ಸೋನು ಶ್ರೀನಿವಾಸ್ ಗೌಡ ಅವರು ‘ಬಿಗ್ ಬಾಸ್ ಒಟಿಟಿ’ಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಈ ವಾರ ಅನೇಕ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಆದರೆ, ಸೋನು ಶ್ರೀನಿವಾಸ್ ಗೌಡ ಅವರು ಬಚಾವ್ ಆಗಿದ್ದಾರೆ. ಅವರು ಒಳ್ಳೆಯ ರೀತಿಯಲ್ಲಿ ಪರ್ಫಾರ್ಮೆನ್ಸ್ ನೀಡುತ್ತಿದ್ದಾರೆ. ಈ ಕಾರಣದಿಂದ ಅವರು ಸೇವ್ ಆಗುತ್ತಿದ್ದಾರೆ. ಅವರ ಮಾತುಗಳು ಕೆಲವರಿಗೆ ಇಷ್ಟ ಆಗುತ್ತಿಲ್ಲ. ಇನ್ನೂ ಕೆಲವರಿಗೆ ಅವರ ಮಾತುಗಳು ಕಾಮಿಡಿ ಎನಿಸುತ್ತಿದೆ. ಈಗ ಲವ್ ಮಾಡುವವರಿಗೆ ‘ಬಿಗ್ ಬಾಸ್’ ಮನೆಯಲ್ಲಿಸೋನು ಒಂದು ಟಿಪ್ಸ್ ನೀಡಿದ್ದಾರೆ.
ಸೋನು ಗೌಡ ಅವರು, ‘ನಿಜವಾದ ಪ್ರೀತಿಯಲ್ಲಿ ನಂಬಿಕೆ ಇರಬೇಕು. ಟೈಮ್ಪಾಸ್ ಇರಬಾರದು’ ಎಂದರು. ಈ ಮೂಲಕ ಲವ್ ಟಿಪ್ಸ್ ಕೊಟ್ಟರು. ‘ಲವ್ ಟೈಮ್ವೇಸ್ಟ್. ಫ್ರೆಂಡ್ಶಿಪ್ ಮುಖ್ಯ’ ಎಂದು ಕೂಡ ಸೋನು ಹೇಳಿದರು. ಅವರು ಹೇಳಿದ್ದನ್ನು ಕೇಳಿ ರಾಕೇಶ್ ಅವರು ನೇರವಾಗಿ ಉತ್ತರ ಕೊಟ್ಟರು. ‘ಯಾವುದೇ ರಿಲೇಶನ್ಶಿಪ್ನಲ್ಲಿ ರೆಸ್ಪೆಕ್ಟ್ ಮುಖ್ಯ’ ಎಂದು ರಾಕೇಶ್ ಹೇಳಿದ್ರು.
ಅರ್ಜುನ್-ರೂಪೇಶ್ ನಡುವೆ ಬಿಗ್ ಫೈಟ್: ಬಿಗ್ ಬಾಸ್ ಮನೆಯೊಳಗೆ ನಡೆದದ್ದೇನು…!
ಬಿಗ್‌ಬಾಸ್ ಓಟಿಟಿ ಸೀ.1- ಕಿರಣ್ ಔಟ್ ಆಗಿದ್ದೇೆಕೆ..? ಸೋನು ಬಚಾವ್ ಆಗಿದ್ಹೇಗೆ..?