Sandalwood News: ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ಚೈತ್ರ ಕುಂದಾಪುರ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಬಿಗ್‌ಬಾಸ್‌ನಲ್ಲಿ ಇದ್ದಾಗಲೇ, ನನಗೆ ಮದುವೆ ಫಿಕ್ಸ್ ಆಗಿದೆ ಎಂದು ಚೈತ್ರ ಹೇಳಿದ್ದರು. ಆದರೆ ಇದುವರೆಗೂ ಚೈತ್ರ ತಮ್ಮ ಹುಡುಗ ಯಾರು ಎಂದು ತೋರಿಸಲಿಲ್ಲ. ಇದುವೆಗೂ ಅವರ Instagram ನಲ್ಲಿ ಮೆಹೆಂದಿ ಶಾಸ್ತ್ರದ ವೀಡಿಯೋ, ಬೇಗೆ ಮದುವೆಗೆ ಸಂಬಂಧಿಸಿದ ವೀಡಿಯೋ ರಿಲೀಸ್ ಆಗಿದ್ದರೂ ಕೂಡ, ಚೈತ್ರ ಅವರನ್ನು ವಿವಾಹವಾಗುತ್ತಿರುವ ಹುಡುಗ ಯಾರು ಅಂತಾ ಇದುವರೆಗೂ ರಿವೀಲ್ ಆಗಿಲ್ಲ. ಇದೀಗ ಮೆಹೆಂದಿ ವೀಡಿಯೋ ಹರಿಬಿttiರುವ ಚೈತ್ರ, ಅದರ ಮಹತ್‌ವ ಹೇಳಿದ್ದಾರೆ.
ತ್ರೇತಾಯುಗದಲ್ಲಿ ಶ್ರೀರಾಮ, ಲಕ್ಷ ಣ, ಭರತ ಮತ್ತು ಶತ್ರುಘ್ನರ ವಿವಾಹದ ಸಮಯದಲ್ಲಿ ಅವರನ್ನು ಸಿಂಗರಿಸಲು ಅವರ ಕೈ, ಕಾಲು, ಹಾಗೆಯೇ ಮುಖದ ಮೇಲೆ ಪಾಷಾಣಬಣ್ಣ (ವಿವಿಧ ಬಣ್ಣದ ಕಲ್ಲುಗಳಿಂದ ತಯಾರಿಸಿದ ಬಣ್ಣ) ಮತ್ತು ಪುಷ್ಪಬಣ್ಣ (ವಿವಿಧ ಬಣ್ಣದ ಹೂವುಗಳಿಂದ ತಯಾರಿಸಿದ ಬಣ್ಣ) ಗಳ ಸಹಾಯದಿಂದ ಎಲೆ-ಹೂವು ಮುಂತಾದ ಆಕಾರಗಳನ್ನು ಬಿಡಿಸಲಾಗಿತ್ತು.
ಈ ಬಣ್ಣಗಳಲ್ಲಿ ವಿವಿಧ ದಿವ್ಯ ಔಷಧೀಯ ವನಸ್ಪತಿಗಳ ರಸಗಳನ್ನು ಬೆರೆಸಲಾಗಿತ್ತು. ಈ ಸುಗಂಧಿ ಮಿಶ್ರಣಕ್ಕೆ ‘ಪತ್ರಾವಲೀ’ ಎಂದು ಹೇಳುತ್ತಿದ್ದರು. (ಆಧಾರ : ‘ಭುಶುಂಡೀ ರಾಮಾಯಣ’ ಮತ್ತು ‘ಶ್ರೀನಾಥಮುನಿ ರಾಮಾಯಣ’)
ದ್ವಾಪರಯುಗದಲ್ಲಿಯೂ ಸಿಂಗಾರಕ್ಕಾಗಿ ‘ಪತ್ರಾವಲೀ’ಯನ್ನು ಉಪಯೋಗಿಸಲಾಗುತ್ತಿತ್ತು. ‘ತೋಕ’ ಎಂಬ ಹೆಸರಿನ ಶ್ರೀಕೃಷ್ಣನ ಮಿತ್ರನು ‘ಪತ್ರಾವಲೀ’ಯಿಂದ ಶ್ರೀಕೃಷ್ಣ ನನ್ನು ಸಿಂಗರಿಸುತ್ತಿದ್ದನು’ ಎಂದು ‘ಗರ್ಗಸಂಹಿತೆ’, ‘ಶ್ರೀಮದ್ಭಾಗವತ’, ‘ಶ್ರೀಕೃಷ್ಣಕರ್ಣಾಮೃತ’ ಮುಂತಾದ ಶ್ರೀಕೃಷ್ಣನ ಬಗೆಗಿನ ಪ್ರಮುಖ ಗ್ರಂಥಗಳಲ್ಲಿ ಉಲ್ಲೇಖಿಸಿರುವುದು ಕಂಡುಬರುತ್ತದೆ. ಆ ಸಮಯದಲ್ಲಿ ಶ್ರೀಕೃಷ್ಣನ ಗೋವುಗಳನ್ನೂ ‘ಪತ್ರಾವಲಿ’ಯಿಂದ ಸಿಂಗರಿಸಲಾಗುತ್ತಿತ್ತು. ಮದರಂಗಿ ಕೇವಲ ಬಣ್ಣವಲ್ಲ ಅದು ಸಂಸ್ಕೃತಿಯ ಕೈಗನ್ನಡಿ ಎಂದು ಚೈತ್ರಾ ಕುಂದಾಪುರ ಬರೆದುಕ“ಂಡಿದ್ದಾರೆ.