Monday, October 27, 2025

Latest Posts

ಲಂಚ ಪಡೆಯುತ್ತಿದ್ದ ಬೆಸ್ಕಾಂ, ಕೆಐಎಡಿಬಿ ಅಧಿಕಾರಿಗಳು ಲೋಕಾಯುಕ್ತ ಬಲೆಗೆ

- Advertisement -

Bengaluru News: ಬೆಂಗಳೂರು: ವಿದ್ಯುತ್ ಸಂಪರ್ಕ ಬದಲಾವಣೆ ಮಾಡಲು ರೂ.7.50 ಲಕ್ಷ ಲಂಚ ಪಡೆಯುತ್ತಿದ್ದ ಆರೋಪದಡಿ ಬೆಸ್ಕಾಂ ಮುಖ್ಯ ಪ್ರಧಾನ ವ್ಯವಸ್ಥಾಪಕ ಎಂ.ಎಲ್. ನಾಗರಾಜ್ ಹಾಗೂ ಕಾರು ಚಾಲಕ ಮುರುಳಿಕೃಷ್ಣ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

‘ಬೆಸ್ಕಾಂ ಕಾರ್ಯಾಚರಣೆ (ಎಲೆಕ್ಟ್ರಿಕಲ್) ವಿಭಾಗದ ಎಂ.ಎಲ್. ನಾಗರಾಜ್ ಪರವಾಗಿ ಚಾಲಕ ಮುರುಳಿಕೃಷ್ಣ ರೂ.7.50 ಲಕ್ಷ ಲಂಚ ಪಡೆಯುತ್ತಿದ್ದರು. ಅದೇ ಸಂದರ್ಭದಲ್ಲಿ ದಾಳಿ ಮಾಡಿ ಪುರಾವೆ ಸಮೇತ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದರು.

‘ವಿದ್ಯುತ್ ಗುತ್ತಿಗೆದಾರ ಬಿ.ಎನ್. ಪ್ರತಾಪ್ ಅವರು ವಿದ್ಯುತ್ ಸಂಪರ್ಕವೊಂದನ್ನು ವಾಣಿಜ್ಯ ಬಳಕೆಯಿಂದ ಕೈಗಾರಿಕೆ ಬಳಕೆಗೆ ಬದಲಾವಣೆ ಮಾಡಲು ಕೋರಿದ್ದರು. ನಾಗರಾಜ್, ಲಂಚಕ್ಕೆ ಬೇಡಿಕೆ ಇರಿಸಿದ್ದರು. ಬೇಸತ್ತ ಪ್ರತಾಪ್ ಅವರು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. ಅದರನ್ವಯ ನಾಗರಾಜ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು’ ಎಂದು ಹೇಳಿದ್ದಾರೆ.

ಜನಸಾಮಾನ್ಯರ ಸಚಿವ ಸಂತೋಷ್‌ ಲಾಡ್‌ ರಿಂದ ಫುಲ್‌ಟೈಮ್‌ ʻಜನತಾ ದರ್ಶನʼ

‘ನಾವು ಐದಾರು ಜನ ಸೇರಿ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿಯಾಗಬೇಕೆಂದಿದ್ದೇವೆ’

ಬಿಎಸ್‌ವೈ ಫೋನ್‌ ರಿಸೀವ್‌ ಮಾಡದ ಸೋಮಣ್ಣ, ಯತ್ನಾಳ್‌ಗಿದೆಯಂತೆ ಸಿದ್ದು ಬೆಂಬಲ..?

- Advertisement -

Latest Posts

Don't Miss