International News: ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮದ ವೇಳೆ ಅಮೆರಿಕದ ಜನಪ್ರಿಯ ರ್ಯಾಪ್ ಗಾಯಕ ಕ್ಯಾನೇ ವೆಸ್ಟ್ ತಮ್ಮ ಪತ್ನಿ ಬಿಯಾಂಕಾ ಅವರೊಂದಿಗೆ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮಕ್ಕೆ ಬಂದಿದ್ದರು. ಈ ವೇಳೆ ಇಡೀ ದೇಹವನ್ನು ಕವರ್ ಮಾಡಿದ್ದ ಬಿಯಾಂಕಾ ಪಾಪರಾಜಿಗಳ ಎದುರು ಬಂದಾಗ, ಕವರ್ ಮಾಡಿದ್ದ ಬಟ್ಟೆಯನ್ನು ತೆಗೆದಿದ್ದಾರೆ. ಈ ವೇಳೆ ಅವರ ಇಡೀ ಬೆತ್ತಲೆ ದೇಹ ಅನಾವರಣಗೊಳಿಸಿದ್ದಾರೆ.
ಅವರು ಒಳ ಉಡುಪನ್ನು ಧರಿಸದೇ, ಇಡೀ ಬೆತ್ತಲೆ ದೇಹ ಕಾಣುವಂತೆ ಟ್ರಾನ್ಸಪರೆಂಟ್ ಆಗಿರುವ ಪ್ಲಾಸ್ಟಿಕ್ ರೀತಿಯ ಉಡುಪು ಧರಿಸಿದ್ದರು. ವಿದೇಶದಲ್ಲಿ ನಡೆಯುವ ಅವಾರ್ಡ್ ಫಂಕ್ಷನ್ ಕಾರ್ಯಕ್ರಮ, ರೆಡ್ ಕಾರ್ಪೆಟ್ ಕಾರ್ಯಕ್ರಮ ಇತ್ಯಾದಿಯಲ್ಲಿ ವಿದೇಶಿ ಸೆಲೆಬ್ರಿಟಿಗಳು ಬೋಲ್ಡ್ ಆಗಿ ಬಟ್ಟೆ ಧರಿಸಿ ಬರುತ್ತಾರೆ. ಆದರೆ ಬಿಯಾಂಕಾ ಈ ಎಲ್ಲ ನಿಯಮಗಳನ್ನು ದಾಟಿ ಬೆತ್ತಲೆಯಾಗಿಯೇ ಕಾರ್ಯಕ್ರಮಕ್ಕೆ ಬಂದಿದ್ದಳು.
ಕೆಲ ಹೊತ್ತಿನ ಬಳಿಕ, ಕ್ಯಾನೇ ಮತ್ತು ಬಿಯಾಂಕಾ ನಡೆಗೆ ವಿರೋಧ ವ್ಯಕ್ತವಾಗಿದ್ದು, ಇಬ್ಬರನ್ನೂ ಕಾರ್ಯಕ್ರಮದಿಂದ ಹೊರಕ್ಕೆ ಕಳುಹಿಸಲಾಯಿತು. ಇನ್ನು ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಬಿಯಾಂಕಾ ನಡೆಗಿಂತ ಹೆಚ್ಚಾಗಿ, ಕ್ಯಾನೇ ನಡೆಗೆ ತೀವ್ರ ಖಂಡನೆ ವ್ಯಕ್ತವಾಗಿದೆ. ಪತ್ನಿಯನ್ನು ಹದ್ದು ಬಸ್ತಿನಲ್ಲಿ ಇಡಬೇಕಾಗಿದ್ದ ಪತಿ, ಇದ್ಯಾವ ರೀತಿಯ ಸ್ವಾತಂತ್ರ್ಯ ನೀಡಿದ್ದಾನೆಂದು ನೆಟ್ಟಿಗರು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ, ಇವರಿಬ್ಬರನ್ನು ಅರೆಸ್ಟ್ ಮಾಡಿ ಎಂದು ಒತ್ತಾಯಿಸಿದ್ದಾರೆ.