Patna: ಪ್ರಸಿದ್ಧ ಕೋಚ್ ಆಗಿರುವ ಖಾನ್ ಸರ್ ಕೋಚಿಂಗ್ ಸೆಂಟರ್ ಮುಂದೆ 12ಕ್ಕೂ ಹೆಚ್ಚು ಮುಸುಕುಧಾರಿಗಳು ನಿನ್ನೆ ತಡರಾತ್ರಿ ದಾಳಿ ನಡೆಸಿದ್ದಾರೆ. ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೋಲೀಸರು ಧಾವಿಸಿದ್ದರು.
ಮುಸುಕುಧಾರಿಗಳು ಗುಂಡಿನ ದಾಳಿ ನಡೆಸಿದ್ದು, ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದಕ್ಕೂ ಮುನ್ನ ಈ ದುರುಳಲು ಕೋಚಿಂಗ್ ಸೆಂಟರ್ ಮೇಲೆ ಕಲ್ಲಿನ ದಾಳಿ ನಡೆಸಿದ್ದು, ಕಟ್ಟಡದ ಮುಂದೆ ಇದ್ದ ಪೋಸ್ಟರ್, ಫ್ಲೆಕ್ಸ್‌ಗಳನ್ನು ಸಹ ಹರಿದಿದ್ದಾರೆ. ಈ ದಾಳಿಯಲ್ಲಿ ಓರ್ವ ಸಿಬ್ಬಂದಿ ಗಾಯಗ“ಂಡಿದ್ದಾರೆ. ಸದ್ಯ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್‌ತಿದೆ.
ಇನ್ನು ಘಟನೆ ನಡೆದ ಬಳಿಕ ಸ್ಥಳಕ್ಕೆ ಪೋಲೀಸರು ಧಾವಿಸಿ, ಖಾನ್ ಸರ್ ಬಳಿ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಆಗ ಉತ್ತರಿಸಿದ ಖಾನ್ ಸರ್, ಬಿಹಾರ ಪೋಲೀಸ್ ನೇಮಕಾತಿ ಪರೀಕ್ಷೆಯಲ್ಲಿ ನಮ್ಮ ಕೋಚಿಂಗ್ ಸೆಂಟರ್ ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. ಹೀಗಾಗಿ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆದಿತ್ತು. ಬಳಿಕ ಕೆಲವರು ಬಂದು ಈ ಬಗ್ಗೆ ಬೆದರಿಕೆ ಹಾಕಿದ್ದರು ಎಂದು ಹೇಳಿದ್ದಾರೆ.
ಹಾಗೆ ಬೆದರಿಕೆ ಹಾಕಿದ್ದವರೇ ಈ ದಾಳಿ ನಡೆಸಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿದೆ. ಸದ್ಯ ಸ್ಥಳೀಯ ಪೋಲೀಸ್ ಸ್ಟೇಶನ್‌ನಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ಪೋಲೀಸರು ತನಿಖೆ ನಡೆಸಿದ್ದಾರೆ.




