Hassan News: ಹಾಸನ: ಇಂದು ಹಾಸನ ವಕೀಲರ ಸಂಘದಲ್ಲಿ ಭವಾನಿ ರೇವಣ್ಣ, ಪುತ್ರ, ಸಂಸದ ಪ್ರಜ್ವಲ್ ರೇವಣ್ಣ ಪರ ಮತನಾಚನೆ ಮಾಡಿದ್ದಾರೆ.
ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಲೋಕಸಭಾ ಚುನಾವಣೆ ಇದೆ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಪ್ರಜ್ವಲ್‌ರೇವಣ್ಣ ಅಭ್ಯರ್ಥಿಯಾಗಿದ್ದಾರೆ. ಹಾಸನದಲ್ಲಿ ವಕೀಲರ ಸಂಘದಲ್ಲಿ ವಕೀಲರನ್ನು ಭೇಟಿ ಮಾಡಿ ಪ್ರಚಾರ ಮಾಡಿದ್ದೇವೆ. ಎಲ್ಲರಿಗೂ ಮತ ಕೊಡಿ ಎಂದು ಕೇಳಿದ್ದೇವೆ. ಎಲ್ಲಾ ಕಡೆ ಚೆನ್ನಾಗಿದೆ ಅದರ ಬಗ್ಗೆ ಏನು ಅನುಮಾನ ಇಲ್ಲ ಎಂದಿದ್ದಾರೆ.
ಅಲ್ಲದೇ, ಕಳೆದ ಐದು ವರ್ಷದಿಂದ ಸಾಕಷ್ಟು ಗ್ರಾಂಟ್ ತಂದಿದ್ದಾರೆ. ಕೊರೊನಾ ಕಾರಣದಿಂದ ಎರಡು ಕೇಂದ್ರ ಸರ್ಕಾರ ಗ್ರಾಂಟ್ ಕೊಡಲಿಲ್ಲ. ಆಮೇಲೆ ಎಲ್ಲಾ ಕೆಲಸಗಳಿಗೂ ಗ್ರಾಂಟ್ ಕೊಟ್ಟಿದ್ದಾರೆ. ರೇವಣ್ಣ ಮಾಡಿರುವ ಕೆಲಸ ಕಣ್ಮುಂದೆ ನಿದರ್ಶನವಾಗಿ ನಿಂತಿದೆ. ಕೋರ್ಟ್, ಸಾರಿಗೆ ಬಸ್ ನಿಲ್ದಾಣ ರೇವಣ್ಣ ಅವರ ಕೊಡುಗೆ. ಕಳೆದ ವಾರ ನಿತಿನ್ ಗಡ್ಕರಿ ಬಂದಾಗ ರೇವಣ್ಣ ಅವರಿಗೆ ಕರೆ ಮಾಡಿ ಕಾರ್ಯಕ್ರಮಕ್ಕೆ ಕರೆಸಿಕೊಂಡಿದ್ದರು. ಹಾಸನ ಜಿಲ್ಲೆಗೆ 4500 ಕೋಟಿ ಗ್ರಾಂಟ್ ಕೊಟ್ಟಿದ್ದಾರೆ. ದೇವೇಗೌಡರು, ರೇವಣ್ಣ ಅವರು ಖುದ್ದಾಗಿ ಹೋಗಿ ಗಡ್ಕರಿ ಅವರನ್ನು ಭೇಟಿ ಮಾಡಲಾಗಿ ಹಾಸನಕ್ಕೆ ಗ್ರಾಂಟ್ ಕೊಟ್ಟಿದ್ದಾರೆ .ಅದು ಬಹಳ ಸಂತೋಷವಾದಂತಹ ವಿಷಯ ಎಂದು ಭವಾನಿ ರೇವಣ್ಣ ಹೇಳಿದ್ದಾರೆ.
ಮೋದಿಜಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ದಿನ ನಿತ್ಯ ನೋಡುತ್ತಿದ್ದೇವೆ. ಮೋದಿಯವರ, ದೇವೇಗೌಡರ, ಜನಗಳ ಆಶೀರ್ವಾದ ಬೇಡುತ್ತಾ ಪ್ರಜ್ವಲ್‌ರೇವಣ್ಣ ಅವರಿಗೆ ಮತ ಕೇಳುತ್ತಿದ್ದೇನೆ. ನಾನು ಎಲ್ಲಿಲ್ಲಿ ಹೋಗಲು ಸಾಧ್ಯವಾಗುತ್ತೆ ಅಲ್ಲಿ ಹೋಗಿ ಪ್ರಚಾರ ಮಾಡ್ತೇನೆ ಎಂದು ಭವಾನಿ ರೇವಣ್ಣ ಹೇಳಿದ್ದಾರೆ.
ಭಾರತೀಯ ವಿದ್ಯಾರ್ಥಿ ಯುಎಸ್‌ನಲ್ಲಿ ಶವವಾಗಿ ಪತ್ತೆ: 2024ರ 9ನೇ ಕೊ*ಲೆ ಕೇಸ್ ಇದು..
ಟಿಕೇಟ್ ಕೈ ತಪ್ಪಿದ್ದಕ್ಕೆ ಬಿಜೆಪಿ ಸಂಸದ ಮುನಿಸ್ವಾಮಿ ಏನು ಹೇಳಿದರು ಗೊತ್ತಾ..?