Bidar: ಬೀದರ್: ಯುವಕ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೀದರ್‌ನಲ್ಲಿ ನಡೆದಿದೆ. ಬೀದರ್‌ನ ಭಾಲ್ಕಿಯಲ್ಲಿ ಈ ದುರಂತ ಸಂಭವಿಸಿದ್ದು, 21 ವರ್ಷದ ಸುದರ್ಶನ ರತ್ಕಲೆ ಸಾವನ್ನಪ್ಪಿದ ಯುವಕನಾಗಿದ್ದಾನೆ.
ಹುಡುಗಿ ವಿಚಾರದಲ್ಲಿ ಗಲಾಟೆಯಾಗಿ ಯುವಕ ಈ ನಿರ್ಧಾರಕ್ಕೆ ಬಂದಿದ್ದಾನೆ ಎನ್ನುವ ಸಂಶಯ ವ್ಯಕ್ತವಾಗಿದೆ. ಓರ್ವ ಯುವತಿಯ ವಿಚಾರವಾಗಿ ಯುವಕರ ನಡುವೆ ಪೈಪೋಟಿ ನಡೆದು, ಈ ಘಟನೆ ಸಂಭವಿಸಿದೆ ಎಂದು ಮೃತನ ಪೋಷಕರು ಆರೋಪಿಸಿದ್ದಾರೆ.
ಈ ವಿಚಾರವಾಗಿ ಹೇಳಿಕೆ ನೀಡಿರುವ ಸುದರ್ಶನ್ ತಾಯಿ ಲಕ್ಷ್ಮೀ, ನನ್ನ ಮಗನನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಆದರೆ ರೈಲ್ವೆ ಪೋಲೀಸರು ಮಾತ್ರ ಇದು ಹತ್ಯೆ ಅಲ್ಲಾ ಆತ್ಮಹತ್ಯೆ ಎಂದೇ ಹೇಳುತ್ತಿದ್ದಾರೆ. ಆದರೆ ಸುದರ್ಶನ ಮನೆಯವರು ಮಾತ್ರ ಇದು ಹತ್ಯೆ, ಈ ಬಗ್ಗೆ ತನಿಖೆ ನಡೆಯಲೇಬೇಕು ಎಂದು ಬೀದರ್ ನ ರೈಲ್ವೇ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಪೋಲೀಸರು ಕೇಸ್ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.




