Tuesday, February 4, 2025

Latest Posts

Bigg Boss News: ಆಸ್ಪತ್ರೆಗೆ ದಾಖಲಾದ ಬಿಗ್‌ಬಾಸ್ ಖ್ಯಾತಿಯ ಗೋಲ್ಡ್ ಸುರೇಶ್.. ಆಗಿದ್ದೇನು..?

- Advertisement -

Bigg Boss News: ಮೈತುಂಬ ಚಿನ್ನ ಧರಿಸಿ, ಬಿಗ್‌ಬಾಸ್‌ಗೆ ಬಂದು, ಗೋಲ್ಡ್ ಸುರೇಶ್ ಅಂತಲೇ ಫೇಮಸ್ ಆಗಿರುವ ಸುರೇಶ್, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಿಗ್‌ಬಾಸ್ ಕನ್ನಡ ಸೀಸನ್11ರ ಸ್ಪರ್ಧಿಯಾಗಿದ್ದ ಗೋಲ್ಡ್ ಸುರೇಶ್, ಬಿಗ್‌ಬಾಸ್‌ನಲ್ಲಿ ಟಾಸ್ಕ್ ಆಡುವ ವೇಳೆ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ತಕ್ಷಣ ಅವರಿಗೆ ಬೇಕಾದ ಚಿಕಿತ್ಸೆ ಕೊಡಿಸಲಾಯಿತಾದರೂ, ಒಳ ನೋವು ಹಾಗೆ ಇತ್ತು. ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಅವರು ಆಸ್ಪತ್ರೆಗ ದಾಖಲಾಗಿದ್ದು, ಆಪರೇಷನ್‌ಗೆ ಒಳಗಾಗಿದ್ದಾರೆ.

ಉದ್ಯಮದಲ್ಲಿ ಏರುಪೇರಾದ ಕಾರಣ, ಸಡನ್ ಆಗಿ ಗೋಲ್ಡ್ ಸುರೇಶ್ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದರು. ಅದಕ್ಕಿಂತಲೂ ಮುಂಚೆ ಡ್ರಮ್‌ನಲ್ಲಿ ನೀರು ತುಂಬಿಸುವ ಟಾಸ್ಕ್ ಆಡಿದ್ದ ಸುರೇಶ್, ಟಾಕ್ಸ್ ಪೂರ್ತಿಗೊಳಿಸುವ ಭರದಲ್ಲಿ ತುಂಬಿದ ಡ್ರಮ್‌ನ್ನು ಕಾಲಿಗೆ ಬೀಳಿಸಿಕೊಂಡಿದ್ದರು. ಅದೇ ನೋವು ಈಗ ದೊಡ್ಡದಾಗಿ ಆಪರೇಷನ್ ಮಾಡುವ ಹಂತಕ್ಕೆ ಬಂದಿದೆ.

ಈಗಾಗಲೇ ಆಪೇರಷನ್ ಆಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಇನ್ನು 3 ದಿನಗಳಲ್ಲಿ ಸುರೇಶ್ ಡಿಸ್ಚಾರ್ಜ್ ಆಗಲಿದ್ದಾರೆ.

- Advertisement -

Latest Posts

Don't Miss