ಹಾಸನ : ಮುಂದೆ ನಡೆಯುವ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಹೆಚ್.ಪಿ. ಸ್ವರೂಪ್ ಅವರನ್ನ ಗೆಲ್ಲಿಸಲು ಬಿಸಿಲು-ಮಳೆ ಎನ್ನದೆ ಜೆಡಿಎಸ್ ಶಕ್ತಿ ಪ್ರದರ್ಶನದಲ್ಲಿ ಜನ ಸಾಗರವೇ ಹರಿದು ಬಂದಿದ್ದು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುಟುಂಬ ಒಟ್ಟಿಗೆ ಬೃಹತ್ ರೋಡ್ ಶೋನಲ್ಲಿ ಭಾಗವಹಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿ ಶಾಸಕ ಪ್ರೀತಂಗೌಡನನ್ನು ಸೋಲಿಸಲೇ ಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿ, ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ಜಿಲ್ಲಾ ಪಂಚಾಯತ್ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಭವಾನಿ ರೇವಣ್ಣ ಮಾತನಾಡಿ, ದುರಂಕಾರಿ ಶಾಸಕ ಪ್ರೀತಂ ಜೆ. ಗೌಡ ಅವರು ರೇವಣ್ಣನವರ ವಿರುದ್ಧ ಹಗುರವಾಗಿ ಮಾತನಾಡುತ್ತಾನೆ. ಪೊಲೀಸ್ ಠಾಣೆಯಲ್ಲಿ ಅವರ ಬೆಂಬಲಿಗರು ಜೆಡಿಎಸ್ ಕಾರ್ಯಕರ್ತರ ಹಾಗೂ ಸಾರ್ವಜನಿಕರ ವಿರುದ್ದ ಅನಗತ್ಯವಾಗಿ ಕಿರುಕುಳ ನೀಡಿ ಪ್ರಕರಣ ದಾಖಲು ಮಾಡುತ್ತಿದ್ದಾರೆ. ಇನ್ನು ನಗರದಲ್ಲಿ ಶೀಟ್ ಹಾಕಿಸಿದ್ದು, ಗಾಳಿ ಬಂದರೇ ಹಾರಿ ಹೋಗುತ್ತದೆ ಎಂದು ವ್ಯಂಗ್ಯವಾಗಿ ಮಾತನಾಡಿದರು. ನಾವು ನಮ್ಮ ಕುಟುಂಬ ೫೦ ವರ್ಷ ರಾಜಕೀಯದಲ್ಲಿ ಇದ್ದರೂ ಯಾರ ವಿರುದ್ದ ಹಗೆ ಸಾಧಿಸಿಲ್ಲ. ಹಾಸನ ಜಿಲ್ಲೆಯ ೭ ವಿಧಾನಸಭೆ ಕ್ಷೇತ್ರದಲ್ಲಿ ಜಯಗಳಿಸಿ ದೇವೇಗೌಡರ ಹುಟ್ಟುಹಬ್ಬದ ಕೊಡುಗೆ ಕೊಡುತ್ತೆವೆ ಎಂದು ಹೇಳಿದರು.
ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ಪಿ. ಸ್ವರೂಪ್ ಪ್ರಕಾಶ್ ಮಾತನಾಡಿ, ರೇವಣ್ಣ ಮತ್ತು ಕುಮಾರಸ್ವಾಮಿ ನನ್ನ ತಂದೆ. ನಿಧನದ ನಂತರ ನನ್ನ ಕುಟುಂಬಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಭವಾನಿ ರೇವಣ್ಣನವರು ತಾಯಿ ಸ್ಥಾನದಲ್ಲಿ ನಿಂತು, ಕುಮಾರಸ್ವಾಮಿಯವರಿಗೆ ಕರೆ ಮಾಡಿ ಟಿಕೆಟ್ ಕೊಡಿಸಿದರು. ಹಾಸನ ಶಾಸಕರು ರಸ್ತೆ ಮಾಡಿದ್ದಾರೆ ರೇವಣ್ಣನವರು ಅದರ ಹತ್ತು ಪಟ್ಟು ಹೆಚ್ಚು ಕೆಲಸ ಮಾಡಿದ್ದಾರೆ. ನಮ್ಮ ತಂದೆ ೪ ಬಾರಿ ಶಾಸಕರಾದರು. ಆದರೇ ಒಂದು ಬಾರಿ ಈ ರೀತಿ ನಡೆದುಕೊಳ್ಳಲಿಲ್ಲ. ನಮ್ಮ ಮನೆಯ ಆಸ್ತಿ ಹಾಗೂ ದುರಂಹಕಾರಿ ಶಾಸಕನ ಆಸ್ತಿ ಪರಿಶೀಲನೆ ಮಾಡಿ ಸತ್ಯ ತಿಳಿಯುತ್ತದೆ ಎಂದು ಸವಾಲು ಹಾಕಿದರು.
ಬೆಳಿಗ್ಗೆ ೧೦ ಗಂಟೆಯಿಂದಲೇ ಕಾರ್ಯಕರ್ತರು ಕಾದು ನಿಂತರು. ರಸ್ತೆಯಲ್ಲಿ ಸಾಗುತ್ತಲೆ ಇದ್ದರು. ಮದ್ಯಾಹ್ನವಾದರೂ ಮೆರವಣಿಗೆ ಸಾಗಲಿಲ್ಲ. ಅನೇಕರು ಊಟ ಇಲ್ಲದೇ ಉಪವಾಸ ಇರಬೇಕಾಯಿತು. ಮೆರವಣಿಗೆ ವೇಳೆ ಮಳೆ ಬಂದಾಗ ಬಹುತೇಕರು ಜಗ್ಗದೆ ಮಳೆಯಲ್ಲಿ ನೆನೆಯ ಬೇಕಾಯಿತು. ಗಂಟೆಗಟ್ಟಲೆ ರಸ್ತೆ ಬಂದ್ ಮಾಡಿದ್ದರಿಂದ ವಾಹನ ಚಾಲಕರು ಬದಲಿ ರಸ್ತೆಯಲ್ಲಿ ಸಾಗಬೇಕಾಯಿತು.
‘ಸೇಫ್ಟಿಗಾಗಿ ಹೆಂಡ್ತಿಗೂ ವಾಟ್ಸ್ ಅಪ್ ಕರೆ ಮಾಡ್ತಿನಿ, ಅಷ್ಟು ಭಯದ ವಾತಾವರಣವಿದೆ ‘
‘ಕೆ.ಆರ್.ಪೇಟೆಯಲ್ಲಿ ಬಿಜೆಪಿ ಖಾತೆ ತೆರೆದಿದ್ದೇವೆ. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪರ ಅಲೆ ಇದೆ’
‘ಕುಮಾರಸ್ವಾಮಿ ಒಬ್ಬ ದುರಾಹಂಕಾರಿ, ದುರಹಂಕಾರದ ಶಾಸಕ ಅಂದ್ರೆ ರವೀಂದ್ರ ಶ್ರೀಕಂಠಯ್ಯ’