Sandalwood News: ಕೃಷಿ ತಾಪಂಡ ಅವರ ಮನೆಯಲ್‌ಲಿ ಅವರ ಗೆಳೆಯ ವೈಶಾಕ್ ಉಪಾಧ್ಯಾಯ ಆತ್ಮಹತ್ಯೆಗೆ ಶರಣಾಗಿದ್ದರು. ಈ ವೇಳೆ ಕೃಷಿ ಮನೆಯಲ್ಲಿರಲಿಲ್ಲ. ಆದರೆ ಕೃಷಿಗೆ ವೈಶಾಕ್ ಈ ಬಗ್ಗೆ ಮೆಸೇಜ್ ಹಾಕಿದ್ದು, ತಕ್ಷಣ ಕೃಷಿ ಪೋಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ಪೋಲೀಸರು ವೈಶಾಕ್ ಮನೆಯವರಿಗೆ ಈ ಬಗ್ಗೆ ತಿಳಿಸಿದ್ದು, ಇದೀಗ ಬೆಂಗಳೂರಿನ ಸ್ನಶಾನದಲ್ಲಿ ವೈಶಾಕ್ ಅಂತಿಮ ಸಂಸ್ಕಾರ ನಡೆಸಲಾಗಿದೆ.
ಆದರೆ ಅಂತಿಮದರ್ಶನಕ್ಕೆಂದು ಸ್ಮಶಾನಕ್ಕೆ ಬಂದಿದ್ದ ಕೃಷಿ ಅವರಿಗೆ ವೈಶಾಕ್ ಅವರನ್ನು ಅಂತಿಮವಾಗಿ ನೋಡಲು ವೈಶಾಕ್ ಅವರ ಮನೆಯವರು ಅವಕಾಶ ನೀಡಲಿಲ್ಲ. ವೈಶಾಕ್ ಅವರ ಮಾವ, ಅಂದರೆ ಪತ್ನಿಯ ತಂದೆ, ನೀನು ಇಲ್ಲಿಂದ ಹೋಗು ಎಂದು ನೇರವಾಗಿ ಹೇಳಿ ಕಳುಹಿಸಿದ್ದಾರೆ. ಹಾಗಾಗಿ ಕೃಷಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸದೇ, ಅಲ್ಲಿಂದ ನಿರ್ಗಮಿಸಿದ್ದಾರೆ.
ವೈಶಾಕ್ ಪತ್ನಿ ಮೇಘ ಅವರು ಪೋಲೀಸರ ಬಳಿ ಈ ಬಗ್ಗೆ ದೂರು ನೀಡಿದ್ದು, ದೂರಿನಲ್ಲಿ ವೈಶಾಕ್‌ಗೆ ಕೃಷಿ ಜತೆ ಅನೈತಿಕ ಸಂಬಂಧವಿತ್ತೆಂದು ದೂರಿದ್ದಾರೆ. ಅಲ್ಲದೇ, ಆಕೆಯ ಜತೆಗಿನ ಸಂಬಂಧ ಬಿಡು ಎಂದರೂ ಕೇಳದೇ, ಮೇಘಾಳ ಜತೆ ಮಾತನಾಡುವುದನ್ನೇ ಬಿಟ್ಟಿದ್ದ ವೈಶಾಕ್, ಬರೀ ಮೆಸೇಜ್‌ನಲ್ಲೇ ಅವಶ್ಯಕತೆ ಇದ್ದಷ್ಟು ಮಾತನಾಡುತ್ತಿದ್ದ ಎನ್ನಲಾಗಿದೆ.
ಅಲ್ಲದೇ ಕಳೆದ 1 ತಿಂಗಳಿನಿಂದ ವೈಶಾಕ್ ಮನೆಗೆ ಬರುವುದನ್ನೇ ಬಿಟ್ಟಿದ್ದರಂತೆ. ಆದರೆ ಮಗನ ಬಗ್ಗೆ ಮೆಸೇಜ್‌ನಲ್ಲಿ ವಿಚಾರಿಸುತ್ತಿದ್ದರಂತೆ. ಸಾಯುವುದಕ್ಕೂ ಮುನ್ನ ಮಗ ಮನೆಗೆ ಬಂದನಾ ಎಂದು ಕೇಳಿ, ಬಂದ ಎಂದು ಕನ್ಫರ್ಮ್ ಆದ ಬಳಿಕ, ವೈಶಾಕ್ ನೇಣಿಗೆ ಶರಣಾಗಿದ್ದಾರೆ.




