www.karnatakatv.net : ಬಿಜಿಎಮ್ ಕಿಂಗ್ ಎಂದೆ ಖ್ಯಾತಿ ಪಡೆದಿರುವ ರವಿ ಬಸ್ರೂರ್ ಈಗಾಗಲೆ ಕೆಜಿಎಫ್ ಚಿತ್ರದ ಮೂಲಕ ಪ್ಯಾನ್ ಇಂಡಿಯ ಮಟ್ಟದ ಸಂಗೀತ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ. ಕೆಜಿಎಫ್ ಚಾಪ್ಟೆರ್-1 ಭಾರತ ಮಾತ್ರವಲ್ಲದೆ ಇಡಿ ಪ್ರಪಂಚದಾದ್ಯoತ ಸದ್ದು ಮಾಡಿದ ಸಿನಿಮಾ. ಇನ್ನೂ ಕೆಜಿಎಫ್ ಚಾಪ್ಟೆರ್-1 ಚಿತ್ರದ ನಂತರ ಕೆಜಿಎಫ್ ಚಾಪ್ಟೆರ್-2, ಕಬ್ಜ, ಮಡ್ಡಿ, ಸಲಾರ್ ಗಳಂತ ಪ್ಯಾನ್ ಇಂಡಿಯಾ ಮಟ್ಟದ ಸಿನಿಮಾಗಳಿಗೆ ಮ್ಯೂಸಿಕ್ ಮಾಡ್ತಿದ್ದಾರೆ.
ಇದೀಗ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿರುವ ರವಿ ಬಸ್ರೂರ್, ಸಲ್ಮಾನ್ ಖಾನ್ ಚಿತ್ರ ‘ಆಂಟಿಮ್: ದಿ ಫೈನಲ್ ಟ್ರುತ್’ ಗಾಗಿ ಹಿನ್ನೆಲೆ ಸಂಗೀತ ನೀಡಲಿದ್ದಾರೆ.ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ರವಿ ಬಸ್ರೂರ್ ಅವರ ಅತ್ಯುನ್ನತ ಸ್ಕೋರ್ ಹಿನ್ನೆಲೆ ಸಂಗೀತವನ್ನು ಒಳಗೊಂಡಿದೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಬಗ್ಗೆ ಎಲ್ಲರೂ ಮಾತನಾಡುವಂತೆ ಮಾಡಿದೆ. ರವಿ ಬಸ್ರೂರ್ ಸಾಮಜಿಕ ಜಾಲತಾಣಗಳ ಮೂಲಕ ‘ಆಂಟಿಮ್: ದಿ ಫೈನಲ್ ಟ್ರುತ್’ ಚಿತ್ರದಲ್ಲಿ ಭಾಗಿಯಾಗಿರುವ ಸುದ್ದಿಯನ್ನು ಹಂಚಿಕೊoಡಿದ್ದಾರೆ.
ಮರಾಠಿ ಚಲನಚಿತ್ರ ‘ಮುಲ್ಶಿ ಪ್ಯಾಟರ್ನ್’ ಅನ್ನು ಆಧರಿಸಿದ ‘ಆಂಟಿಮ್: ದಿ ಫೈನಲ್ ಟ್ರುತ್’, ಮಹೇಶ್ ಮಂಜ್ರೇಕರ್ ನಿರ್ದೇಶಿಸಿದ್ದಾರೆ ಮತ್ತು ಸಲ್ಮಾನ್ ಖಾನ್, ಆಯುಷ್ ಶರ್ಮಾ, ಪ್ರಜ್ಞಾ ಜೈಸ್ವಾಲ್ ಮತ್ತು ಮಹಿಮಾ ಮಕ್ವಾನಾ ನಟಿಸಿದ್ದಾರೆ. ಸಲ್ಮಾನ್ ಖಾನ್ ಕೂಡ ಚಿತ್ರದ ನಿರ್ಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಅನೇಕರು ಅವರ ಸಂಗೀತವನ್ನು ಚಿತ್ರದ ಭವ್ಯ ಪ್ರದರ್ಶನಕ್ಕೆ ಪ್ರಮುಖ ಕೊಡುಗೆಯಾಗಿ ನೀಡಿದ್ದಾರೆ. ಪ್ರಶಾಂತ್ ನೀಲ್ ಅವರ ‘ಉಗ್ರಂ’ ಚಿತ್ರದ ಮೂಲಕ ಸಂಗೀತ ಸಂಯೋಜಕರಾಗಿ ರವಿ ಬಸ್ರೂರ್ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು ಮತ್ತು ಅಂದಿನಿoದ ಅನೇಕ ಯಶಸ್ವಿ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ನಿರ್ದೇಶಕ ನೀಲ್ ಅವರೊಂದಿಗಿನ ಸ್ನೇಹ-ಸಂಬoಧವನ್ನು ಮುಂದುವರಿಸಿದ ರವಿ ಬಸ್ರೂರ್, ‘ಕೆಜಿಎಫ್:ಚಾಪ್ಟೆರ್-೨’ ಮತ್ತು ‘ಸಲಾರ್’ ಎರಡಕ್ಕೂ ಸಂಗೀತ ನೀಡಲಿದ್ದಾರೆ. ಮುಂಬರಲಿರೊ ಶ್ರೀಮುರಳಿ ಅಭಿನಯದ ‘ಮದಗಜ’ ಚಿತ್ರಕ್ಕೂ ಕೂಡ ಬಸ್ರೂರ್ ಸಂಗೀತ ಸಂಯೋಜನೆ ಮಾಡಿದ್ದಾರೆ.
-ರೂಪೇಶ್, ಫಿಲಂ ಬ್ಯೂರೋ, ಕರ್ನಾಟಕ ಟಿವಿ.