ಹಾಸನ: ಹಾಸನದಲ್ಲಿ ಸ್ವರೂಪ್ ಪರ ಭವಾನಿ ರೇವಣ್ಣ ಭರ್ಜರಿ ಪ್ರಚಾರ ನಡೆಸಿದ್ದಾರೆ. ಹಾಸನ ನೀಲುವಾಗಿಲು ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ಕೊಟ್ಟ ಭವಾನಿ ರೇವಣ್ಣ ಮತ್ತು ಮಾಜಿ ಸಚಿವ ಹೆಚ್.ಡಿ.ರೇವಣ್ಣ, ವಿಶೇಷ ಪೂಜೆ ಸಲ್ಲಿಸಿದರು.
ನಂತರ ಪ್ರಚಾರ ಕೈಗೊಂಡ ಭವಾನಿ ರೇವಣ್ಣ, ನಾವೆಲ್ಲಾ ದೇವೇಗೌಡರ ಹುಟ್ಟುಹಬ್ಬಕ್ಕೆ ಗೆಲುವನ್ನ ಅವರ ಪಾದಕ್ಕೆ ಅರ್ಪಿಸಬೇಕೆಂದು ಹೇಳುತ್ತ ಕಾರ್ಯಕರ್ತರನ್ನ ಹುರಿದುಂಬಿಸಿ ಭವಾನಿ ರೇವಣ್ಣ ಬಾಷಣ ಮಾಡಿದ್ದಾರೆ.
ಇವತ್ತಿರುವ ಹುಮ್ಮಸ್ಸು ನಾಡಿದ್ದು, ಮೇ 10ಕ್ಕೆ ಓಟ್ ಹಾಕುವ ದಿನವೂ ಇರಬೇಕು. ಹಾಸನದ ಜನತೆಗಾಗಿ ರೇವಣ್ಣ ಸಾಹೇಬ್ರು, ನಾನು, ಸ್ವರೂಪ್ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದ್ದೇವೆ. ಹಾಸನದಲ್ಲಿ 7ಕ್ಕೆ 7 ಜೆಡಿಎಸ್ ಪಕ್ಷದ ಸ್ಥಾನವನ್ನು ನಾವು ಗೆಲ್ಲಿಸಬೇಕು. ಯಾಕಂದ್ರೆ ನಿಮಗೆ ಗೊತ್ತಿದೆ ಮೇ 18ನೇ ತಾರೀಖು ದೇವೇಗೌಡರ ಹುಟ್ಟುಹಬ್ಬ. ದೇವೇಗೌಡರಿಗೆ ನಮ್ಮಿಂದ ಏನು ಉಡುಗೊರೆ ಕೊಡೋಕ್ಕೆ ಸಾಧ್ಯವಿದೆ..? ಹಾಗಾಗಿ ನಾವು ಹಾಸನ ಜಿಲ್ಲೆಯ 7ಕ್ಕೆ 7 ಸ್ಥಾನವನ್ನು ಗೆಲ್ಲಿಸಿ, ದೇವೇಗೌಡರ ಪಾದಕ್ಕೆ ಇಡಬೇಕು. ಅವರ ಹುಟ್ಟುಹಬ್ಬಕ್ಕೆ ಈ ಗೆಲುವನ್ನ ಉಡುಗೊರೆಯಾಗಿ ಕೊಡಬೇಕು ಎಂದು ಭವಾನಿ ರೇವಣ್ಣ ಹೇಳಿದ್ದಾರೆ.
ಮೋದಿ ಅವರ ಟೀಂ ಇಂಡಿಯಾದಲ್ಲಿ ಕರ್ನಾಟಕದ ಗರಿಷ್ಠ ಆಟಗಾರರು ಇರಲಿ: ಯೋಗಿ ಆದಿತ್ಯನಾಥ್
ಕಾಂಗ್ರೆಸ್ ಪಕ್ಷಕ್ಕೆ ನಿರಾಸೆ- ಜೆಡಿಎಸ್ ಭದ್ರಕೋಟೆ ಛಿದ್ರ: ನಳೀನ್ ಕುಮಾರ್ ಕಟೀಲ್