Tuesday, April 15, 2025

Latest Posts

ಇಬ್ಬರು ಯುವತಿಯರೊಂದಿಗೆ ಬೈಕ್ ಸ್ಟಂಟ್, ಯುವಕ ಅರೆಸ್ಟ್, ವೀಡಿಯೋ ವೈರಲ್

- Advertisement -

ಈಗಿನ ಕಾಲದ ಕೆಲ ಯುವಕರಿಗೆ ಬೈಕ್ ಸಿಕ್ಕರೆ ಸಾಕು, ರಸ್ತೆಯಲ್ಲಿ ಶೋಕಿ ಮಾಡಿಕೊಂಡು ಓಡಾಡುವುದೇ ಕೆಲಸ. ಹೆಲ್ಮೆಟ್ ಧರಿಸಿ, ಸುರಕ್ಷಿತವಾಗಿ ಬೈಕ್ ಚಲಾಯಿಸಿಕೊಂಡು ಮನೆಗೆ ಹೋಗಿ ಎಂದು ಪೊಲೀಸರು ಸಂದೇಶ ಸಾರಿದರೂ, ಹಲವರು ಅದನ್ನು ನಿರ್ಲಕ್ಷಿಸುತ್ತಿದ್ದಾರೆ. ಇದೇ ರೀತಿ ಮುಂಬೈನಲ್ಲಿ ಓರ್ವ ಯುವಕ ಹೆಲ್ಮೆಟ್ ಧರಿಸದೇ, ರೋಡಿನಲ್ಲಿ ಬೈಕ್ ಸ್ಟಂಟ್ ಮಾಡಿದ್ದು, ಇವನೊಂದಿಗೆ ಬೈಕ್‌ನಲ್ಲಿ ಇಬ್ಬರು ಯುವತಿಯರು ಕುಳಿತಿದ್ದಾರೆ. ಈ ವೀಡಿಯೋ ವೈರಲ್ ಆಗಿದ್ದು, ಟ್ವೀಟರ್‌ನಲ್ಲಿ ವೀಡಿಯೋ ಅಪ್ಲೋಡ್ ಆಗಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಸ್ಥಳೀಯ ಪೊಲೀಸರು, ಸದ್ಯ 24 ವರ್ಷದ ಯುವಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ. ಇವನು ಇಬ್ಬರು ಯುವತಿಯರೊಂದಿಗೆ ಬೈಕ್ ಸ್ಟಂಟ್ ಮಾಡುತ್ತಿದ್ದ. ಬಂದ್ರಾದ ಕರ್ಲಾದಲ್ಲಿ ಈ ಘಟನೆ ನಡೆದಿದ್ದು, ಇವನ ಮತ್ತು ಇವನಿಗೆ ವೀಡಿಯೋ ಮಾಡಿ ಸಾಥ್ ಕೊಟ್ಟವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಮೆಟ್ರೋದಲ್ಲಿ ಅರೆಬೆತ್ತಲೆ ಪ್ರಯಾಣ: ವೀಡಿಯೋಗೆ ಬಂತು ರಾಶಿ ರಾಶಿ ಕಾಮೆಂಟ್ಸ್

ಟಿಶ್ಯೂ ಇಡುವ ಜಾಗದಲ್ಲಿ 500 ರೂಪಾಯಿ ನೋಟು ಇಟ್ಟರಾ ಅಂಬಾನಿ..?

- Advertisement -

Latest Posts

Don't Miss