Wednesday, October 30, 2024

Latest Posts

Bigg Boss Kannada: ತ್ರಿವಿಕ್ರಮ್ ವಿರುದ್ಧ ಸಿಡಿದೆದ್ದ ಮೋಕ್ಷಿತಾ ಪೈ: ಕಾರಣವೇನು..?

- Advertisement -

Big Boss News: ಬಿಗ್‌ಬಾಸ್ ಕನ್ನಡ ಸೀಸನ್ 11 ನಲ್ಲಿ ಸೈಲೆಂಟ್ ಆಗಿದ್ದ ನಟಿ ಮೋಕ್ಷಿತಾ ಪೈ ತ್ರಿವಿಕ್ರಮ್ ವಿರುದ್ಧ ಸಿಡಿದೆದಿದ್ದಾರೆ. ತ್ರಿವಿಕ್ರಮ್ ಮತ್ತು ಮೋಕ್ಷಿತಾ ಪೈ ಇಬ್ಬರೂ ದೊಡ್ಮನೆಯಲ್ಲಿ ಹಾವು-ಮುಂಗೂಸಿಯ ರೀತಿ ಜಗಳವಾಡಿಕೊಂಡಿದ್ದಾರೆ.

ಇನ್ನು ಇವರಿಬ್ಬರ ನಡುವೆ ಜಗಳ ನಡೆಯಲು ಕಾರಣವೇನು..? ಸೈಲೆಂಟ್ ಆಗಿದ್ದ ಮೋಕ್ಷಿತಾ ವೈಲೆಂಟ್ ಆಗಲು ಕಾರಣವೇನು ಅಂದ್ರೆ, ತ್ರಿವಿಕ್‌ರಮ್ ಉಗ್ರಂ ಮಂಜು ಬಳಿ ಆಡಿದ ಮಾತುಗಳು. ಅವರು 10 ವಾರಕ್ಕಾಗಿ ಅಷ್ಟೇ ಆಡಲು ಬಂದಿದ್ದಾರೆ, ಬಳಿಕ ಅವರು ಹೋಗುತ್ತಾರೆ ಅನ್ನೋ ರೀತಿ ಮೋಕ್ಷಿತಾ ಬಗ್ಗೆ ಮಾತನಾಡಿದ್ದಾರೆ. ಇದನ್ನು ಕೇಳಿಸಿಕೊಂಡ ಮೋಕ್ಷಿತಾ, ನಾನು 10 ವಾರವಷ್ಟೇ ಇರ್ತೀನಿ ಎಂದು ಡಿಸೈಡ್ ಮಾಡೋಕ್ಕೆ ನೀವು ಯಾರು ಎಂದು ಕೇಳಿದ್ದಾರೆ..? ಆಗ ತ್ರಿವಿಕ್ರಮ್ ಅಯ್ತಮ್ಮಾ ಫಿನಾಲೆಗೆ ಹೋಗಮ್ಮಾ ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಮೋಕ್ಷಿತಾ, ನಾವೆಲ್ಲಾ ಇಲ್ಲಿ ಸುಮ್ಮನೆ ಬಂದಿದ್ದೇವೆ.ಐದೆದು ವರ್ಷ ಸಿರಿಯಲ್ ಮಾಡಿಕೊಂಡು ಬಂದದಿದ್ದೇವೆ. ನಾವೇನೂ ಅಲ್ಲ ಅಂತ ನಿಮಗೆ ಅನ್ನಿಸುತ್ತದೆಯಾ..? ನೀವು ಗೋಮುಖ ವ್ಯಾಘ್ರನ ರೀತಿ ಆಡುತ್ತಿದ್ದೀರಿ. ಇಂದಿನಿಂದ ನನ್ನ ಆಟ ಶುರು ಎಂದು ಮೋಕ್ಷಿತಾ ಖಡಕ್ ಆಗಿ ಹೇಳಿದ್ದಾರೆ. ಅದಕ್ಕೆ ಪ್ರತಿಯಾಗಿ ತ್ರಿವಿಕ್ರಮ್ ನಾನು ಕೂಡ ನೀವು ತಿಳಿದುಕೊಂಡಿರುವುದನ್ನೇ ಸಾಬೀತು ಮಾಡುತ್ತೇನೆ ಎಂದಿದ್ದಾರೆ.

ಇನ್ನು ಮೋಕ್ಷಿತಾ ಫ್ಯಾನ್ಸ್ ಮೋಕ್ಷಿತಾ ಬಗ್ಗೆ ಖುಷಿಯಾಗಿದ್ದರೆ, ತ್ರಿವಿಕ್ರಮ್ ಫ್ಯಾನ್ಸ್, ಮೋಕ್ಷಿತಾಳ ವಿರುದ್ಧ ಕಾಮೆಂಟ್ ಮಾಡುತ್ತಿದ್ದಾರೆ. ಮೋಕ್ಷಿತಾಳ ಜೀವನದ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ತ್ರಿವಿಕ್ರಮ್ ಮತ್ತು ಮೋಕ್ಷಿತಾ ವಾರ್ ಎಲ್ಲಿವರೆಗೂ ಹೋಗಿ ನಿಲ್ಲುತ್ತದೆ ಎಂದು ಕಾದು ನೋಡಬೇಕಷ್ಟೇ.

- Advertisement -

Latest Posts

Don't Miss