Wednesday, September 11, 2024

Latest Posts

ಭಾರತಕ್ಕೆ ಬಿಗ್ ಶಾಕ್: ವಿನೀಶ್ ಫೋಗಟ್ ಒಲಂಪಿಕ್ ಚಿನ್ನದ ಪದಕದ ಕನಸು ಭಗ್ನ: 100 ತೂಕದಿಂದ ಅಮಾನತು

- Advertisement -

Sports: ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ಪಂದ್ಯದಲ್ಲಿ ಎಲ್ಲ ದೇಶದವರನ್ನೂ ಮಣಿಸಿ, ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದ ಭಾರತದ ಆಟಗಾರ್ತಿ ವಿನೀಶ್ ಫೋಗಟ್‌ ಆಟದಿಂದಲೇ ಅಮಾನತಾಗಿದ್ದಾರೆ. ಇದಕ್ಕೆ ಕಾರಣ, ಒಂದು ರಾತ್ರಿಯಲ್ಲಿ ಹೆಚ್ಚಿದ ಇವರ ದೇಹದ ತೂಕ.

ಹೌದು. ನಿನ್ನೆ ರಾತ್ರಿ ವಿನೀಶ್ 2 ಕೆಜಿ ಹೆಚ್ಚಾಗಿದ್ದರು. ಆದರೆ, ಬೆಳಗ್ಗಿನ ವರ್ಕೌಟ್ ಬಳಿಕ ಒಂದೂವರೆ ಕೆಜಿ ತೂಕ ಇಳಿಸಿದ್ದಾರೆ. ಆದರೆ 100 ಗ್ರಾಂ ತೂಕ ಹೆಚ್ಚಾದ ಕಾರಣಕ್ಕೆ, ವಿನೀಶ್‌ರನ್ನು ಫೈನಲ್ ಪಂದ್ಯದಿಂದ ಅಮಾನತು ಮಾಡಲಾಗಿದೆ. ಇಷ್ಟು ಕಷ್ಟ ಪಟ್ಟು ಫೈನಲ್ ತಲುಪಿದರೂ, ಚಿನ್ನ ಅಥವಾ ಬೆಳ್ಳಿ ವಿನೀಶ್‌ ಪಾಲಿಗೆ ದೂರ ಉಳಿದಿದೆ. ಇವರೊಂದಿಗೆ ಫೈನಲ್‌ನಲ್ಲಿ ಸೆಣೆಸಬೇಕಿದ್ದ ಅಮೆರಿಕದ ಆಟಗಾರ್ತಿಗೆ ಚಿನ್ನದ ಪದಕ ಸಿಗಲಿದೆ. ಆದರೆ ವಿನೀಶ್‌ಗೆ ಮಾತ್ರ ಯಾವುದೇ ಪದಕ ಸಿಗುವುದಿಲ್ಲ.

ಇನ್ನು ದೇಹದ ತೂಕ ಇಳಿಸಲು ವಿನೀಶ್ 1 ಗಂಟೆ ಕಾಲಾವಕಾಶ ಕೇಳಿದ್ದಾರೆ. ಆದರೂ ಕೂಡ ಆಕೆಗೆ ಅವಕಾಶ ಕೊಡಲಾಗಿಲ್ಲ. ಆದರೆ ಪ್ರಧಾನಿ ಮೋದಿ ವಿನೀಶ್ ಪರವಾಗಿ ನಿಂತಿದ್ದು, ಯಾವುದೇ ಕಾರಣಕ್ಕೂ ಪ್ರಯತ್ನ ಬಿಡಬೇಡಿ. ಆಟವನ್ನು ಬಿಟ್ಟುಕೊಡಬೇಡಿ ಎಂದಿದ್ದಾರೆ.

- Advertisement -

Latest Posts

Don't Miss