Bengaluru: ಬೆಂಗಳೂರಿನ ಬನಶಂಕರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನೋರ್ವ ತನ್ನ ಪತ್ನಿಯನ್ನು ರಾಜಕಾರಣಿಗಳ ಜತೆ ಮಲಗು ಎಂದು ಪೀಡಿಸಿದ್ದು, ಆಕೆ ಪೋಲೀಸರ ಸಹಾಯ ಕೋರಿದ್ದಾಳೆ. ತಾನು ಹೇಳಿದ ಮಾತು ಕೇಳದ್ದಕ್ಕೆ 6 ಬಾರಿ ತಲಾಖ್ ನೀಡಿದ್ದ ಈ ದುರುಳ, ಪತ್ನಿಗೆ ಅಬಾರ್ಷನ್ ಕೂಡ ಮಾಡಿಸಿದ್ದಾನೆಂದು ಆರೋಪಿಸಲಾಗಿದೆ. ಅಲ್ಲದೇ ಅತ್ತೆ ಮಾವನ ವಿರುದ್ಧ ಈ ಮಹಿಳೆ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದಾಳೆ. ಈಕೆ. ಹೇಳಿಕೆ ಮೇಲೆ ಬನಶಂಕರಿ ಪೋಲೀಸರು ದೂರು ದಾಖಲಿಸಿದ್ದಾರೆ.
2021ರಲ್ಲಿ ಈ ಮಹಿಳೆ ಯೂನಸ್ ಪಾಶಾ ಎಂಬಾತನನ್ನು ವಿವಾಹವಾಗಿದ್ದಳು. 6 ತಿಂಗಳು ಚೆನ್ನಾಗಿಯೇ ಸಂಸಾರ ನಡೆಸಿದ್ದ ಯೂನಸ್, ಬಳಿಕ ಅಪ್ಪ ಅಮ್ಮನ ಜತೆ ಸೇರಿ ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಿದ್ದ. ಅಲ್ಲದೇ ಆಕೆ ಗರ್ಭಿಣಿಯಾಗಿದ್ದಾಗ, ಮಗುವನ್ನು ತೆಗೆಸುವಂತೆ ಪೀಡಿಸಿದ್ದು, ಕಾಲಿಂದ ತುಳಿದು ಹಿಂಸೆ ಮಾಡಿದ್ದನು ಮತ್ತು ಗರ್ಭಪಾತ ಕೂಡ ಮಾಡಿಸಿದ್ದನೆಂದು ಮಹಿಳೆ ಆರೋಪಿಸಿದ್ದಾಳೆ.
ಅಲ್ಲದೇ ಯೂನಸ್ ನ ಕೆಲಸಗಳನ್ನು ಪತ್ನಿ ಪ್ರಶ್ನಿಸಿದರೆ, ಗನ್ ಹಿಡಿದು ಹತ್ಯೆ ಮಾಡಲು ಪ್ರಯತ್ನಿಸುತ್ತಿದ್ದ. ಹೆಚ್ಚು ತಕರಾರು ತೆಗೆದರೆ, ನಿನ್ನ ತವರು ಮನೆಯವರನ್ನು ಹತ್ಯೆ ಮಾಡುತ್ತೇನೆ ಎಂದು ಬೆದರಿಸುತ್ತಿದ್ದ. 2023ರಲ್ಲಿ ಮಾರಣಾಂತಿಕ ಹಲ್ಲೆ ಮಾಡಿದ್ದನೆಂದು ಸಂತ್ರಸ್ತೆ ಆರೋಪಿಸಿದ್ದಾಳೆ.
ಇನ್ನು ನನ್ನ ಪತಿಯೇ ವೇಶ್ಯಾವಾಟಿಕೆ ದಂಧೆ ನಡೆಸತ್ತಿದ್ದಾನೆ. ನನ್ನನ್ನು ಆತನ ಸ್ನೇಹಿತರ ಜತೆ, ರಾಜಕಾರಣಿಗಳ ಜತೆ ಮಲಗಲು ಹೇಳುತ್ತಾನೆ. ಇದರಿಂದ ಹೆದರಿ ನಾನು 2 ತಿಂಗಳ ಹಿಂದೆ ನನ್ನ ತವರು ಮನೆಗೆ ಓಡಿ ಬಂದೆ ಎಂದು ಸಂತ್ರಸ್ತೆ ಎಫ್‌ಐಆರ್‌ನಲ್ಲಿ ದಾಖಲಿಸಿದ್ದಾಳೆ. ಇದೀಗ ತಾಯಿಯನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಈ ಕಾರಣಕ್ಕೆ ಬನಶಂಕರಿ ಪೋಲೀಸ್ ಸ್ಟೇಶನ್‌ನಲ್ಲಿ ದೂರು ನೀಡಿದ್ದಾಳೆ.