Sunday, September 8, 2024

Latest Posts

‘ಭೈರತಿ ಸುರೇಶ್ ಅವರಿಗೆ ನಾನು ಯಾರು ಅಂತ ತಿಳಿಯಬೇಕಿಲ್ಲ ಜನರಿಗೆ ತಿಳಿದಿದೆ’

- Advertisement -

Kolar News: ಕೋಲಾರ: ಕೋಲಾರದಲ್ಲಿ ಸಂಸದ ಎಸ್ ಮುನಿಸ್ವಾಮಿ ಯಾರು ಎಂದು ಬೈರತಿ ಸುರೇಶ್‌ ಲೇವಡಿ ಮಾಡಿದ್ದು, ಈ ಬಗ್ಗೆ ಸಚಿವರಿಗೆ ಸಂಸದ ಎಸ್.ಮುನಿಸ್ವಾಮಿ ತಿರುಗೇಟು ನೀಡಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರಿಗೆ ಯಾವ ಇಲಾಖೆಯಲ್ಲಿ ಏನು ಯೋಜನೆ ಇದೆ..? ಯಾವ ರೀತಿ ಜನರಿಗೆ ತಲುಪಿಸಬೇಕು ಎಂದೆ ಗೊತ್ತಿಲ್ಲ. ಕೃಷಿ ಸಿಂಚನ ಯೋಜನೆ ಎಂದರೆ ಏನು ಅಂತಲೇ ಅವರಿಗೆ ಗೊತ್ತಿರಲ್ಲ.  ಯಾಕಂದ್ರೆ ಅವರು ಬೆಂಗಳೂರಿನಲ್ಲಿ ಹುಟ್ಟಿರುವುದು.  ಅವರ ತಂದೆ ಅವರು ಕೃಷಿ ಮಾಡಿದಾರೆ ಹೀಗಾಗಿ ಜಮೀನ್ದಾರರು.  ನಾವು ಅವರ ರೀತಿ ಕಮಿಷನ್ ಇಟ್ಟುಕೊಂಡು ಮಾಡುವ ಯೋಜನೆಗಳಿಲ್ಲ. ಸಂಸದರು ಯಾರು ಎಂದು ಅವರಿಗೆ ಗೊತ್ತಿದ್ದರಿಂದಲೇ ಸಿಎಂ ಕಾರ್ಯಕ್ರಮದಲ್ಲಿ ನನ್ನ ಮಾತನಾಡಲು ಬಿಟ್ಟಿಲ್ಲ.  ಬೈರತಿ ಸುರೇಶ್ ಅವರಿಗೆ ನಾನು ಯಾರು ಅಂತ ತಿಳಿಯಬೇಕಿಲ್ಲ ಜನರಿಗೆ ತಿಳಿದಿದೆ ಎಂದಿದ್ದಾರೆ.

ಹೌದು ನಾನು ಹಳೆ ಕಾಲದಲ್ಲೆ ಇದ್ದೀನಿ. ಇದು ನನ್ನ ಧರ್ಮ ನಾನು ಬಿಟ್ಟುಕೊಡೊಲ್ಲ. ಅವರು ಇಂಗ್ಲೀಷ್. ಹೀಗಾಗಿ ಹೊಸ ಹೊಸ ಸಂಸ್ಕೃತಿ ಇಟ್ಟುಕೊಂಡು ಹೋದರೆ, ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ವಾದ್ರಾ ಅವರು ಹತ್ತಿರಕ್ಕೆ ಸೇರಿಸುವುದು. ನಾವು ಎಲ್ಲ ಹಿಂದೂ. ನಾವು ಮುಂದು ಅದಕ್ಕೆ ದೇಶದ ಜನ ನಮ್ಮೊಂದಿಗೆ ಇದ್ದಾರೆ ಎಂದು ಟಾಂಗ್ ಮುನಿಸ್ವಾಮಿ ಟಾಂಗ್ ಕೊಟ್ಟಿದ್ದಾರೆ..

ಕಾಂಗ್ರೆಸ್ ಸರ್ಕಾರ ಇರುವುದು ಬರೀ ಮೂರು ತಿಂಗಳು ಅಷ್ಟೆ, ಮೂರೇ ತಿಂಗಳು ಆಯಸ್ಸು. ಒಬ್ಬೊಬ್ಬರೆ ಶಾಸಕರು ರಾಜಿನಾಮೆ ಕೊಡುತ್ತೇವೆ. ಹೈಕಮಾಂಡ್ ಗೆ ದೂರು ನೀಡುತ್ತೇವೆ ಎನ್ನುತಿದ್ದಾರೆ. ಸುಮಾರು 40 ಶಾಸಕರು ಸಿಎಂ ಹಾಗೂ ಡಿಸಿಎಂ ಮೇಲೆ ದೂರು ನೀಡಲು ಮುಂದಾಗಿದ್ದಾರೆ ಎಂದರು. ಇನ್ನು ಭಾಗ್ಯಲಕ್ಷ್ಮೀ ಯೋಜನೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ನೂರಾರು ಕೋಟಿ ಗುಳುಂ ಮಾಡಿದ್ದಾರೆ.  ‌ ನರೇಂದ್ರ ಮೋದಿ ಅವರು ಕೊಟ್ಟ ಹತ್ತು ಕೆ.ಜಿ  ಅಕ್ಕಿಯಲ್ಲಿ, ಸಿಎಂ ಒಂದು ಕೆಜಿ, ಫುಡ್ ಮಿನಿಸ್ಟರ್ ಒಂದು ಕೆಜಿ ಹೊಡೆಯುತ್ತಿದ್ದಾರೆ.

ಇದಕ್ಕಾಗಿ ಕೇಂದ್ರ ಹಾಗೂ ರಾಜ್ಯದ್ದು ಎಷ್ಟು ಕೆಜಿ ಎಂದು ಬಿಲ್ ಕೊಡಲಾಗುತ್ತಿದೆ. ಕೇಂದ್ರದ ಯೋಜನೆಗಳಿಗೆಲ್ಲಾ ಮೋನೊಗ್ರಾಮ್ ಹಾಕಲಾಗುತ್ತಿದೆ. ಇವರಾಟ ಇನ್ಮುಂದೆ ನಡೆಯೋಲ್ಲ ಮೂರೆ ತಿಂಗಳಲ್ಲಿ ಖತಂ ಆಗುತ್ತೆ.  ಬರುವಂತಹ ಲೋಕಸಭಾ ಚುನಾವಣೆಯಲ್ಲಿ‌ 28 ಕ್ಕೆ 28 ಸ್ಥಾನಗಳು ಗೆಲ್ಲುತ್ತೇವೆ ಎಂದು ಮುನಿಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ 35 ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ: ಇಮೇಲ್‌ನಲ್ಲಿತ್ತು ಮುಜಾಹಿದ್ದೀನ್ ಹೆಸರು

ಮಿಜೋರಾಂನಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಆಟ

8 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೆರಬೇಕು! ರಷ್ಯಾ ಮಹಿಳೆಯರಿಗೆ ಪುಟಿನ್ ಕರೆ

- Advertisement -

Latest Posts

Don't Miss