Bigboss:
ಬಿಗ್ ಬಾಸ್ ಓಟಿಟಿಯಲ್ಲಿ ಸದ್ದುಗದ್ದಲದ ನಡುವೆ ಇದೀಗ ಒಂದು ವಾರ ಮುಗಿಯುತ್ತಲೇ ಬಂದಿದೆ. ಒಂದೆಡೆ ಪರ್ಫಾಮೆಂಟ್ಸ್ ಪೈಪೋಟಿ ಮತ್ತೊಂದೆಡೆ ಗಾಸಿಪ್ ಗ್ಯಾಂಗ್ ಆಸ್ತಿ ಜಗಳ ಇವುಗಳ ನಡುವೆ ನಾಯಕತ್ವ ವೋಟ್ ಗಳು ಸ್ಪರ್ಧಿಗಳಿಗೆ ಬಿಸಿ ಮುಟ್ಟಿಸುತ್ತಿದೆ.
ಎಲಿಮಿನೇಷನ್ ತೂಗುಗತ್ತಿ ಎಲ್ಲರ ತಲೆಮೇಲೆ ನೇತಾಡಲು ಶುರು ಮಾಡಿದೆ. ಕೆಲವರಿಗೆ ಪ್ರೊಮೋಷನ್ ಇನ್ನು ಕೆಲವರಿಗೆ ಡಿಮೋಷನ್ ಸಕ್ಕಿದೆ. ಬಿಗ್ ಬಾಸ್ ಮನೆಯಲ್ಲಿ ಸದ್ಯ 3 ಬದಲಾವಣೆಗಳಾಗಿವೆ.
ಅಕ್ಷತಾ ಜೈಲು ಪಾಲು:[AKSHATHA]
ಬಿಗ್ ಬಾಸ್ ಸ್ಪರ್ಧಿ ಅಕ್ಷತಾ ಸೆರೆವಾಸದಲ್ಲಿದ್ದಾರೆ. ಹೌದು ಬಿಗ್ ಬಾಸ್ ಮನೆಯಲ್ಲಿ ಪರ್ಫಾರ್ಮೆಂಟ್ಸ್ ತುಂಬಾನೆ ಮುಖ್ಯ ಆದರೆ ಅಕ್ಷತಾ ಮಾತ್ರ ಅದ್ಯಾಕೋ ಈ ವಾರ ಯಾರೊಂದಿಗೂ ಸರಿಯಾಗಿ ಬೆರೆಯದೇ ಇದ್ದುದೇ ಅವರಿಗೆ ಜನರ ವೋಟ್ ಕಡಿಮೆಯಾಗಲು ಕಾರಣವಾಯಿತು.ಬಿಗ್ ಬಾಸ್ ಮನೆಯವರ ಬೆಂಬಲ ದೊರೆಯದೆ ಈಗ ಮನೆಯೊಳಗೆ ಜೈಲುಪಾಲಾಗಿದ್ದಾರೆ. ಅಕ್ಷತಾಗೆ ಈ ವಾರ ಡಿನಮೋಷನ್ ಸಿಕ್ಕಿದೆ.
ಅರ್ಜುನ್ ಗೌಡ ಕ್ಯಾಪ್ಟನ್ ಆದ್ರು:[ARJUN GOWDA]
ಮೊದಲ ವಾರದಲ್ಲಿ ಅರ್ಜುನ್ ಗೌಡ ಕ್ಯಾಪ್ಟನ್ ಪಟ್ಟವನ್ನು ಅನಂಕರಿಸಿದ್ದಾರೆ. ಅರ್ಜುನ್ ರಮೇಶ್, ಸೋಮಣ್ಣ ಮಾಚಿಮಾಡ, ಚೈತ್ರಾ ಹಳ್ಳಿಕೇರಿ ಹಾಗೂ ನಂದು ಕ್ಯಾಪ್ಟನ್ಸಿ ಟಾಸ್ಕ್ನಲ್ಲಿದ್ದರು. ಅತಿ ಹೆಚ್ಚು ಅಂಕ ಪಡೆದು ಅರ್ಜುನ್ ಕ್ಯಾಪ್ಟನ್ ಆದರು. ಹೀಗೆ ಅವರು‘ಬಿಗ್ ಬಾಸ್ ಒಟಿಟಿ’ಯ ಮೊದಲ ಸೀಸನ್ನ ಮೊದಲ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ನಿದ್ರಿಸೋಕೆ ಈಗ ಕ್ಯಾಪ್ಟನ್ ರೂಂ ಕೂಡ ದೊರೆಯಿತು.
ರಾಕೇಶ್ ಉತ್ತಮ ಪರ್ಫಾಮರ್:[RAKESH]
ವೀಕೆಂಡ್ ಗೂ ಮುನ್ನ ಉತ್ತಮ ಸ್ಪರ್ಧಿ ಯಾರೆಂಬುವುದು ಆಯ್ಕೆ ಮಾಡಲಾಗುತ್ತದೆ.ರಾಕೇಶ್ ಉತ್ತಮ ಆಟಗಾರರಾಗಿ ಆಯ್ಕೆಯಾಗಿದ್ದಾರೆ. ಎಲ್ಲರ ಜೊತೆ ಬೆರೆತು ಉತ್ತಮ ಪ್ರದರ್ಶನ ನೀಡಿದ ಇವರಿಗೆ ಅಧಿಕ ಓಟ್ ದೊರೆತು ಉತ್ತಮ ಪರ್ಫಾಮರ್ ಎಂಬ ಹೆಗ್ಗಳಿಕೆಗೆ ಭಾಜನರಾದ್ರು.
‘ವಾಮನ’ಗೆ ಜೋಡಿಯಾದ ರೀಷ್ಮಾ ನಾಣಯ್ಯ…ಶೋಕ್ದಾರ್ ಧ್ವನೀರ್ ಗೌಡಗೆ ಕೊಡಗಿನ ಬೆಡಗಿ ನಾಯಕಿ
ಬಿಗ್ ಬಾಸ್ ಮನೆಯೊಳಗೆ ಗುರೂಜಿ ಗರಂ ಆಗಿದ್ದೇಕೆ…?! ಉದಯ್ಗೆ ಗುರೂಜಿ ವಾರ್ನಿಂಗ್..!