ನಾವು ಸೇವಿಸುವ ಆಹಾರದಿಂದಲೋ, ವಾತಾವರಣದಿಂದಲೋ ಅಥವಾ ಅಥವಾ ನಾವು ಬಳಸುವ ನೀರಿನಿಂದಲೋ ನಮ್ಮ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿರುತ್ತದೆ. ಯಾವ ಶ್ಯಾಂಪೂ, ಎಣ್ಣೆ ಬಳಸಿದ್ರೂ ಅದು ಕಂಟ್ರೋಲಿಗೆ ಬರಲ್ಲ. ಕೆಮಿಕಲ್ ಯುಕ್ತ ಶ್ಯಾಂಪೂ ಬಳಸಿದ್ರೆ, ಕೂದಲು ಬರುವುದಕ್ಕಿಂತ, ಉದುರೋದೇ ಹೆಚ್ಚು. ಹಾಗಾಗಿ ಅಂಥ ಸಮಸ್ಯೆಗೆ ಇಂದು ಪರಿಹಾರವಾಗಿ ನಾವು ಒಂದು ಎಣ್ಣೆಯ ರೆಸಿಪಿಯನ್ನ ತಂದಿದ್ದೇವೆ. ಯಾವುದು ಆ ಹೇರ್ ಆಯಿಲ್ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಇವತ್ತು ನಾವು ಕಲೋಂಜಿ ಹೇರ್ ಆಯಿಲ್ ಮಾಡುವ ರೀತಿ ಮತ್ತು ಅದನ್ನು ಯಾವಾಗ ಬಳಸಬೇಕು ಅನ್ನೋದನ್ನ ಹೇಳಿ ಕೊಡಲಿದ್ದೇವೆ. ಕಲೋಂಜಿ ಕಪ್ಪು ಎಳ್ಳಿನ ರೀತಿ ಇರುತ್ತದೆ. ಇದನ್ನ ಕೆಲವು ತಿಂಡಿಗಳಲ್ಲೂ ಬಳಸುತ್ತಾರೆ. ಕಿರಾಣಿ ಅಂಗಡಿಗಳಲ್ಲಿ ಸುಲಭವಾಗಿ ಈ ವಸ್ತು ಸಿಗುತ್ತದೆ. ಒಂದು ಕಪ್ ತೆಂಗಿನ ಎಣ್ಣೆಗೆ ಎರಡು ಸ್ಪೂನ್ ಕಲೋಂಜಿ ಸೇರಿಸಿ, ಒಂದು ಗಾಜಿನ ಬಾಟಲಿಯಲ್ಲಿ ತುಂಬಿಸಿ . ಒಂದು ತಿಂಗಳು ಇದನ್ನ ಬಿಸಿಲಿನಲ್ಲಿಡಿ. ಮತ್ತು ಎರಡು ದಿನಕ್ಕೊಮ್ಮೆ ಈ ಗಾಜಿನ ಡಬ್ಬದಲ್ಲಿರುವ ಕಲೋಂಜಿ ಮತ್ತು ಎಣ್ಣೆಯನ್ನ ಸ್ಪೂನಿನಿಂದ ಕದಡುತ್ತಿರಿ.
ಹೀಗೆ ಮಾಡಿದರೆ ಕಲೋಂಜಿ ತೆಂಗಿನ ಎಣ್ಣೆಯಲ್ಲಿ ಸೇರಿ, ಕಲೋಂಜಿ ಎಣ್ಣೆ ತಯಾರಾಗುತ್ತದೆ. ಎಣ್ಣೆಯ ಕಲರ್ ಕೂಡಾ ಚೇಂಜ್ ಆಗಿರತ್ತೆ. ಈ ಎಣ್ಣೆಯನ್ನ ರಾತ್ರಿ ಮಲಗುವ ಮುನ್ನ ಎರಡು ಸ್ಪೂನ್ ತೆಗೆದುಕೊಂಡು ಕೊಂಚ ಬಿಸಿ ಮಾಡಿ, ಆರಿಸಿ ಹೇರ್ ಮಸಾಜ್ ಮಾಡಿಕೊಂಡು ಮಲಗಿ. ಮಾರನೇ ದಿನ ತಲೆ ಸ್ನಾನ ಮಾಡಿ. ತಲೆ ಸ್ನಾನ ಮಾಡುವಾಗ ಕೆಮಿಕಲ್ ಯುಕ್ತ ಶಾಂಪೂ ಬದಲು ಶಿಗೇಕಾಯಿ ಪುಡಿ ಬಳಸಿದರೆ ಉತ್ತಮ.