ಹಾಸನ: ಹಾಸನ ಹೊಳೆನರಸೀಪುರ ಜೆಡಿಎಸ್ ಸಮಾವೇಶದಲ್ಲಿ ಭವಾನಿ ರೇವಣ್ಣ ಮಾತನಾಡಿದ್ದು, ಪತಿ ರೇವಣ್ಣರ ಅಭಿವೃದ್ಧಿ ಬಗ್ಗೆ ಗುಣಗಾನ ಮಾಡಿದ್ದಾರೆ.
ನಮ್ಮ ಕ್ಷೇತ್ರದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ಇದೆ. ಜಾನುವಾರುಗಳಿಗು ಉತ್ತಮ ಚಿಕಿತ್ಸೆ ಸೌಲಭ್ಯ ಇದೆ. ಶಿಕ್ಷಣ ಕ್ಷೇತ್ರದಲ್ಲಿ ರೇವಣ್ಣ ಅವರು ಮಹತ್ತರ ಸಾಧನೆ ಮಾಡಿದ್ದಾರೆ. ಒಂದು ತಾಲೂಕು ಕ್ಷೇತ್ರಕ್ಕೆ, ಲಾ ಕಾಲೇಜು ಕೊಡುವುದಿಲ್ಲ. ಆದರೆ ರೇವಣ್ಣರ ಕೃಪಾ ಕಟಾಕ್ಷದಿಂದ ಲಾ ಕಾಲೇಜ್ ಕೂಡ ಇದೆ. ಒಂದೇ ತಾಲೂಕಿನಲ್ಲಿ 28 ಹಾಸ್ಟಲ್‌ಗಳನ್ನ ನಿರ್ಮಿಸಲಾಗಿದೆ. ಶಿಕ್ಷಣ ಆರೋಗ್ಯಕ್ಕೆ ರೇವಣ್ಣ ಒತ್ತು ಕೊಟ್ಟಿದ್ದಾರೆ ಎಂದು ಭವಾನಿ ರೇವಣ್ಣ ಹೇಳಿದ್ದಾರೆ.
ಅಲ್ಲದೇ, ರೇವಣ್ಣ ಅವರು ಇಂತಹ ಒಂದು ಕೆಲಸ ಮಾಡಿಲ್ಲ ಎಂದು ಹೇಳೊ ಹಾಗೇ ಇಲ್ಲಾ. ಎಲ್ಲವನ್ನು ಅವರು ಮಾಡಿದ್ದಾರೆ. ಮುಸ್ಲಿಂ ಹೆಣ್ಣು ಮಕ್ಕಳಿಗಾಗಿಯೇ ಶಾಲೆ ಕಟ್ಟಿಸಿಕೊಟ್ಟಿದಾರೆ. 99 ಕೋಟಿ ಯಷ್ಟು ಮೊತ್ತದ ಹಣವನ್ನು ಮಳೆ ಹಾನಿಗಳಿಂದ ಮನೆ ಹಾನಿಗೆ ಪರಿಹಾರ ಕೊಡಿಸಿದ್ದಾರೆ. ಆದರೆ, ಕೆಲವರು ಹತ್ತು ರುಪಾಯಿ ಕೆಲಸ ಮಾಡದೆ ಅಪ ಪ್ರಚಾರ ಮಾಡೋಕೆ ಹೊರಟಿದ್ದಾರೆ ಎಂದು ವಿರೋಧಿಗಳ ವಿರುದ್ಧ ಭವಾನಿ ವಾಗ್ದಾಳಿ ನಡೆಸಿದ್ದಾರೆ.
ನಾವು ರೇವಣ್ಣಗೇ ಮತ ನೀಡಬೇಕು ಎಂದು ಡಿಸೈಡ್ ಮಾಡಬೇಕು. ಸಾಹೇಬ್ರು ಏಳಕ್ಕೆ ಏಳು ಗೆಲ್ಲಿಸಬೇಕು ಎಂದು ಹೊರಟಿದ್ದಾರೆ.. ಹಾಗಾಗಿ ನಾನು ನೀವು ಹೊಳೆನರಸೀಪುರಕ್ಕೆ ಸೀಮಿತವಾಗಿ ಇರಬೇಡಿ ಅಂತ ಹೇಳಿದಿನಿ. ನೀವೆಲ್ಲಾ ಸಹೋದರರು ಇದ್ದಂತೆ, ನೀವು ನಿಮ್ಮ ವ್ಯಾಪ್ತಿಯಲ್ಲಿ ಕೆಲಸ ಮಾಡಿ. ಕೆಲವು ದಿನ ಹೊಳೆನರಸೀಪುರಕ್ಕೆ ಬಂದು ಟೀ ಕುಡಿದು ದೋಸೆ ತಿನ್ನೋದು ಬಿಡಿ. ನಿಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಿ ಎಂದು ಭವಾನಿ ರೇವಣ್ಣ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ನನಗೆ ಬಹಳ ಖುಷಿ ಆಗಿದೆ ತುಂಬಾ ಜನ ಬಂದಿದಿರಿ. ಮಂಜಣ್ಣ ಅವರು ನಮ್ಮ ಅಭ್ಯರ್ಥಿ ಆಗಿದಾರೆ. ಹಳ್ಳಿ ಮೈಸೂರು ಭಾಗದ ಜನರು ಅವರಿಗೆ ಮತ ಕೊಡಿ. ಮುಂದೆ ಅವರು ರೇವಣ್ಣ ಅವರ ಜೊತೆ ಕೈ ಜೋಡಿಸುತ್ತಾರೆ. ಯಾರೂ ಕೂಡ ಅಸಮಾಧಾನ ಇಟ್ಟುಕೊಳ್ಳಬೇಡಿ. ಮಂಜಣ್ಣ ಅವರು ಕೂಡ ನಮ್ಮ ಕಾರ್ಯಕರ್ತರನ್ನು ಪ್ರೀತಿಯಿಂದ ಕಾಣಿ ಎಂದು ಭವಾನಿ ರೇವಣ್ಣ ಸಲಹೆ ನೀಡಿದ್ದಾರೆ.
ಬಿಜೆಪಿ ಮುಖಂಡ ಪದ್ಮರಾಜ್ ಕಾಂಗ್ರೆಸ್ ಸೇರ್ಪಡೆ, ಪಕ್ಷದಲ್ಲಿ ಬಿರುಗಾಳಿ ಆರಂಭ ಎಂದ ಡಿಕೆಶಿ..
ವರ್ತೂರ್ ಪ್ರಕಾಶ್‌ಗೆ ಬಿಜೆಪಿ ಟಿಕೇಟ್ ಸಿಕ್ಕಿದ್ದಕ್ಕೆ ಬೆಂಬಲಿಗರಿಂದ ಸಂಭ್ರಮಾಚರಣೆ..

