ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಹಾರರ್ ಸಿನಿಮಾಗಳ ಸದ್ದು ಕಡಿಮೆಯಾಗಿದೆ.. ಹೀಗಿರೋವಾಗ ಇದೀಗ ಹೊಸಬರ ತಂಡವೊಂದು ಹಾರರ್ ಥ್ರಿಲ್ಲರ್ ಕತೆಯನ್ನ ಹೇಳೋಕೆ ಬರ್ತಿದೆ.. ಬೇತಾಳ ಅನ್ನೋದು ಈ ಚಿತ್ರದ ಹೆಸರು.. ಈಗಾಗ್ಲೇ ಕೆಲ ಸಿನಿಮಾಗಳನ್ನ ನಿರ್ದೇಶನ ಮಾಡಿರುವ ನಿರ್ದೇಶಕ ಕಸ್ತೂರಿ ಜಗನ್ನಾಥ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.. ಇದು ಅವರ ನಿರ್ದೇಶನದ ಐದನೇ ಸಿನಿಮಾ..
ಬೇತಾಳ ಒಂದು ಕಾಮಿಡಿ ಹಾರರ್ ಸಬ್ಜೆಕ್ಟ್ ನ ಸಿನಿಮಾ.. ನಟರಾದ ಸ್ಮೈಲ್ ಶಿವು ಹಾಗೂ ಅನಿಕ್ ಈ ಚಿತ್ರದ ನಾಯಕರಾಗಿ ಕಾಣಿಸಿಕೊಳ್ತಿದ್ದಾರೆ.. ನಟ ಸ್ಮೈಲ್ ಶಿವು ಈ ಚಿತ್ರದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಪಾತ್ರದಲ್ಲಿ ನಟಿಸಿದ್ದಾರಂತೆ..ನಾಯಕ ತನ್ನ ಮನೆಯನ್ನ ಬದಲಿಸಿದಾಗ ಆ ಮನೆಯಲ್ಲಿ ದೆವ್ವದ ಕಾಟ ಶುರುವಾಗುತ್ತೆ.. ಅದಕ್ಕೆ ಕಾರಣ ಏನು..? ಮುಂದೆ ಆ ದೆವ್ವದ ಕಾಟದಿಂದ ಏನಾಗುತ್ತೆ ಅನ್ನೋದೇ ಈ ಚಿತ್ರದ ಇಂಟ್ರೆಸ್ಟಿಂಗ್ ಸ್ಟೋರಿ.. ಮತ್ತೊಬ್ಬ ನಾಯಕ ಅನಿಕ್ ಅವರೇ ಇಲ್ಲಿ ಬೇತಾಳವಾಗಿ ಹೆದರಿಸಲಿದ್ದಾರಂತೆ.. ಇನ್ನೂ ಈ ಸಿನಿಮಾದಲ್ಲಿ ಬಿಗ್ ಬಾಸ್ ಖ್ಯಾತಿಯ ನಟಿ ಸೋನು ಪಾಟೀಲ್ ಹಾಗೂ ನಟಿ ಕಾವ್ಯಾ ಗೌಡ ಇಬ್ಬರು ನಾಯಕಿಯರಾಗಿ ನಟಿಸಿದ್ದಾರೆ.. ಸೋನು ಪಾಟೀಲ್ ಇಲ್ಲಿ ಬಬ್ಲಿ ಹುಡುಗಿ ಕ್ಯಾರೆಕ್ಟರ್ ಪ್ಲೇ ಮಾಡಿದ್ದಾರಂತೆ.. ಕಾವ್ಯಾ ಅವರು ಈಗಾಗ್ಲೇ ಕಟ್ಟುಕತೆ, ಶಾಲಿನಿ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ..
ಇದು ಹಾರರ್ ಸಿನಿಮಾ ಆಗಿರೋದ್ರಿಂದ ಸಾಕಷ್ಟು ಸಿಜಿ ವರ್ಕ್ ಕೂಡ ಇರಲಿದ್ಯಂತೆ.. ಈ ಚಿತ್ರದಲ್ಲಿ ನಾಲ್ಕು ಫೈಟ್ ಹಾಗೂ ಮೂರು ಸಾಂಗ್ಸ್ ಇರಲಿದ್ಯಂತೆ.. ಚಿತ್ರದ ಬಹುತೇಕ ಭಾಗವನ್ನು ಬೆಂಗಳೂರಿನಲ್ಲೇ ಶೂಟ್ ಮಾಡಲಾಗಿದ್ಯಂತೆ.. ಈಗಾಗ್ಲೇ ಚಿತ್ರದ ಟಾಕಿ ಪೋಷನ್ ಕಂಪ್ಲೀಟ್ ಮಾಡಿಕೊಂಡಿರುವ ಚಿತ್ರತಂಡ, ಹಾಡುಗಳ ಚಿತ್ರೀಕರಣ ಬಾಕಿ ಉಳಿಸಿಕೊಂಡಿದೆ..
ಮಡಿಕೇರಿ, ಸಕಲೇಶ್ ಪುರಗಳಲ್ಲಿ ಹಾಡುಗಳನ್ನ ಚಿತ್ರೀಕರಿಸಲು ಪ್ಲಾನ್ ಮಾಡಿಕೊಂಡಿದೆ ಚಿತ್ರತಂಡ.. ಕೊರೋನಾ ಇದ್ದ ಕಾರಣ ಚಿತ್ರೀಕರಣ ಕೊಂಚ ತಡವಾಗಿದ್ದು, ಅತೀ ಶೀಘ್ರದಲ್ಲೇ ಶೂಟಿಂಗ್ ಮಾಡಲಿದ್ದಾರಂತೆ.. ರಾಜ್ ಕಿಶೋರ್ ಈ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ.. ಇನ್ನೂ ಈ ಸಿನಿಮಾದಲ್ಲಿ ಕಲಾವಿದರಾದ ಬ್ಯಾಂಕ್ ಜನಾರ್ಧನ್, ಮೈಸೂರು ರಮಾನಂದ್ ಕೂಡ ಮುಖ್ಯ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.. ಸ್ಮೈಲ್ ಶಿವು ಅವರು ಈ ಚಿತ್ರದಲ್ಲಿ ನಟಿಸೋದ್ರ ಜೊತೆಗೆ ತಮ್ಮದೇ ಭೂಮಿಕ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ಚಿತ್ರವನ್ನ ನಿರ್ಮಾಣವನ್ನೂ ಮಾಡಿದ್ದಾರೆ.. ಸದ್ಯ ತಮ್ಮ ಬೇತಾಳ ಸಿನಿಮಾ ಬಗ್ಗೆ ಒಂದಷ್ಟು ಸುದ್ದಿಗಳನ್ನ ತಿಳಿಸೋ ಮೂಲಕ ಕುತೂಹಲ ಮೂಡಿಸಿರುವ ಚಿತ್ರತಂಡ ಚಿತ್ರಮಂದಿರಗಳು ತೆರೆದ ನಂತ್ರ ಅತೀ ಶೀಘ್ರದಲ್ಲೇ ಚಿತ್ರವನ್ನೂ ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದೆ..
ಚಂದನ.ಎಸ್, ಸಿನಿಮಾ ಬ್ಯೂರೋ, ಕರ್ನಾಟಕ ಟಿವಿ