Bigg boss OTT 3: ಸಲ್ಮಾನ್ ಖಾನ್ ಜಾಗಕ್ಕೆ ಬಂದ ನಟ ಅನಿಲ್ ಕಪೂರ್

Bollywood News:  ಹಿಂದಿ ಬಿಗ್‌ ಬಾಸ್‌ನ ನಿರೂಪಕರ ಸ್ಥಾನದಲ್ಲಿದ್ದು, ಇಷ್ಟು ವರ್ಷ ಅತ್ಯುತ್ತಮವಾಗಿ ಕಾರ್ಯಕ್ರಮವನ್ನು ನಡೆಸಿ ಕೊಟ್ಟವರು ನಟ ಸಲ್ಮಾನ್ ಖಾನ್. ಆ ಸ್ಥಾನದಲ್ಲಿ ಜನ ಬೇರೆ ಯಾರನ್ನೂ ನೋಡಲು ಬಯಸುವುದಿಲ್ಲ. ಕನ್ನಡದಲ್ಲಿ ಕಿಚ್ಚನನ್ನು ಬಿಟ್ಟು ಬೇರೆ ನಿರೂಪಕ ಹೇಗೆ ಬಿಗ್‌ಬಾಸ್‌ಗೆ ಸೂಟ್ ಆಗುವುದಿಲ್ಲ ಎನ್ನಿಸುತ್ತದೆಯೋ, ಅದೇ ರೀತಿ ಸಲ್ಮಾನ್ ಕೂಡ ನೆಚ್ಚಿನ ಬಿಗ್‌ಬಾಸ್ ನಿರೂಪಕರಾಗಿದ್ದಾರೆ.

ಆದರೆ ಬಿಗ್‌ಬಾಸ್ ಓಟಿಟಿ 3ಗೆ ಹೊಸ ನಿರೂಪಕರ ಎಂಟ್ರಿಯಾಗಿದೆ. ನಟ ಅನಿಲ್ ಕಪೂರ್ ಸಲ್ಮಾನ್ ಖಾನ್ ಸ್ಥಾನದಲ್ಲಿ ನಿಂತು ಬಿಗ್‌ಬಾಸ್ ಓಟಿಟಿ ನಿರೂಪಣೆ ಮಾಡಲಿದ್ದಾರೆ. ಸಲ್ಮಾನ್ ಅಭಿಮಾನಿಗಳಿಗೆ ಇದರಿಂದ ನಿರಾಸೆಯಾಗಿದ್ದರೂ, ಅನಿಲ್ ಕಪೂರ್ ಕೂಡ ಚೆನ್ನಾಗಿ ನಿರೂಪಣೆ ಮಾಡಬಲ್ಲರು ಅಂತಾ ನಂಬಿಕೆ ಇದೆ.

ಪ್ರೋಮೋ ಬಿಡುಗಡೆ ಮಾಡಿದ್ದು, ಅನಿಲ್ ಕಪೂರ್ ಮುಖ ತೋರಿಸಲಿಲ್ಲ. ಆದರೆ, ಅವರ ಧ್ವನಿಯಿಂದ ಇದು ಅನಿಲ್ ಕಪೂರ್ ಅಂತ ಕಂಡುಹಿಡಿಯಬಹುದು. ಅಷ್ಟೇ ಅಲ್ಲದೇ, ಸೋನಂ ಕಪೂರ್ ಈ ಪ್ರೋಮೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ಅಪ್ಪನನ್ನು ಹೊಗಳಿದ್ದಾರೆ.

ಭವಾನಿ ರೇವಣ್ಣಗೆ ಬಿಗ್ ಶಾಕ್: ನೀರಿಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಸಾಧ್ಯತೆ

Prajwal Pen drive case: ಪ್ರಜ್ವಲ್ ರೇವಣ್ಣ 6 ದಿನ ಎಸ್‌ಐಟಿ ಕಸ್ಟಡಿಗೆ

ಇಂಗ್ಲೀಷ್ ಟೀಚರ್ ಆಗಿ ಪಾಠ ಮಾಡಿದ ಜಿಲ್ಲಾಧಿಕಾರಿ ದಿವ್ಯ ಪ್ರಭು

About The Author