಾಡಿ ಸಹಾಯ ಮಾಡೋಣ ಅಂತ. ಆದ್ರೆ, ರಾಜೇಶ್ ಕೋಟ್ಯಧಿಪತಿ ಮಗನಲ್ಲಿ, ವಿಷ್ಣು ಆಗರ್ಭ ಶ್ರೀಮಂತನಲ್ಲ. ಈ ಗ್ಯಾಪಲ್ಲಿ ರಾಜೇಶ್ ತನ್ನ ಬೈಕ್ ಸೇಲ್ ಮಾಡಿ ಊಟ ಹಂಚೋಕೆ ಹಣ ಹೊಂದಿಸ್ತಾರೆ. ಉಳಿದ ಸ್ನೇಹಿತರು ಯಾಕ್ ಗುರು ಬೈಕ್ ಮಾರ್ದೆ, ನಾವಿಲ್ವಾ..? ಅಂತ ಸಹಾಯಕ್ಕೆ ನಿಲ್ತಾರೆ.. ಕರಾವಳಿ ಹೋಟೆಲ್ ರಾಜಣ್ಣ ಅಡುಗೆ ಮಾಡಿಸೋ ಜವಾಬ್ದಾರಿ ನಮ್ದು ಅಂತಾರೆ.. ಅವರ ಹೋಟೆಲ್ ನಲ್ಲೆ ಅವರ ಸಹೋದರ ಪಾಕ ಪ್ರವೀಣ ಪ್ರಭು ಅಡುಗೆ ಮಾಡೋಕೆ ನಿಲ್ತಾರೆ.. ಹೀಗೆ ಪ್ರತಿ ದಿನ ಅಡುಗೆ ಮಾಡಿಕೊಂಡು ರಸ್ತೆ ಬದಿ ಹಾಗೂ ಊಟಕ್ಕಾಗಿ ಕಾದು ಕುಳಿತರ ಹಸಿವನ್ನ ನೀಗಿಸ್ತಾರೆ.. ಪ್ರತಿ ದಿನ 500-600 ಜನರಿಗೆ ಊಟ ನೀಡ್ತಿರುವ ಈ ತಂಡ ಸತತ 20 ದಿನ ಉಚಿತ 10 ಸಾವಿರ ಊಟವನ್ನ ಹಂಚಿಕೆ ಮಾಡಿದೆ.. ಈ ತಂಡದ ಕಾರ್ಯಕ್ಕೆ ಕೈ ಜೋಡಿಸೋದು ಹೆಬ್ಬಾಳದ ಯುವರಾಜ್ ಶ್ರೀನಿವಾಸ್, ಆರ್ ರಾಜೇಶ್, ಜಾನ್, ಅಜರ್ುನ್, ಮಹದೇವ್, ನಾಸೀರ್.. ಇವರ ತಂಡದ ಕಾರ್ಯಕ್ಕೆ ಹ್ಯಾಟ್ಸಫ್ ಹೇಳಲೇ ಬೇಕು.. ಇನ್ನು ಇವರು ಇಷ್ಟಕ್ಕೆ ಮಾತ್ರ ಸೀಮೀತವಾಗಿಲ್ಲ.. ಪ್ರವೀಣ್ ಶೆಟ್ಟಿ ನೇತೃತ್ವದ ಕರವೇಯಲ್ಲಿ ಸಕ್ರಯವಾಗಿದ್ದು ನಾಡು-ನುಡಿಗಾಗಿ ಹೋರಾಟ ಸಹ ಮಾಡ್ತಿದ್ದಾರೆ.. ಏನೇ ಆಗ್ಲಿ ತಂಡದ ಕಾರ್ಯಕ್ಕೆ ಒಂದ್ ಬಿಗ್ ಸೆಲ್ಯೂಟ್ ಹಾಕಲೇ ಬೇಕು.. ಹಾಗೆಯೇ ನೀವು ಕೂಡ ಇವರ ಕಾರ್ಯಕ್ಕೆ ಥ್ಯಾಂಕ್ ಹೇಳಿ.. ಮತ್ತಷ್ಟು ಒಳ್ಳೆಯ ಕೆಲಸ ಮಾಡೋಕೆ ಈ ತಂಡಕ್ಕೆ ಸ್ಫೂತರ್ಿಯಾಗಬಹುದು..
ರಾಜೇಶ್ ಮೊಬೈಲ್ ಸಂಖ್ಯೆ – 7892552405

9 ಸಿರಿಧಾನ್ಯ ಸೇರಿ 24 ಕಾಳುಗಳಿಂದ ತಯಾರಾಗಿದೆ
ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ
ದಿನವೂ ಜೀನಿ ಕುಡಿಯಿರಿ, ಎಲ್ಲರೂ ಆರೋಗ್ಯವಾಗಿರಿ

ಸಂಪಕರ್ಿಸಿ : 9113549531, 8147130507, 7349360507

About The Author