ಕಿರುತೆರೆಯ ಕಿನ್ನರಿ, ಬಿಗ್ ಬಾಸ್ ನ ರಾಯಲ್ ಶೆಟ್ಟಿ ಉರುಫ್ ಭೂಮಿ ಶೆಟ್ಟಿ ಮಜಾ ಭಾರತ ಶೋನಿಂದ ಹೊರ ಬಂದಿದ್ದಾರೆ. ಬಿಗ್ ಬಾಸ್ ನಿಂದ ಹೊರ ಬಂದ ತಕ್ಷಣ ಭೂಮಿ ಮಜಾ ಭಾರತ ಕಾಮಿಡಿ ಶೋ ಮೂಲಕ ಸಣ್ಣಪರದೆಯ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಉತ್ತಮ ನಿರೂಪಣೆಯೊಂದಿಗೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ರಾಯಲ್ ಶೆಟ್ಟಿ ಏಕಾಏಕಿ ಮಜಾ ಭಾರತ ಶೋನಿಂದ ಹೊರ ಬಂದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.

ಅಭಿಮಾನಿಗಳಿಗೆ ಭೂಮಿ ಹೇಳಿದ್ದೇನು..?
ಮಜಾ ಭಾರತ ಶೋನಿಂದ ಹೊರಬಂದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭೂಮಿ ಶೆಟ್ಟಿ ರಿವೀಲ್ ಮಾಡಿದ್ದಾರೆ. ಅಧಿಕೃತವಾಗಿ ಇದು ನನ್ನ ಕೊನೆಯ ಮಜಾ ಭಾರತದ ಎಪಿಸೋಡ್. ನೀವೆಲ್ಲರೂ ನನ್ನ ನಿರೂಪಣೆಯನ್ನು ಎಂಜಾಯ್ ಮಾಡಿದ್ದಿರೆಂದು ಭಾವಿಸಿದ್ದೇನೆ. ನಿಮ್ಮೆಲ್ಲರ ಬೆಂಬಲ ಹೀಗೆ ಮುಂದುವರೆಯಲಿ. ಎಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ತೆಲುಗು ಸೀರಿಯಲ್ ‘ಕಿನ್ನರಿ‘
ಮಜಾ ಭಾರತ ಶೋನಿಂದ ಭೂಮಿ ಶೆಟ್ಟಿ ಹೊರಬರಲು ಕಾರಣ ಕಿರುತೆರೆ ಜಗತ್ತು. ಯಸ್ ಭೂಮಿ ಧಾರಾವಾಹಿ ಲೋಕಕ್ಕೆ ರೀ-ಎಂಟ್ರಿ ಕೊಡಲಿದ್ದಾರೆ. ಹಾಗಂತ ರಾಯಲ್ ಶೆಟ್ಟಿ ಕನ್ನಡ ಸೀರಿಯಲ್ ನಲ್ಲಿ ನಟಿಸ್ತಿಲ್ಲ. ಬದಲಾಗಿ ತೆಲುಗು ಧಾರಾವಾಹಿ ಭೂಮಿಯನ್ನು ಹುಡುಕಿಕೊಂಡು ಬಂದಿದೆ. ತೆಲುಗಿನ ‘ಅತ್ತರಿಂಟ್ಲೋ ಅಕ್ಕ ಚೆಲ್ಲೆಲ್ಲು’ ಧಾರಾವಾಹಿಯಲ್ಲಿ ಭೂಮಿ ಭೂಮಿ ಶೆಟ್ಟಿ ನಟಿಸ್ತಿದ್ದಾರೆ. ಈ ಧಾರಾವಾಹಿಯಲ್ಲಿ ನಟಿ ಚೈತ್ರಾ ರೈ ಪಾತ್ರದ ಬಿಟ್ಟುಹೋದ ಪಾತ್ರದಲ್ಲಿ ಭೂಮಿ ಶೆಟ್ಟಿ ನಟಿಸಲಿದ್ದಾರಂತೆ.

ಅಂದಹಾಗೇ
ಭೂಮಿ ಶೆಟ್ಟಿ ತೆಲುಗು ಕಿರುತೆರೆ ಲೋಕ ಹೊಸದೇನಲ್ಲ. ಈ ಹಿಂದೆ ನಿನ್ನೆ ಪೆಳ್ಳಡತಾ
ಸೀರಿಯಲ್ ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ತೆಲುಗು ಪ್ರೇಕ್ಷಕರ
ಪ್ರೀತಿಗೆ ಪಾತ್ರರಾಗಿದ್ದರು. ಆದ್ರೆ ಬಿಗ್ ಬಾಸ್ ಸೀಸನ್ 7ಗಾಗಿ ಧಾರಾವಾಹಿಯಿಂದ ಹೊರ ಬಂದಿದ್ದ
ಭೂಮಿ, ಇದೀಗ ಮತ್ತೆ ತೆಲುಗು ಕಿರುತೆರೆ ಎಂಟ್ರಿ ಕೊಟ್ಟಿರೋ ಅಭಿಮಾನಿಗಳಿಗೆ ಸಖತ್ ಖುಷಿ ಕೊಟ್ಟಿದೆ.