ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಬೈಕ್ ಟ್ಯಾಕ್ಸಿಗಳ ಸಂಚಾರಕ್ಕೆ ಹೈ-ಬ್ರೇಕ್ ಬಿದ್ದಿದೆ. ಬೈಕ್ ಟ್ಯಾಕ್ಸಿಗಳನ್ನ ಬ್ಯಾನ್ ಮಾಡಿರುವುದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೈಕ್ ಟ್ಯಾಕ್ಸಿ ಬ್ಯಾನ್ ಆದ ಮೇಲೆ ಬೆಂಗಳೂರಲ್ಲಿ ಟ್ರಾಫಿಕ್ ಕಿರಿಕಿರಿ ಹೆಚ್ಚಾಗಿದೆ. ಬೈಕ್ ಟ್ಯಾಕ್ಸಿ ಸವಾರರು ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಸಮಯದಲ್ಲಿ ಯಾವುದೇ ಪರ್ಮೀಷನ್ ಇಲ್ಲದೆ ವಿಧಾನ ಸೌಧದ ಮುಂದೆ ಹೋರಾಟ ಮಾಡುತ್ತಿದ್ದಕ್ಕೆ ಪೋಲೀಸರು ಬೈಕ್ ಸವಾರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮೌನ ವರಿಸಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ರಾಜಿನಾಮೆ ನೀಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಾರಿಗೆ ಸಚಿವರನ್ನು ಕೆಳಗಿಳಿಸೋ ಅಭಿಯಾನ ಆರಂಭವಾಗಿದೆ.
ಹೈಕೋರ್ಟ್ ಆದೇಶದಂತೆ ಕಳೆದ ಜೂನ್ 16 ರಿಂದ ಬೈಕ್ ಟ್ಯಾಕ್ಸಿ ಯನ್ನು ಬೆಂಗಳೂರಿನಲ್ಲಿ ಬ್ಯಾನ್ ಮಾಡಲಾಗಿದೆ. ಇದಾದ ಕೂಡಲೇ ಬೆಂಗಳೂರಲ್ಲಿ ಟ್ರಾಫಿಕ್ ಪ್ರಮಾಣ ಹೆಚ್ಚಾಗಿದೆ. ಬೈಕ್ ಟ್ಯಾಕ್ಸಿ ಬ್ಯಾನ್ ಆಗುತ್ತಿದ್ದಂತೆ ಆಟೋದವರು ತಮ್ಮ ರೇಟ್ ಜಾಸ್ತಿ ಮಾಡಿದ್ದಾರೆ ಎಂದು ಪ್ರಯಾಣಿಕರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಬಹಳಷ್ಟು ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲು ವಿಡಿಯೋಗಳ ಮೂಲಕ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬೈಕ್ ಟ್ಯಾಕ್ಸಿ ಬ್ಯಾನ್ ಅನ್ನು ವಾಪಸ್ ಪಡೆಯಲು ಒತ್ತಾಯಿಸುತ್ತಿದ್ದಾರೆ.
ಇದು ಒಂದು ಕಡೆ ಅದರೆ ಬೈಕ್ ಟ್ಯಾಕ್ಸಿ ಸವಾರರು ಎಲ್ಲಡೆ ಪ್ರತಿಭಟನೆ ಮಾಡುತ್ತಿದ್ದಾರೆ. ಸಾಮಾಜಿಕ ಮಾದ್ಯಮಗಳಲ್ಲಿ ಈ ಕುರಿತು ಸಾಕಷ್ಟು ಪೋಸ್ಟ್ ಗಳನ್ನು ಸಹ ಹಾಕುತ್ತಿದ್ದಾರೆ. ಎಕ್ಸ್ ನಲ್ಲಿಯು ಅದಕ್ಕೆ ಬಹಳಷ್ಟು ಮಂದಿ ರಿಪೋಸ್ಟ್ ಮಾಡಿ ಬೈಕ್ ಸವಾರರಿಗೆ ಸಪೋರ್ಟ್ ಮಾಡುತ್ತಿದ್ದಾರೆ ಮತ್ತು ಮತ್ತೆ ಬೈಕ್ ಟ್ಯಾಕ್ಸಿ ಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ.
