Telangana News: ಊಟದಲ್ಲಿ ಮಟನ್ ಸಾಂಬಾರ್‌ನಲ್ಲಿ ಮೂಳೆ ಸಿಗಲಿಲ್ಲವೆಂಬ ಕಾರಣಕ್ಕೆ ಮಧುಮಗ ವಿವಾಹವನ್ನೇ ಕ್ಯಾನ್ಸಲ್ ಮಾಡಿದ ಘಟನೆ, ತೆಲಂಗಾಣದಲ್ಲಿ ನಡೆದಿದೆ.
ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವಧು ವರರ ಒಪ್ಪಿಗೆ ಮೇರೆಗೆ ನಿಶ್ಚಿತಾರ್ಥ ನಡೆದಿತ್ತು. ಈ ಸಂಭ್ರಮಕ್ಕಾಗಿ ಹೆಣ್ಣಿನ ಮನೆಯವರು ಔತಣ ಕೂಟವನ್ನು ಏರ್ಪಡಿಸಿದ್ದರು. ಈ ವೇಳೆ ಮಟನ್ ಸಾಂಬಾರ್ ಮಾಡಿಸಲಾಗಿತ್ತು. ಆದರೆ ವರನಿಗೆ ಊಟದಲ್ಲಿ ಮಟನ್ ಸಾಂಬಾರ್ ಬಡಿಸಿದಾಗ, ಅದರಲ್ಲಿ ಮೂಳೆ ಸಿಗಲಿಲ್ಲವೆಂಬ ಕಾರಣಕ್ಕೆ, ಈ ದುರಹಂಕಾರಿ ಗಲಾಟೆ ಮಾಡಿದ್ದಾನೆ.
ಈ ವೇಳೆ ಇಬ್ಬರ ಮನೆಯವರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಈ ಜಗಳ ಪೊಲೀಸ್ ಠಾಣೆ ಮೆಟ್ಟಲೇರುವವರೆಗೂ ತಲುಪಿತ್ತು. ಪೊಲೀಸರು, ಅಧಿಕಾರಿಗಳು, ವರನಿಗೆ ಎಷ್ಟೇ ಮನವಿ ಮಾಡಿದರೂ, ಇದೊಂದು ದೊಡ್ಡ ಅಪರಾಧವೆಂಬಂತೆ, ವರ ಧಿಮಾಕು ತೋರಿಸಿದ್ದಾನೆ. ತನಗೆ ವಧುವಿನ ಮನೆಯವರು ಬೇಕಂತಲೇ ಅವಮಾನ ಮಾಡಿದ್ದಾರೆ. ಅವಮಾನ ಮಾಡಲೆಂದೇ, ಮಟನ್ ಸಾಂಬಾರಿನಲ್ಲಿದ್ದ ಮೂಳೆ ಬಡಿಸಲಿಲ್ಲವೆಂದು ಕ್ಯಾತೆ ತೆಗೆದಿದ್ದಾನೆ.
ಹೀಗೆ ಮದುವೆ ರದ್ದಾಗಿದ್ದು, ಹಲವರು ಇಷ್ಟು ಸಣ್ಣ ವಿಷಯಕ್ಕೆ ಮದುವೆ ರದ್ದಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರು ವರನ ದುರಹಂಕಾರಕ್ಕೆ ಛೀಮಾರಿ ಹಾಕಿದ್ದಾರೆ.
‘ಬಿಜೆಪಿಗರು ಅಪಪ್ರಚಾರ ಮಾಡುತ್ತಿರುವುದು ಅವರ ಹತಾಶ ಮನಸ್ಥಿತಿಗೆ ಹಿಡಿದ ಕನ್ನಡಿ ಅಷ್ಟೇ’




