Bigg Boss Kannada: ತಲೆ ಬೋಳಿಸಿಕೊಂಡ ರಜತ್, ಹಸಿಮೆಣಸು ತಿಂದ ಗೌತಮಿ

Bigg Boss: ಇಂದು ಬಿಗ್‌ಬಾಸ್ ಮನೆಯಲ್ಲಿ ಹಲವು ಟಾಸ್ಕ್‌ಗಳನ್ನು ನೀಡುತ್ತಿದ್ದು, ಮೆಣಸಿನಕಾಯಿ, ಹಾಗಲಕಾಯಿ ತಿನ್ನುವುದು, ತಲೆ ಬೋಳಿಸಿಕೊಳ್ಳುವುದು ಹೀಗೆ ಹಲವು ಟಾಸ್ಕ್‌ಗಳಿದೆ.

ಕಳೆದ ಬಿಗ್‌ಬಾಸ್‌ನಲ್ಲಿ ಕಾರ್ತಿಕ್ ಮತ್ತು ತುಕಾಲಿ ಮಂಜು ತಲೆ ಬೋಳಿಸಿಕೊಂಡಿದ್ದು, ಈ ಸೀಸನ್‌ನಲ್ಲಿ ರಜತ್ ಅವರಿಗೆ ಈ ಟಾಸ್ಕ್ ನೀಡಲಾಗಿದೆ. ರಜತ್ ಅವರು ತಲೆ ಬೋಳಿಸಿಕೊಳ್ಳಲು ಒಪ್ಪಿಗೆ ನೀಡಿದ್ದು, ಟ್ರಿಮ್ಮರ್‌ನಿಂದ ತಲೆಬೋಳಿಸಿಕೊಳ್ಳಲು ರೆಡಿಯಾಗಿದ್ದಾರೆ. ಇನ್ನು ರಜತ್‌ಗೆ ಈ ಸವಾಲ್ ಕೊಟ್ಟಿದ್ದು ಉಗ್ರಂ ಮಂಜು.

ಇದೇ ರೀತಿ ಗೌತಮಿಗೆ ಹಸಿಮೆಣಸಿನಕಾಯಿ ತಿನ್ನುವ ಟಾಸ್ಕ್ ಸಿಕ್ಕಿದ್ದು, ಐಶ್ವರ್ಯಾ ಸಿಂದೋಗಿ ಅವರಿಗೆ ಹಾಗಲಕಾಯಿ ತಿನ್ನುವ ಟಾಸ್ಕ್ ಸಿಕ್ಕಿದೆ. ಮೆಣಸಿನಕಾಯಿ ತಿಂದ ಗೌತಮಿ ಕಣ್ಣೀರು ಹಾಕಿ, ಕಿರುಚಾಡಿ ಪಡಬಾರದ ಪಾಡು ಪಟ್ಟಿದ್ದಾರೆ.

ಇನ್ನು ಈ ಟಾಸ್ಕ್ ನಡೆಯುವಾಗ, ಚೈತ್ರಾ ಕುಂದಾಪುರ ಸ್ಪರ್ಧಿಗಳೊಂದಿಗೆ ವಾಗ್ವಾದಕ್ಕಿಳಿದಿದ್ದು, ಮುಚ್ಕೊಂಡ್ ಕೂತ್ಕೋಬೇಕು ಎನ್ನುವ ಪದ ಬಳಸಿದ್ದಾರೆ. ಈ ಪದ ಬಳಸಿದ್ದಕ್ಕೆ, ಬಿಗ್‌ಬಾಸ್ ಸ್ಪರ್ಧಿಗಳು ಕೆಂಡಾಮಂಡಲರಾಗಿರುವುದಲ್ಲದೇ, ನೆಟ್ಟಿಗರು ಕೂಡ ಆಕ್ರೋಶ ಹೊರಹಾಕಿದ್ದಾರೆ.

About The Author