Sunday, September 8, 2024

Latest Posts

ಲವ್ಲಿನಾ ದುಮ್ಮಾನ ನಿವಾರಿಸಲು ಕ್ರಮ

- Advertisement -

ಹೊಸದಿಲ್ಲಿ: ಕಾಮನ್‍ವೆಲ್ತ್ ಗೇಮ್ಸ್‍ಗೆ ತೆರಳಿರುವ ಭಾರತೀಯ ಬಾಕ್ಸರ್ ಲವ್ಲಿನಾ ಬೋರ್ಗೋಹೈನ್ ತಮಗೆ ತನ್ನ ಕೋಚ್ ಜತೆ ತರಬೇತಿ ನಡೆಸಲು ಅವಕಾಶ ಕಲ್ಪಿಸಲಾಗುತ್ತಿಲ್ಲ ಹಾಗೂ ಅಕಾರಿಗಳಿಂದ ಮಾನಸಿಕ ಕಿರುಕುಳ ಎದುರಿಸುತ್ತಿದ್ದೇನೆ ಎಂದು ದೂರಿಕೊಂಡ ಬೆನ್ನಿಗೇ ಅವರ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಲಾಗಿದೆ.

ಲವ್ಲಿನಾ ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಹವಾಲು ತೋಡಿಕೊಂಡ ಹಿನ್ನೆಲೆಯಲ್ಲಿ ಈ ವಿಷಯದ ಕುರಿತು ಗಮನ ಹರಿಸುವಂತೆ ಕ್ರೀಡಾ ಸಚಿವಾಲಯವು ಭಾರತೀಯ  ಒಲಿಂಪಿಕ್ ಸಂಘಕ್ಕೆ  (ಐಓಎ)ತಿಳಿಸಿದೆ.

ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಕಂಚು ಗೆದ್ದಿದ್ದ ಲವ್ಲಿನಾ, “ಬರ್ಮಿಂಗ್‍ಹ್ಯಾಂನಲ್ಲಿ ನನಗೆ ತನ್ನ ಕೋಚ್ ಸಂಜಯ ಗುರುಂಗ್ ಜತೆ ತರಬೇತಿ ನಡೆಸಲು ಅವಕಾಶ ನೀಡುತ್ತಿಲ್ಲ. ಇನ್ನೊಬ್ಬ ಸಹಾಯಕ ಕೋಚ್‍ರನ್ನು ಭಾರತಕ್ಕೆ ಕಳಿಸಲಾಗಿದೆ” ಎಂದು ದೂರಿಕೊಂಡಿದ್ದರು.

ಇದೀಗ ಭಾರತೀಯ ಬಾಕ್ಸಿಂಗ್ ಒಕ್ಕೂಟವು  ಲವ್ಲಿನಾ ಅವರಿಗೆ ಸಂಜಯ ಗುರುಂಗ್ ಜತೆ ತರಬೇತಿ ನಡೆಸಲು ಅವಕಾಶ ಕಲ್ಪಿಸಲಾಗುವುದು ಎಂದಿದೆ. ನಿರ್ದಿಷ್ಟ ಸಂಖ್ಯೆಯ ಕೋಚ್‍ಗಳಿಗಷ್ಟೇ ಕಾಮನ್‍ವೆಲ್ತ್ ಗ್ರಾಮದೊಳಕ್ಕೆ ಪ್ರವೇಶಿಸಲು ಅವಕಾಶ ಇರುವುದರಿಂದ ಸಂಜಯ ಗುರುಂಗ್ ಅವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿ ಅವರು ತರಬೇತಿಯಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುವುದು ಎಂದು ಬಿಎಫ್ಐ ತಿಳಿಸಿದೆ.

“ಸಂಜಯ ಗುರುಂಗ್ ಅವರು ತರಬೇತಿ ಶಿಬಿರದಲ್ಲಿ ಹಾಜರಿರುವಂತೆ ನೋಡಿಕೊಳ್ಳಲಾಗುವುದು. ಸಂಜಯ ಅವರು ಕಾಮನ್‍ವೆಲ್ತ್ ತಂಡವನ್ನು ಪ್ರತಿನಿಸುವಂತೆ ಮಾಡಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಐಓಎ  ಜತೆ ಬಿಎಫ್ಐ ಸಮಾಲೋಚಿಸುತ್ತಿದೆ. ಸದ್ಯಕ್ಕೆ ಸಂಜಯ ಅವರಿ

ಗೆ ಹೋಟೆಲೊಂದರಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ” ಎಂದು ಬಿಎಫ್ಐ ಪ್ರಕಟಣೆ ತಿಳಿಸಿದೆ.

ಲವ್ಲಿನಾ ಅವರ ಕೋಚ್‍ಗೆ ಅವಕಾಶ ನೀಡದಿರಲು ಕಾರಣವೇನು ಎಂಬುದನ್ನು ಬಿಎಫ್ಐ ವಿವರಿಸಿದೆ. ಶೇ. 33ರಷ್ಟು ಕ್ರೀಡಾಳುಗಳಿಗೆ ಮಾತ್ರ ಸಹಾಯಕ ಸಿಬ್ಬಂದಿಗಳನ್ನು ನೇಮಿಸಲು ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಅವಕಾಶವಿದೆ. ಒಟ್ಟು 12 ಮಂದಿ ಬಾಕ್ಸರ್‍ಗಳಿದ್ದು ಅವರಿಗೆ  ಕೇವಲ 4  ಸಹಾಯಕ ಸಿಬ್ಬಂದಿ ಮಾತ್ರ ನೇಮಿಸಬಹುದಾಗಿದೆ . ಹಾಗಾಗಿ ಲವ್ಲಿನಾರ ಕೋಚ್‍ಗಳನ್ನು ಹಿಂದಕ್ಕೆ ಕಳಿಸಲಾಗಿತ್ತು ಎಂದು ಅದು ತಿಳಿಸಿದೆ.

ಈ ಬೆಳವಣಿಗೆಗಳ ಬಳಿಕ ತಮಗೆ ತರಬೇತಿಗೆ ಹಾಜರಾಗಲು ಅಕೃತ ಮಾನ್ಯತಾ ಪತ್ರ  ದೊರಕಿದೆ ಎಂಬುದಾಗಿ ಇದೀಗ ಸಂಜಯ ಗುರುಂಗ್ ಕೂಡ ತಿಳಿಸಿದ್ದಾರೆ.

- Advertisement -

Latest Posts

Don't Miss