Saturday, April 19, 2025

Latest Posts

ಹೊಟೇಲ್‌ನಲ್ಲಿ ಗಲಾಟೆ ಮಾಡಿಕೊಂಡ ಬಿಗ್‌ಬಾಸ್ ವಿನ್ನರ್: ವೀಡಿಯೋ ವೈರಲ್

- Advertisement -

Bollywood News: ಪ್ರಸಿದ್ಧ ಯೂಟ್ಯೂಬರ್, ಬಿಗ್‌ಬಾಸ್ ಹಿಂದಿ ಓಟಿಟಿ ಸೀಸನ್ 2 ವಿನ್ನರ್ ಆಗಿದ್ದ ಎಲ್ವಿಶ್, ಸದ್ಯ ಗಲಾಟೆ ಮಾಡಿಕೊಂಡು, ಸುದ್ದಿಯಾಗಿದ್ದಾರೆ.

ಎಲ್ವಿಶ್ ರಾಜಸ್ಥಾನದ ಜೈಪುರದ ರೆಸ್ಟೋರೆೆಂಟ್‌ ಒಂದರಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಇವರ ಗಲಾಟೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಎಲ್ವಿಶ್ ತಾವು ಕುಳಿತಿದ್ದ ಜಾಗದಿಂದ ಹಿಂದೆ ಬಂದು, ಅಲ್ಲಿ ಕುಳಿತಿದ್ದ ವ್ಯಕ್ತಿಯ ಕೆನ್ನೆಗೆ ಬಾರಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ರಾದ್ಧಾಂತ ನಡೆದಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ, ಇಬ್ಬರನ್ನು ಮನೆೆಗೆ ಕಳಿಸಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲೇ ಇದ್ದ ಕೆಲವರು, ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾರೆ.

ಎಲ್ವಿಶ್ ಯಾಕೆ ಆ ಯುಕನಿಗೆ ಹೊಡೆದ ಅನ್ನೋ ಬಗ್ಗೆ ಇದುವರೆಗೂ ತಿಳಿದಿಲ್ಲ. ಆದರೆ ಈ ವೀಡಿಯೋಗೆ ತರಹೇವಾರಿ ಕಾಮೆಂಟ್ಸ್ ಬಂದಿದ್ದು, ಎಲ್ವಿಶ್ ಬಿಗ್‌ಬಾಸ್ ಗೆದ್ದು ಸಮಯಗಳೇ ಕಳೆದಿದೆ. ಮತ್ತೆ ಮುನ್ನೆಲೆಗೆ ಬರಲು, ಈ ರೀತಿ ಗಿಮಿಕ್ ಮಾಡುತ್ತಿದ್ದಾನೆ ಎಂದು ಹಲವರು ಕಿಡಿಕಾರಿದ್ದಾರೆ. ಅಲ್ಲದೇ, ಸೋಶಿಯಲ್ ಮೀಡಿಯಾದಲ್ಲಿ ಎಲ್ವಿಶ್‌ಗೆ ಇದ್ದ ಫಾಲೋವರ್ಸ್, ಈ ಘಟನೆ ಬಳಿಕ ಕಡಿಮೆಯಾಗಿದ್ದಾರೆ.

ಸಂಸತ್‌ನತ್ತ ರಜತ್ ಚಿತ್ತ: ವಿವಿಧ ಮಠದ ಸ್ವಾಮೀಜಿಗಳ ಬೆಂಬಲ

‘ಇಂಥವರಿಗೆ ರಾಮನ ದಯೆಯೂ ಇರಲಾರದು, ಚಾಮುಂಡೇಶ್ವರಿ ಆಶೀರ್ವಾದವೂ ಸಿಗಲಾರದು’

ನಮ್ಮ ಊರಿನ ಮತದಾರರಿದ್ದಾರಲ್ಲ ಅವರು ನನಗೆ ಹೈಕಮಾಂಡ್‌: ಸಚಿವ ಕೆ.ಎನ್.ರಾಜಣ್ಣ

- Advertisement -

Latest Posts

Don't Miss