Bigboss News:
ಬಿಗ್ ಬಾಸ್ ಮನೆಯಲ್ಲಿ ಸೋನು ನಿತ್ಯ ತನ್ನ ವಿಭಿನ್ನ ಶೈಲಿಯಿಂದ ಮನೆ ಮಾತಾಗುತ್ತಿದ್ದಾರೆ.ಆದರೆ ಇಲ್ಲಿ ಸೋನು ಹೇಳಿರುವ ಒಂದು ಮಾತು ಇದೀಗ ಎಲ್ಲೆಡೆ ಸುದ್ದಿಯಾಗುತ್ತಿದೆ.ಸೋನು ನೀಡಿದ ಒಂದು ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ‘ಅಮ್ಮ ನನಗೆ ಮನೆಯಿಂದ ಹಾರ್ಲಿಕ್ಸ್ ಪೌಡರ್ ಕಳುಹಿಸಿ’ ಎಂದಿದ್ದಾರೆ ಸೋನು. ಇದಕ್ಕೆ ಅವಕಾಶ ಇಲ್ಲ ಎಂಬ ಮಾತನ್ನು ಮನೆ ಮಂದಿ ಹೇಳಿದರು. ‘ಮನೆಯಿಂದ ಯಾವ ವಸ್ತುಗಳನ್ನು ಪಡೆದುಕೊಳ್ಳುವಂತಿಲ್ಲ. ಎಲ್ಲರಿಗೂ ಇದು ಅಪ್ಲೈ ಆಗುತ್ತದೆ’ ಎಂದರು. ಇದಕ್ಕೆ ಸೋನು ಶ್ರೀನಿವಾಸ್ ಗೌಡ ಅಸಲಿ ವಿಚಾರ ತೆರೆದಿಟ್ಟರು. ‘ಹುಡುಗರಿಗೆ ಪ್ರೋಟಿನ್ ಪೌಡರ್ ಕಳಿಸ್ತಾರೆ. ಆದರೆ, ನಮಗೆ ಯಾಕೆ ಹಾರ್ಲಿಕ್ಸ್ ತರೋಕೆ ಏಕೆ ಅವಕಾಶ ಇಲ್ಲ. ಇದು ಮೋಸ’ ಎಂದು ಬೇಸರ ಹೊರಹಾಕಿದರು ಅವರು. ಸೋನು ಹೇಳಿದ ಮಾತು ಕೇಳಿ ಮನೆ ಮಂದಿ ಸೈಲೆಂಟ್ ಆದರು.
ಗಣೇಶ ಹಬ್ಬಕ್ಕೆ ‘ಹಿರಣ್ಯ’ ಸಿನಿಮಾದ ನಯಾ ಪೋಸ್ಟರ್ ರಿಲೀಸ್…ಮಾಸ್ ಲುಕ್ ನಲ್ಲಿ ಮಿಂಚಿದ ಮ್ಯಾಸೀವ್ ಸ್ಟಾರ್ ರಾಜವರ್ಧನ್
ಅಕ್ಷಿತ್ ಸಿನಿಮಾಗೆ ಡಾಲಿ ಧನಂಜಯ್ ಸಾಥ್…ಖೆಯೊಸ್ ಸಿನಿಮಾದ ಫಸ್ಟ್ ಲುಕ್ ರಿಲೀಸ್