Bigboss:
ಬಿಗ್ ಬಾಸ್ ಮನೆಯಂಗಳದಲ್ಲಿ ದಿನದಿಂದ ದಿನಕ್ಕೆ ಪ್ರತಿಯೊಬ್ಬರೂ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ ಆಸ್ತಿ ವಿಚಾರದ ಬಳಿಕ ಇದೀಗ ಪ್ರೀತಿ ವಿಚಾರ ಶುರುವಾಗಿದೆ. ಮಾತು ಸಲುಗೆ ಆಪ್ತತೆ ಬೆಳೆದು ಸೋನು ಗೌಡ ಇದೀಗ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.
ಸಾಕಷ್ಟು ಕಣ್ಣೀರು ಹಾಕುತ್ತಲೇ ನಿರಂತರ ಮನೆಯ ಸದಸ್ಯರ ಗಮನ ಸೆಳೆಯುತ್ತಿದ್ದ ಸೋನು ಗೌಡ ಇದೀಗ ಹೊಸ ವಿಚಾರದಲ್ಲಿ ಸುದ್ದಿಯಾಗುತ್ತಿದ್ದಾರೆ. ಸೋನು ಗೌಡ ಬಿಗ್ ಬಾಸ್ ಅಂಗಳಕ್ಕೆ ಕಾಲಿಟ್ಟ ನಂತರ ತಮ್ಮ ಜೀವನದಲ್ಲಾದ ಅವಮಾನದ ಬಗ್ಗೆ ಕಣ್ಣೀರು ಹಾಕಿದ್ದರು . ಈ ಸಮಯದಲ್ಲಿ ಆಕೆಗೆ ಧೈರ್ಯ ತುಂಬಿದ್ದು ರಾಕೇಶ್. ನೀನು ಕುಗ್ಗಬಾರದು ಧೈರ್ಯವಾಗಿರಬೇಕು ಎಂಬುವುದಾಗಿ ಸಮಾಧಾನ ಪಡಿಸುತ್ತಲೇ ಅವರಿಬ್ಬರ ನಡುವೆ ಆಪ್ತತೆ ಬೆಳೆದಿದೆ.
ರಾಕೇಶ್ ದಿನನಿತ್ಯ ಎಲ್ಲರ ಜೊತೆ ಫ್ಲರ್ಟ್ ಮಾಡುತ್ತಿದ್ದಾನೆ.ಸ್ಪೂರ್ತಿ ಗೌಡ ಜೊತೆಗೆ ಕ್ಲೋಸ್ ಆಗಿರುವುದಕ್ಕೆ ಸೋನು ಗೌಡ ಉರಿದುಕೊಳ್ಳುತ್ತಿದ್ದಾರೆ. ಈ ಕಾರಣದಿಂದಾಗಿ ರೂಪೇಶ್ ಶೆಟ್ಟಿ ಬಳಿ ತೆರಳಿದ ಸೋನು ಗೌಡ ವಿಚಾರ ಹಂಚಿಕೊಂಡಿದ್ದಾರೆ. ತದನಂತರ ರಾಕೇಶ್ ಬಳಿ ಬಂದು ನೇರವಾಗಿ “ನನಗೆ ನಿನ್ನ ಮೇಲೆ ಫೀಲಿಂಗ್ಸ್ ಇದೆ, ನಿನಗೆ ಇಷ್ಟವಿದ್ದರೆ ಒಪ್ಪೊಕೋ ಇಲ್ಲವೆಂಮದರೆ ಇಲ್ಲ ನನಗೆ ಹೇಳಬೇಕೆಂದೆನಿಸಿತು ಅದಕ್ಕೆ ಹೇಳಿದೆ” ಎಂಬುವುದಾಗಿ ತನ್ನ ಭಾವನೆ ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ರಾಕೇಶ್ ನಿನ್ನ ಫೀಲಿಂಗ್ಸ್ ಜೊತೆ ಆಟ ಆಡಲ್ಲ ಎಂಬುವುದಾಗಿ ತಿಳಿಸಿದ್ದಾರೆ
ಒಟ್ಟಾರೆ ಬಿಗ್ ಬಾಸ್ ಮನೆಯೊಳಗೆ ಜಗಳ ಮನಸ್ತಾಪ ಆಟಗಳ ನಡುವೆ ಹೊಸ ಭಾವನೆಗಳೂ ಶುರುವಾಗುತ್ತಿವೆ. ಇದೆಲ್ಲದರ ಜೊತೆ ಈ ವಾರಂತ್ಯದಲ್ಲಿ ಒಬ್ಬರು ಎಲಿಮಿನೇಟ್ ಆಗೋದಂತೂ ಖಾತ್ರಿಯಾಗಿದೆ. ಅದ್ಯಾರೆಂಬುದು ಎಲ್ಲರಲ್ಲಿ ಇನ್ನೂ ಕುತೂಹಲವಿದೆ. ಸೋನು ಗೌಡ ಕೂಡ ತಲೆ ಮೇಲೂ ಎಲಿಮಿನೇಷನ್ ತೂಗು ಗತ್ತಿ ನೇತಾಡುತ್ತಿರುವುದಂತೂ ಸತ್ಯ. ಆರ್ಯವರ್ಧನ್ ಮೊದಲಾದವರೂ ಈ ಲಿಸ್ಟ್ ನಲ್ಲಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ನಡೆದ ಆ ಮೂರು ಪ್ರಮುಖ ಘಟನೆ..! ಅಕ್ಷತಾಗೆ ಜೈಲುವಾಸವೇಕೆ..?