ಸಿಲಿಕಾನ್ ಸಿಟಿ ಮಂದಿಗೆ ಇಲ್ಲಿದೆ ಒಂದು ಪ್ರಮುಖ ಅಲರ್ಟ್! ನಾಳೆ, ಅಂದರೆ ಸೆಪ್ಟೆಂಬರ್ ಮೂರರಂದು, ಬೆಂಗಳೂರಿನ ಹಲವು ಪ್ರಮುಖ ಏರಿಯಾಗಳಲ್ಲಿ ಬರೋಬ್ಬರಿ ನಾಲ್ಕು ಗಂಟೆಗಳ ಕಾಲ ಕರೆಂಟ್ ಇರೋದಿಲ್ಲ. ಹೌದು, ಬೆಸ್ಕಾಂ ಹಾಗೂ ಕೆಪಿಟಿಸಿಎಲ್ ತುರ್ತು ನಿರ್ವಹಣಾ ಕಾರ್ಯವನ್ನು ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ, ನಾಳೆ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಕೇಳಿಬಂದಿದೆ. ಹಾಗಾದರೆ, ಎಲ್ಲೆಲ್ಲಿ ಪವರ್ ಕಟ್ ಇರಲಿದೆ? ಇಲ್ಲಿದೆ ನೋಡಿ ಅದರ ಕಂಪ್ಲೀಟ್ ಡೀಟೇಲ್ಸ್.
ಪ್ರಮುಖವಾಗಿ ಎಚ್‍ಬಿಆರ್ ಲೇಔಟ್‌ನ 1, 2, 3 ಮತ್ತು 5ನೇ ಬ್ಲಾಕ್, ಅರ್ಕಾವತಿ ಲೇಔಟ್ ಹಾಗೂ ಎಚ್‍ಬಿಆರ್ ಸಿಗ್ನಲ್ ಸುತ್ತಮುತ್ತ ಕರೆಂಟ್ ಇರಲ್ಲ. ಇದರ ಜೊತೆಗೆ ಯಾಸಿನ್ ನಗರ, ಟೀಚರ್ಸ್ ಕಾಲೋನಿ, ಕೃಷ್ಣಾ ರೆಡ್ಡಿ ಲೇಔಟ್, ಕೆಜಿ ಹಳ್ಳಿ, ಜಲ ವಾಯು ವಿಹಾರ್, ಇನಾಯತ್ ನಗರ ಹಾಗೂ ವಿನೋಭಾ ನಗರದಲ್ಲಿಯೂ ಸಹ ವಿದ್ಯುತ್ ಸಂಪೂರ್ಣ ಕಡಿತವಾಗಲಿದೆ.
ಇನ್ನು ಕಮ್ಮನಹಳ್ಳಿ ಹಾಗೂ ಲಿಂಗರಾಜಪುರ ಭಾಗದ ಕಮ್ಮನಹಳ್ಳಿ ಮುಖ್ಯ ರಸ್ತೆ, ರಾಮಯ್ಯ ಲೇಔಟ್, ಕೀರ್ತಿ ಲೇಔಟ್, ಸಿಎಂಆರ್ ರಸ್ತೆ, ಜಾನಕಿರಾಮ್ ಲೇಔಟ್, ಬಿಡಿಎ ಲೇಔಟ್, ಥಾಮಸ್ ರಸ್ತೆ ಮತ್ತು ಸಂಗೊಳ್ಳಿ ರಾಯಣ್ಣ ರಸ್ತೆಯಲ್ಲಿ ಪವರ್ ಕಟ್ ಆಗಲಿದೆ.
ಹಾಗೇನೇ ಹೆಣ್ಣೂರು ಮತ್ತು ಥಣಿಸಂದ್ರ ಭಾಗದಲ್ಲಿ ಬರುವ ಗೋವಿಂದಪುರ ಮುಖ್ಯ ರಸ್ತೆ, ಟೆಲಿಕಾಂ ಲೇಔಟ್, ಪ್ರಕೃತಿ ಲೇಔಟ್, ಹೆಣ್ಣೂರು, ಆಯಿಲ್ ಮಿಲ್ ರಸ್ತೆ, ನಾಗವಾರ ಮುಖ್ಯ ರಸ್ತೆ, ಬಿಬಿಆರ್ ನಗರ, ಶಿರಡಿ ಸಾಯಿ ನಗರ, ಸಾರಾಯಿಪಾಳ್ಯ, ವಿನಾಯಕ ನಗರ ಹಾಗೂ ಅಶ್ವಥ್ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಮಧ್ಯಾಹ್ನ 12 ರಿಂದ ಸಂಜೆ 4ರವರೆಗೆ ಕರೆಂಟ್ ಇರೋದಿಲ್ಲ, ಹಾಗಾಗಿ ಮುನ್ನೆಚ್ಚರಿಕೆ ವಹಿಸಿ ಬೆಸ್ಕಾಂ ಸಿಬ್ಬಂದಿಗೆ ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.




