Bigg Boss: ಸದ್ಯ ಬಿಗ್‌ಬಾಸ್ ರನ್ನರ್ ಅಪ್ ಆಗಿರುವ ರಕ್ಷಿತಾ, ಸೋಶಿಯಲ್ ಮೀಡಿಯಾದಲ್ಲಿ ಲೈವ್‌ಗೆ ಬಂದು, ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. ಕಂಟಿನ್ಯೂ ಆಗಿ ಸಂದರ್ಶನದಲ್ಲಿ ಭಾಗಿಯಾಗಿರುವ ರಕ್ಷಿತಾಳಿಗೆ ಗಂಟಲಿನ ಸಮಸ್ಯೆ ಉಂಟಾಗಿದ್ದರೂ ಕೂಡ, ಆಕೆ ತುಂಬಾ ಮಾತನಾಡಿದ್ದಾರೆ.
ನಾನು ಬಿಗ್‌ಬಾಸ್ ಮನೆಯಲ್ಲಿರುವಾಗ ನನಗೆ ನೀವೆಲ್ಲಾ ಇಷ್ಟು ಪ್ರೀತಿ ನೀಡಿದ್ದೀರೆಂದು ತಿಳಿದಿರಲಿಲ್ಲ. ಇಷ್ಟು ಪ್ರೀತಿ ಮಾಡ್ತೀರಾ ನೀವು ಅಂತಾ ಅಂದುಕ“ಳ್ಳಲೇ ಇಲ್ಲ ನಾನು. ಬಿಗ್‌ಬಾಸ್ ಮನೆಯಿಂದ ಆಚೆ ಬಂದ ಬಳಿಕ ನಾನು ಇದನ್ನೆಲ್ಲ ನೋಡುತ್ತಿದ್ದೇನಲ್ಲ, ಇದೆಲ್ಲ ಕನಸಾ-ಸತ್ಯವಾ ಅಂತಾ ನನಗೆ ಅನ್ನಿಸುತ್ತಿದೆ. ಅಷ್ಟು ಪ್ರೀತಿ ನೀಡುತ್ತಿದ್ದೀರಿ ನೀವು.
ನಿಮ್ಮೆಲ್ಲರ ಆಶೀರ್ವಾದದಿಂದ, ನಿಮ್ಮ ಪ್ರೀತಿಯಿಂದ ನಾನು ರನ್ನರ್ ಅಪ್ ಆಗಿದ್ದೇನೆ. ನಿಮ್ಮ ಸಮಯ ತೆಗೆದು ನನಗೆ ವೋಟ್ ಮಾಡಿದ್ದೀರಿ. ಬರೀ ಕರ್ನಾಟಕ ಮಾತ್ರವಲ್ಲದೇ, ಭಾರತ, ವಿದೇಶ ಎಲ್ಲೆಲ್ಲಿ ಕನ್ನಡಿಗರಿದ್ದಾರೆ ಎಲ್ಲರೂ ನನಗೆ ಬೆಂಬಲಿಸಿದ್ದಾರೆ. ಅವರಿಗೆಲ್ಲರಿಗೂ ಧನ್ಯವಾದಗಳು ಎಂದು ರಕ್ಷಿತಾ ತಿಳಿಸಿದ್ದಾರೆ.
ಇನ್ನು ನಾನು ಮುಂಚೆ ವೀಡಿಯೋ ಮಾಡುವಾಗ, ನನ್ನನ್ನು ತುಂಬಾ ನೆಗೆಟಿವ್ ಆಗಿ ಟ್ರೋಲ್ ಮಾಡಲಾಗುತ್ತಿತ್ತು. ಆದರೆ ಈಗ ನನ್ನ 1 ನೆಗೆಟಿವ್ ವೀಡಿಯೋನೇ ಇಲ್ಲ. ಎಲ್ಲರೂ ಪ್ರೀತಿಯೇ ನೀಡುತ್ತಿದ್ದಾರೆ. ಇದೆಲ್ಲಾ ನನಗೆ ಅಯ್ಯೋ ದೇವರೆ ಇದೆಲ್ಲಾ ಹೇಗೆ ಆಗ್ತಿದೆ ಅಂತಾ ನಂಬೋಕ್ಕೆ ಆಗ್ತಿಲ್ಲ. ಇನ್ನು ಟ್ರೋಲ್ ಮೀಮ್ಸ್ ಮಾಡಿದವರಿಗೆಲ್ಲ ಥ್ಯಾಂಕ್ಯೂ ಸೋ ಮಚ್ ಎಂದು ರಕ್ಷಿತಾ ಧನ್ಯವಾದ ತಿಳಿಸಿದ್ದಾರೆ.
ಕಂಟೆಂಟ್ ಕ್ರಿಯೇಟರ್ಸ್, ಇನ್‌ಫ್ಲುಯೆನ್ಸರ್ಸ್ ಎಲ್ಲರಿಗೂ ಧನ್ಯವಾದ. ನೀವೆಲ್ಲರೂ ನನಗೆ ಪ್ರೀತಿ ನೀಡಿದ್ದೀರಿ, ಬೆಂಬಲಿಸಿದ್ದೀರಿ. ಇಲ್ಲಿವರೆಗೂ ಬರುವಲ್ಲಿ ನನ್ನ ಎಫರ್ಟ್ ಎಷ್ಟಿತ್ತೋ ಅಷ್ಟೇ ನಿಮ್ಮೆಲ್ಲರ ಬೆಂಬಲವಿದೆ.ಸಾಯುವ ತನಕ ನಾನು ನಿಮ್ಮ ಪ್ರೀತಿಯನ್ನು ಮರೆಯಲ್ಲ. ನನ್ನನ್ನು ನಿಮ್ಮ ಮನೆ ಮಗಳು ಅಂತಾ ಹೇಳಿದ್ದೀರಿ. ಇದಕ್ಕಿಂತ ಹೆಚ್ಚು ನನಗೇನೂ ಬೇಕು..? ಥ್ಯಾಂಕ್ಯೂ ಎಂದು ರಕ್ಷಿತಾ ಧನ್ಯವಾದ ಅರ್ಪಿಸಿದ್ದಾಳೆ.




