Hassan News: ಹಾಸನ: ಹಾಸದ ಅರಸೀಕೆರೆಯಲ್ಲಿ ಇಂದು ಹೈಡ್ರಾಮಾ ನಡೆದಿದ್ದು, ಜನರು ಇವರೆಲ್ಲ ಶಾಸಕರಾ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏಕೆಂದರೆ, ಸಚಿವರ ಎದುರೇ, ಶಾಸಕರಿಬ್ಬರು ಜನತಾ ದರ್ಶನದ ವೇಳೆ ಕಿತ್ತಾಡಿಕೊಂಡಿದ್ದಾರೆ.
ಅರಸೀಕೆರೆ ತಾಲೂಕು ಮಟ್ಟದಲ್ಲಿ ನಡೆದ ಸಭೆಯಲ್ಲಿ, ಸಚಿವ ರಾಜಣ್ಣ, ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಬೇಲೂರು ಶಾಸಕ ಹೆಚ್.ಕೆ.ಸುರೇಶ್ ಸೇರಿ ಹಲವರು ಭಾಗಿಯಾಗಿದ್ದರು. ಈ ವೇಳೆ ಸ್ಟೇಜ್ ಮೇಲೆಯೇ ಶಿವಲಿಂಗೇಗೌಡ ಮತ್ತು ಸುರೇಶ್ ನಡುವೆ, ಎಣ್ಣೆ ಮಳಿಗೆ ವಿಚಾರವಾಗಿ, ಪರ ವಿರೋಧ ಚರ್ಚೆ ನಡೆದಿದೆ.
ಬೇಲೂರು ಶಾಸಕರನ್ನು ಶಿವಲಿಂಗೇಗೌಡ, ಹೊರ ನಡಿ ಎಂದು ಹೇಳಿ, ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ, ತಾವು ಜನತಾ ದರ್ಶನ ಸಭೆಯಲ್ಲಿದ್ದೇವೆ ಎಂಬುದನ್ನೂ ಮರೆತು, ಪರಸ್ಪರ ಮೈಕ್ ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಬೇಲೂರಿನ ಶಾಸಕ ಸುರೇಶ್, ಹಾಸನ ಬೇಲೂರಿನ ಜಾವಗಲ್ ಹೋಬಳಿ ವಿಧಾನ ಸಭೆ ಕ್ಷೇತ್ರ ಬೇಲೂರಿಗೆ ಸೇರುತ್ತೆ. ಆದ್ರೆ ಆಡಳಿತಾತ್ಮಕ ಅರಸೀಕೆರೆಗೆ ಸೇರುತ್ತೆ ಎಂದು ತಮ್ಮ ಕ್ಷೇತ್ರದ ಕಷ್ಟವನ್ನು ಹೇಳಿಕೊಳ್ಳುತ್ತಿದ್ದರು.
ಅಲ್ಲದೇ, ನಿಮ್ಮ ಕಾಂಗ್ರೆಸ್ ಸರ್ಕಾರ ಐದು ಭಾಗ್ಯ ಕೊಡ್ತಿದೆ. ಅದು ಒಳ್ಳೆದು. ಆದ್ರೆ ಅದರ ಜೊತೆಗೆ ಮದ್ಯ ಅಂಗಡಿ ಕೊಡೊಕ್ಕೆ ಮುಂದಾಗಿ, ಹೆಣ್ಣು ಮಕ್ಕಳ ತಾಳಿ ಕಿತ್ಕೊಳೊ ಭಾಗ್ಯ ಕೊಡ್ತಿದಿರಿ ಎಂದು ಬೇಲೂರು ಶಾಸಕ ಸುರೇಶ್ ಹೇಳಿದ್ದಾರೆ. ಹೀಗೆ ಹೇಳಿದ ಬಳಿಕ ಜಗಳ ಶುರುವಾಗಿದ್ದು, ಸಚಿನ ರಾಜಣ್ಣರ ಎದುರೆ, ವೇದಿಕೆ ಮೇಲೆ ಇಬ್ಬರೂ ವಾಗ್ವಾದ ಶುರು ಮಾಡಿದ್ದಾರೆ. ಬಳಿಕ ಪೊಲೀಸರು ಮಧ್ಯಸ್ತಿಕೆ ವಹಿಸಿ, ಜಗಳ ನಿಲ್ಲಿಸಿದ್ದಾರೆ.
BJP Protest; ಚಿತ್ರದುರ್ಗದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರ ಬೃಹತ್ ಪ್ರತಿಭಟನೆ..!
ಐಟಿ, ಇಡಿ, ಸಿಬಿಐ ಕೇಂದ್ರದ ವ್ಯಾಪ್ತಿಯಲ್ಲಿವೆ: ಅವರು ಮಾಡಿದ್ದೇ ಆಟ ಎಂದ ಲಾಡ್