ಇತ್ತ ಈ ಬಗ್ಗೆ ಮೌನದಲ್ಲಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ. ಬೈಕ್ ಟ್ಯಾಕ್ಸಿ ಸವಾರರು ರಾಮಲಿಂಗಾ ರೆಡ್ಡಿ ಅವರು ರಾಜೀ ನಾಮೆ ಕೊಡುವಂತೆ ಪ್ರತಿಭಟನೆ ಮಾಡುತ್ತಿದ್ದಾರೆ. ಇಷ್ಟಾದರೂ ಸಚಿವರು ಮಾತ್ರ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇಂದು ಕೂಡ ಬೈಕ್ ಟ್ಯಾಕ್ಸಿ ಸವಾರರು ಎಲ್ಲೆಡೆ ಪ್ರತಿಭಟನೆ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಕರ್ನಾಟಕ ಸರ್ಕಾರವು ತಮ್ಮ ವ್ಯವಹಾರವನ್ನು ಬೆಂಬಲಿಸಬೇಕು ಮತ್ತು ತಮ್ಮ ವ್ಯವಹಾರಕ್ಕೆ ನಿಯಮಗಳನ್ನು ರೂಪಿಸಬೇಕೆಂದು ಒತ್ತಾಯ ಮಾಡುತ್ತಿದ್ದಾರೆ.
ಜೂನ್ 13 ರಂದು ಹೈಕೋರ್ಟ್‌ನ ವಿಭಾಗೀಯ ಪೀಠವು ಏಪ್ರಿಲ್ 2 ರಂದು ಏಕ ಸದಸ್ಯ ನ್ಯಾಯಾಧೀಶರು ನೀಡಿದ ಆದೇಶದ ಪ್ರಕಾರ ಎಲ್ಲಾ ಬೈಕ್ ಟ್ಯಾಕ್ಸಿ ಸೇವೆಗಳು ಆರು ವಾರಗಳಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ನಿರ್ದೇಶನ ನೀಡಿತ್ತು.
ಈ ಕ್ರಮವು ಸಾವಿರಾರು ಸವಾರರು ಮತ್ತು ಪ್ರಯಾಣಿಕರ ಮೇಲೆ ಪರಿಣಾಮ ಬೀರಿದೆ. ಪ್ರಮುಖ ಬೈಕ್ ಟ್ಯಾಕ್ಸಿ ಸಂಗ್ರಾಹಕ ವೇದಿಕೆಯ ಕಾರ್ಯನಿರ್ವಾಹಕರೊಬ್ಬರು, ಹೆಸರು ಬಹಿರಂಗಪಡಿಸಲು ಇಚ್ಛಿಸದ ಸ್ಥಿತಿಯಲ್ಲಿ ಮಾತನಾಡುತ್ತಾ, ಕರ್ನಾಟಕದಲ್ಲಿ ಆರು ಲಕ್ಷಕ್ಕೂ ಹೆಚ್ಚು ವ್ಯಕ್ತಿಗಳು ತಮ್ಮ ಜೀವನೋಪಾಯಕ್ಕಾಗಿ ಬೈಕ್ ಟ್ಯಾಕ್ಸಿ ಗಿಗ್‌ಗಳನ್ನು ಅವಲಂಬಿಸಿದ್ದಾರೆ ಎಂದು ಹೇಳಿದ್ದಾರೆ. ಅವರಲ್ಲಿ ಹೆಚ್ಚಿನವರು ತಿಂಗಳಿಗೆ ಸುಮಾರು ₹35,000 ಗಳಿಸುತ್ತಾರೆ, ಮತ್ತು ಈ ನಿಷೇಧವು ಅನೇಕ ಕುಟುಂಬಗಳನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಬಹುದು ಎಂದು ಹೇಳಿದ್ದರು. ಈ ಪ್ರತಿಭಟನೆಗಳು ಎಲ್ಲಿಯವರೆಗೂ ಹೊಗುತ್ತೆ ಮತ್ತು ಇಷ್ಟದರೂ ಈವರೆಗೂ ಯಾವುದೇ ಪ್ರತಿಕ್ರಿಯೆಯನ್ನು ರಾಮಲಿಂಗಾರೆಡ್ಡಿ ಅವರು ನೀಡಿಲ್ಲ. ಇದು ಬೈಕ್ ಟ್ಯಾಕ್ಸಿ ಚಾಲಕರ ಹೋರಾಟ ಮತ್ತಷ್ಟು ಹೆಚ್ಚುವಂತೆ ಮಾಡಿದೆ.