Sunday, May 19, 2024

Latest Posts

ಹಣ್ಣು ತಿನ್ನಲು ಸರಿಯಾದ ಸಮಯ ಯಾವುದು..? ಯಾವ ಸಮಯದಲ್ಲಿ ಹಣ್ಣು ತಿನ್ನಬಾರದು..?

- Advertisement -

ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಒಂದೊಂದು ಹಣ್ಣು ತಿನ್ನುವುದರಿಂದಲೂ ಒಂದೊಂದು ಪ್ರಯೋಜನಗಳಿದೆ. ಮನುಷ್ಯ ಹಲವು ದಿನಗಳ ಕಾಲ ಹಣ್ಣು ತಿಂದೇ ಆರೋಗ್ಯವಾಗಿರಬಹುದು. ಊಟಕ್ಕಿಂತ ಹೆಚ್ಚು ಹಣ್ಣು ಸೇವಿಸುವವರೇ ಆರೋಗ್ಯವಾಗಿ, ಸುಂದರವಾಗಿ ಇರ್ತಾರೆ. ಹಣ್ಣುಗಳು ಅಷ್ಟು ಲಾಭಕಾರಿಯಾಗಿದೆ. ಆದ್ರೆ ಈ ಹಣ್ಣುಗಳನ್ನ ತಿನ್ನಲು ಉತ್ತಮವಾದ ಸಮಯ ಯಾವುದು..? ಯಾವ ಸಮಯದಲ್ಲಿ ಹಣ್ಣುಗಳ ಸೇವನೆ ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಹಣ್ಣುಗಳನ್ನ ಮಧ್ಯಾಹ್ನದ ಹೊತ್ತು ಸೇವಿಸಬೇಕು. 11ಗಂಟೆಯಿಂದ ಮೂರು ಗಂಟೆಯೊಳಗೆ ಫ್ರೂಟ್ಸ್ ತಿನ್ನಬೇಕು. ಬೆಳಿಗ್ಗೆ ಕೂಡ ಹಣ್ಣುಗಳ ಸೇವನೆ ಮಾಡಬಹುದು. ಆದ್ರೆ ಮಾವಿನ ಹಣ್ಣು, ಬಾಳೆಹಣ್ಣು, ದ್ರಾಕ್ಷಿ ಹಣ್ಣು, ಚಿಕ್ಕು ಹಣ್ಣು, ಪೇರಲೆಹಣ್ಣುಗಳನ್ನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಯಾವುದೇ ಕಾರಣಕ್ಕೂ ತಿನ್ನಬೇಡಿ. ಕಿತ್ತಳೆ, ಸೇಬು, ಪಪ್ಪಾಯಿ, ದಾಳಿಂಬೆ ಹಣ್ಣನ್ನ ಖಾಲಿ ಹೊಟ್ಟೆಯಲ್ಲಿ ತಿನ್ನಬಹುದು.

ಆದ್ರೆ ಹಣ್ಣುಗಳನ್ನ ತಿನ್ನಲು ಸರಿಯಾದ ಸಮಯ ಅಂದ್ರೆ, 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯೊಳಗೆ ತಿನನ್ನಬೇಕು. ಇದರಿಂದ ನೀವು ಊಟ ಮಾಡುವಾಗ, ಅದರ ಪ್ರಮಾಣ ಕಡಿಮೆಯಾಗುತ್ತದೆ. ಯಾಕಂದ್ರೆ ನಿಮಗೆ ಹಣ್ಣು ತಿಂದೇ ಅರ್ಧ ಹೊಟ್ಟೆ ತುಂಬಿರುತ್ತದೆ. ಹಾಗಾಗಿ ಊಟದ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ನಿಮ್ಮ ತೂಕ ಕೂಡ ಕಡಿಮೆಯಾಗುತ್ತದೆ.  

ಆದ್ರೆ ಯಾವುದೇ ಕಾರಣಕ್ಕೂ ಸಂಜೆ ನಂತರ, ರಾತ್ರಿ ಹೊತ್ತು ಹಣ್ಣಿನ ಸೇವನೆ ಮಾಡಬೇಡಿ. ಕೆಲವರಿಗೆ ರಾತ್ರಿ ಹಣ್ಣಿನ ಸೇವನೆ ಮಾಡಿದ್ರೆ ಆರೋಗ್ಯ ಕೆಡುತ್ತದೆ. ಅಲ್ಲದೇ ರಾತ್ರಿ ಹಣ್ಣಿನ ಸೇವನೆ ಮಾಡಿದ್ರೆ, ದೇಹದಲ್ಲಿ ಗ್ಲುಕೋಸ್ ಪ್ರಮಾಣ ಹೆಚ್ಚುತ್ತದೆ. ಈ ಕಾರಣಕ್ಕೆ ರಾತ್ರಿ ಸಮಯದಲ್ಲಿ ಹಣ್ಣಿನ ಸೇವನೆ ಮಾಡಬಾರದು.

- Advertisement -

Latest Posts

Don't Miss