ಸಿಲಿಕಾನ್ ಸಿಟಿಯಲ್ಲಿ ದಿನವೂ ವಾಹನ ಸವಾರರ ಪೇಶೆನ್ಸ್ ಟೆಸ್ಟ್ ಮಾಡ್ತಿರೋ ಟ್ರಾಫಿಕ್ ಸಮಸ್ಯೆಗೆ ಸೊಲ್ಯೂಷನ್ ಹುಡುಕೋಕೆ ಅಧಿಕಾರಿಗಳು ಈಗ ದೊಡ್ಡ ಪ್ಲಾನ್ ರೆಡಿ ಮಾಡಿದ್ದಾರೆ. ಆದರೆ ಈ ಪ್ಲಾನ್ ಶುರುವಾಗೋದಕ್ಕೂ ಮುಂಚೆ ಜನರಿಗೆ ಮತ್ತೊಂದು ಟ್ರಾಫಿಕ್ ಶಾಕ್ ಎದುರಾಗೋದು ಫಿಕ್ಸ್!
ಬೆಂಗಳೂರಿನ ಪೂರ್ವ ಭಾಗದ ಪ್ರಮುಖ ಕನೆಕ್ಟಿವಿಟಿ ಪಾಯಿಂಟ್ ಆಗಿರುವ ಐಒಸಿ ಜಂಕ್ಷನ್ ಫ್ಲೈಓವರ್ಗೆ ಇದೀಗ ಡಿಮಾಲಿಷನ್ ಕೌಂಟ್ಡೌನ್ ಶುರುವಾಗಿದೆ. ಸುಮಾರು ಎರಡು ದಶಕಗಳ ಹಿಂದೆ ರೈಲ್ವೆ ಇಲಾಖೆ ನಿರ್ಮಿಸಿದ್ದ ಈ ಫ್ಲೈಓವರ್ ಈಗಿನ ಟ್ರಾಫಿಕ್ ಲೋಡ್ಗೆ ಸಾಲುತ್ತಿಲ್ಲ ಅನ್ನೋ ಕಾರಣಕ್ಕೆ, ಇದನ್ನ ದುರಸ್ಥಿಗೊಳಿಸಿ ನೂತನ ಫ್ಲೈಓವರ್ ನಿರ್ಮಾಣ ಮಾಡುವ ಸಿದ್ದತೆ ನಡಿತಿದೆ. ಹೊಸ ಮೇಲ್ಸೇತುವೆ ಕಮ್ಮನಹಳ್ಳಿ, ಮಾರುತಿ ಸೇವಾ ನಗರ, ಬಾಣಸವಾಡಿ, ಬೈಯಪ್ಪನಹಳ್ಳಿ ಭಾಗಗಳಿಗೆ ನೇರ ಸಂಪರ್ಕ ಕೊಡಲಿದ್ದು, ಇಂದಿರಾನಗರ ಮತ್ತು ಫ್ರೇಸರ್ ಟೌನ್ ಕಡೆ ಹೋಗೋ ವಾಹನ ಸವಾರರಿಗೆ ದೊಡ್ಡ ರಿಲೀಫ್ ಸಿಗೋ ನಿರೀಕ್ಷೆ ಇದೆ. ಈ ಹೊಸ ಪ್ರಾಜೆಕ್ಟ್ ಸಿಂಪಲ್ ಫ್ಲೈಓವರ್ ಅಲ್ಲ ಹೈಟೆಕ್ ಸರ್ಕ್ಯುಲರ್ ರೋಟರಿ, ಮಲ್ಟಿಪಲ್ ಸ್ಲೋಪ್ಗಳು, ಸ್ಮಾರ್ಟ್ ಕನೆಕ್ಟಿವಿಟಿ. ಒಟ್ಟಾರೆ ಈ ಹೊಸ ಸೇತುವೆ ಬೆಂಗಳೂರಿನ ಟ್ರಾಫಿಕ್ ಗೇಮ್ಚೇಂಜರ್ ಆಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ.
ಇನ್ನು ಮಾರುತಿ ಸೇವಾ ನಗರ ರಸ್ತೆಯಿಂದ ಸುಮಾರು 1.5 ಕಿಲೋಮೀಟರ್ ಉದ್ದದ ಹೊಸ ಫ್ಲೈಓವರ್ . ಇದರಿಂದ ಲೋಕಲ್ ಟ್ರಾಫಿಕ್ ಮತ್ತು ಲಾಂಗ್ ರೂಟ್ ವಾಹನಗಳಿಗೂ ಸ್ಮೂತ್ ಮೂವ್ಮೆಂಟ್ ಸಿಗಲಿದೆ. ಈ ಮೆಗಾ ಪ್ರಾಜೆಕ್ಟ್ನ್ನು ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್, ಅಂದರೆ B-SMILE ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಅಧಿಕಾರಿಗಳ ಪ್ರಕಾರ, ಈ ಯೋಜನೆ ಪೂರ್ಣಗೊಂಡರೆ ಈ ಭಾಗದ ಟ್ರಾಫಿಕ್ ಜಾಮ್ಗೆ ದೊಡ್ಡ ಮಟ್ಟದ ಬ್ರೇಕ್ ಬೀಳಲಿದೆ.
ಈಗಿರುವ ಫ್ಲೈಓವರ್ ತೆರವು ಮಾಡುವ ಸಮಯದಲ್ಲಿ ಬಾಣಸವಾಡಿ ರಸ್ತೆ, ಬೈಯಪ್ಪನಹಳ್ಳಿ ರಸ್ತೆ, ಕಮ್ಮನಹಳ್ಳಿ ರಸ್ತೆ ಸೇರಿದಂತೆ ಹಲವು ಪ್ರಮುಖ ಮಾರ್ಗಗಳಲ್ಲಿ ಹೆಚ್ಚು ಟ್ರಾಫಿಕ್ ಆಗೋ ಸಾಧ್ಯತೆ ಇದೆ. ಈ ಹಿನ್ನಲೆ ಈಗಾಗಲೇ ಟ್ರಾಫಿಕ್ ಪೊಲೀಸ್, BBMP ಮತ್ತು ಇತರೆ ಏಜೆನ್ಸಿಗಳ ಜೊತೆ ಸಭೆ ನಡೆಸಿ ಡೈವರ್ಷನ್ ಪ್ಲಾನ್ ರೆಡಿ ಮಾಡಲಾಗ್ತಿದೆ. ವಾಹನ ಸವಾರರು ಪರ್ಯಾಯ ಮಾರ್ಗ ಬಳಸೋಕೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಒಟ್ಟಾರೆ, ಇವತ್ತು ಟ್ರಾಫಿಕ್ ಕಷ್ಟ, ನಾಳೆ ಸ್ಮಾರ್ಟ್ ಟ್ರಾವೆಲ್ ಅನ್ನೋ ಗುರಿಯೊಂದಿಗೆ ಬೆಂಗಳೂರಿನ ಮತ್ತೊಂದು ನೂತನ ಪ್ರಾಜೆಕ್ಟ್ನ್ನು ಪ್ರಾರಂಭಿಸುತ್ತಿದೆ.




