Uttar Pradesh: ಸೆಂಟ್ರಲ್ ಜೈಲು ನೋಡಬೇಕು ಎಂದು ಪತ್ನಿ ಹಣೆಗೆ ಗನ್ ಇಟ್ಟ ಪತಿ: ಆಮೇಲೇನಾಯ್ತು..?

Uttar Pradesh: ಈ ಪ್ರಪಂಚದಲ್ಲಿ ಅದೆಂಥೆಂಥ ಜನರಿರುತ್ತಾರೆ ಅಂದ್ರೆ, ತಮ್ಮ ಖುಷಿಗಾಗಿ, ತಮ್ಮ ಸ್ವಾರ್ಥಕ್ಕಾಗಿ ಯಾವ ಕೆಲಸ ಮಾಡಲು ಕೂಡ ಹೇಸುವುದಿಲ್ಲ. ಅಂಥ ಪತಿಯೋರ್ವ ಸೆಂಟ್ರಲ್ ಜೈಲು ನೋಡಬೇಕು ಎಂದು, ಪತ್ನಿಯ ಹಣೆಗೆ ಗನ್ನಿಟ್ಟು, ಹತ್ಯೆ ಮಾಡುವುದಾಗಿ ಬೆದರಿಸಿದ್ದಾನೆ.

ಉತ್ತರಪ್ರದೇಶದ ಇಟಾವಾ ಎಂಬಲ್ಲಿ ಈ ಘಟನೆ ನಡೆದಿದೆ. ಇದನ್ನು ನಾವು ವಿಚಿತ್ರ ಘಟನೆ ಅಂತಲೇ ಹೇಳಬಹುದು. ಏಕೆಂದರೆ, ಈ ಬಗ್ಗೆ ವೀಡಿಯೋ ವೈರಲ್ ಆಗಿದ್ದು, ಕೋಮಲ್ ಸಿಂಗ್ ಎಂಬ ವ್ಯಕ್ತಿ ಈ ರೀತಿ ಹತ್ಯೆ ಬೆದರಿಕೆ ಹಾಕಿದ್ದಾನೆ. ಆತನ ಹೇಳಿಕೆಯನ್ನು ಪೋಲೀಸರು ವೀಡಿಯೋ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

ಇದರಲ್ಲಿ ಆತ ಹೇಳಿದ್ದೇನೆಂದರೆ, ಆತನಿಗೆ ಪತ್ನಿಯ ಮೇಲೆ ಯಾವುದೇ ದ್ವೇಷವಿರಲಿಲ್ಲ. ಆದರೆ ಆತನಿಗೆ ಸೆಂಟ್ರಲ್ ಜೈಲು ನೋಡಬೇಕು ಎಂಬ ಆಸೆ ಇತ್ತಂತೆ. ಹಾಗಾಗಿ ಆತ ಪತ್ನಿಯ ಹಣೆಗೆ ಗನ್ನಿಟ್ಟು, ಆಕೆಗೆ ಹತ್ಯೆ ಮಾಡುವ ಬೆದರಿಕೆ ಹಾಕಿದ್ದಾನೆ.

ಬಳಿಕ ಪೋಲೀಸ್ ಸ್ಟೇಶನ್‌ಗೆ ಹೋಗಿ, ನಾನು ಈ ರೀತಿ ಮಾಡಿದೆ, ನನ್ನನ್ನು ಬಂಧಿಸಿ ಎಂದು ಶರಣಾಗಿದ್ದಾನೆ. ಹೀಗಾಗಿ ಪೋಲೀಸರಿಗೆ ಆತನ ಪತ್ನಿಯನ್ನು ರಕ್ಷಿಸಲು ಹೆಚ್ಚು ಕಷ್ಟವಾಗಲಿಲ್ಲ. ಇನ್ನು ಈತನಿಗೆ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ ಎಂದು ಅರಿತ ಪೋಲೀಸರು ವೈದ್ಯರ ಬಳಿ ಚಿಕಿತ್ಸೆ ನೀಡಲು ನಿರ್ಧರಿಸಿದ್ದಾರೆ.

ಈ ವೀಡಿಯೋ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಹಲವು ರೀತಿಯ ಕಾಮೆಂಟ್ಸ್ ಹಾಕಿದ್ದಾರೆ. ಕೆಲವರು ಹಾಸ್ಯ ಮಾಡಿದರೆ, ಇನ್ನು ಕೆಲವರು ಇದು ಆತಂಕಕಾರಿ ವಿಷಯ ಎಂದಿದ್ದಾರೆ.

About The Author