Bengaluru News: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಎಸ್‌ಡಿಪಿಐನ ಅಧ್ಯಕ್ಷ ಎಂ.ಕೆ. ಫೈಜಿ ಬಂಧನದ ಬಳಿಕ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬೆಂಗಳೂರು ಸೇರಿದಂತೆ ದೇಶದ ವಿವಿದೆಡೆಗಳಲ್ಲಿ ಎಸ್‌ಡಿಪಿಐಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. ಏಕಕಾಲದಲ್ಲಿಯೇ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಇನ್ನೂ ದೆಹಲಿ ತಿರುವನಂತಪುರ, ಲಖನೌ, ಜೈಪುರ, ಮಲಪುರಂ, ಥಾಣೆ, ನಂದ್ಯಾಲ್, ಪಾಕೂರ್ ಕೋಲ್ಕತ್ತಾ ಹಾಗೂ ಚೆನೈನಲ್ಲಿ ಪಕ್ಷಕ್ಕೆ ಸಂಬಂಧಿಸಿದ ಸ್ಥಳಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಲ್ಲದೆ ಹವಾಲ ಹಣದ ವ್ಯವಹಾರ, ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜೊತೆಗೆ ದೇಶ ವಿರೋಧಿ ಚಟುವಟಿಕೆ ಹಾಗೂ ಭಾರತದಲ್ಲಿ ಭಯೋತ್ಪಾದ ಕತ್ಯಗಳಿಗೆ ಹಣ ಸಂಗ್ರಹಿಸುತ್ತಿದ್ದ ಆರೋಪದಡಿ ಇಡಿ ಅಧಿಕಾರಿಗಳು ಎಂಕೆ ಫೈಜಿ ಅಲಿಯಾಸ್ ಮೊಯಿದ್ದೀನ್ ಕುಟ್ಟಿ ಇಡಿ ಬಲೆಗೆ ಬಿದ್ದಿದ್ದ. ಇನ್ನೂ ಎಂಕೆ ಫೈಜಿ ಕಸ್ಟಡಿಗೆ ಪಡೆದ ಇಡಿ ಅಧಿಕಾರಿಗಳು ಬಳಿಕ ದೆಹಲಿಗೆ ಕರೆತಂದು ಪಟಿಯಾಲ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಇದೀಗ 6 ದಿನಗಳ ಕಾಲ ಇಡಿ ಕಸ್ಟಡಿಗೆ ಪಡೆದಿದ್ದಾರೆ.
ಅಲ್ಲದೆ ಉಗ್ರ ಚಟುವಟಿಕೆ ಸೇರಿ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ ಆರೋಪದ ಮೇಲೆ ಕಳೆದ 2022ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಪಿಎಫ್‌ಐ ಅನ್ನು ನಿಷೇಧಿಸಿತ್ತು. 2009ರಲ್ಲಿ ಎಸ್‌ಡಿಪಿಐ ಸ್ಥಾಪನೆಯಾಗಿತ್ತು. ಇದು ದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಇದು ಪಿಎಫ್‌ಐನ ರಾಜಕೀಯ ಪಕ್ಷ ಎನ್ನಲಾಗುತ್ತಿದೆ.