Bigg Boss News: ಬಿಗ್ ಬಾಸ್‌ನಿಂದ ಎಲಿಮಿನೇಟ್ ಆಗಿರುವ ಸತ್ಯ ಖ್ಯಾತಿಯ ಗೌತಮಿ ಜಾಧವ್, ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿ್ದು, ಬಿಗ್‌ಬಾಸ್ ಮನೆಯಲ್ಲಿ ತಮಗಾದ ಅನುಭವದ ಬಗ್ಗೆ ಹೇಳಿದ್ದಾರೆ. ಅಳುತ್ತಿದ್ದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೌತಮಿ. ಬಿಗ್‌ಬಾಸ್ ಮನೆಯಲ್ಲಿ ಎಲ್ಲರೂ ಎಮೋಷನಲ್ ಆಗ್ತಾರೆ. ಎಲ್ಲರಿಗೂ ಅಳು ಬಂದೇ ಬರುತ್ತದೆ ಎಂದಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿ ಮಂಜು ಮತ್ತು ಹನುಮಂತು ಜೊತೆ ಒಳ್ಳೆ ಬಾಂಡಿಂಗ್ ಇತ್ತು. ಮೋಕ್ಷಿತಾ ಜೊತೆ ಗೆಳೆತನದಲ್ಲಿ ಸ್ವಲ್ಪ ಏರುಪೇರಾಗಿತ್ತು. ಆದರೆ ಈಗಲೂ ನಾನು ಉತ್ತಮ ಗೆಳೆತನ ನಿಭಾಯಿಸುತ್ತೇನೆ ಎಂದು ಗೌತಮಿ ಹೇಳಿದ್ದಾರೆ. ಇನ್ನು ಧನರಾಜ್ ಬಗ್ಗೆ ಮಾತನಾಡಿರುವ ಗೌತಮಿ, ಧನರಾಜ್ ನನ್ನದೇ ವರ್ಷನ್ ಅಂತಾ ಅನ್ನಿಸುತ್ತಾರೆ. ಧನರಾಜ್ ವ್ಯಕ್ತಿತ್ವ ಇಷ್ಟ ಆಯ್ತು ಅಂತಾ ಗೌತಮಿ ಹೇಳಿದ್ದಾರೆ.
ಇನ್ನು ವನದೇವಿಯನ್ನು ಹೆಚ್ಚಾಗಿ ನಂಬುವ ಗೌತಮಿ ಜಾಧವ್, ತಮ್ಮ ಬಿಗ್‌ಬಾಸ್ ಜರ್ನಿ ಬಗ್ಗೆ ಮಾತನಾಡುತ್ತ, ಅಮ್ಮ ಇಲ್ಲಿವರೆಗೂ ಸಾಕು ಎಂದು ನಿರ್ಧರಿಸಿದ್ದರು. ಹಾಗಾಗಿ ನಾನು ಹೊರಗೆ ಬಂದೆ. ಇದರ ಬಗ್ಗೆ ನನಗೆ ಸಮಾಧಾನವಿದೆ ಎಂದು ಗೌತಮಿ ಜಾಧವ್ ಹೇಳಿದ್ದಾರೆ.