National Political News: ಲೋಕಸಭೆ ಚುನಾವಣೆಗೆ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಈ ಬಾರಿ ಗೆಲ್ಲಲೇಬೇಕು. ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಲೇಬೇಕು ಎಂದು ಬಿಜೆಪಿ ಪಣತೊಟ್ಟಿದೆ. ಆದರೆ ಬಿಜೆಪಿಗೆ ಬಿಗ್ ಶಾಕ್ ನೀಡಿರುವ ಬ್ರಿಜೇಂದ್ರ ಸಿಂಗ್, ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಬ್ರಿಜೇಂದ್ರ, ಕಾಂಗ್ರೆಸ್ ಸೇರಿದ್ದಾರೆ. ನವದೆಹಲಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಭೇಟಿ ನೀಡಿರುವ ಬ್ರಿಜೇಂದ್ರ, ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅಲ್ಲದೇ, ಇಷ್ಟು ದಿನ ಬಿಜೆಪಿಯಲ್ಲಿರಲು ಅವಕಾಶ ನೀಡಿದ್ದಕ್ಕೆ, ಪ್ರಧಾನಿ ಮೋದಿ ಮತ್ತು ಅಮಿತ್‌ಷಾಗೆ ಧನ್ಯವಾದ ತಿಳಿಸಿದ್ದಾರೆ.
ಹಿಸಾರ್ ಕ್ಷೇತ್ರದಿಂದ ಬ್ರಿಜೇಂದ್ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಕಣಕ್ಕಿಳಿಯಲಿದ್ದಾರೆಂಬ ಸುದ್ದಿ ಇದೆ. ಈಗಾಗಲೇ ಬಿಜೆಪಿ ಸಂಸದರಾಗಿದ್ದ ಬ್ರಿಜೇಂದ್ರ, ಟಿಕೇಟ್ ಸಿಗುವ ಬಗ್ಗೆ ಗೊಂದಲಗಳಿದ್ದ ಕಾರಣ, ಕಾಂಗ್ರೆಸ್ ಸೇರ್ಡೆಯಾಗಿದ್ದಾರೆನ್ನಲಾಗಿದೆ.
ಆಂಧ್ರಪ್ರದೇಶ ಲೋಕಸಭೆ ಚುನಾವಣೆಗೆ ಬಿಜೆಪಿ, ಟಿಡಿಪಿ,ಜೆಎಸ್‌ಪಿ ಮೈತ್ರಿ ಸ್ಪರ್ಧೆ
ಜಪಾನ್‌ನಲ್ಲಿ ಅಮೀರ್ ಖಾನ್ ಮಗ ಜುನೈದ್ ಖಾನ್ ಜೊತೆ ಸಾಯಿ ಪಲ್ಲವಿ ಪಾರ್ಟಿ..

