Sunday, September 8, 2024

Latest Posts

ಕಾಮನ್ ವೆಲ್ತ್ : ಬಿಂದ್ಯಾರಾಣಿಗೆ ಬೆಳ್ಳಿ ಪದಕ

- Advertisement -

ಬರ್ಮಿಂಗ್ ಹ್ಯಾಮ್: ವೇಟ್ ಲಿಫ್ಟರ್ ಬಿಂದ್ಯಾರಾಣಿ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದು ಮಿಂಚಿದ್ದಾರೆ. ಇದರೊಂದಿಗೆ ಭಾರತ ನಾಲ್ಕನೆ ಪದಕ ಗೆದ್ದಾಂತಾಗಿದೆ.

ಮಹಿಳೆಯರ 55ಕೆ.ಜಿ ವಿಭಾಗದಲ್ಲಿ ಬಿಂದ್ಯಾರಾಣಿ ಒಟ್ಟು 202 ಕೆ.ಜಿ(86ಕೆಜಿ- 116 ಕೆಜಿ) ಭಾರ ಎತ್ತುವ ಮೂಲಕ ಎರಡನೆ ಸ್ಥಾನ ಪಡೆದರು. ಈ ಪ್ರದರ್ಶನ್ ಬಿಂದ್ಯಾ ರಾಣಿ ಅವರ ಅತ್ಯುತ್ತಮ ಪ್ರದರ್ಶನವಾಗಿದೆ.

ಈ ವಿಭಾಗದಲ್ಲಿ ನೈಜಿರಿಯಾದ ಆದಿಜಿತ್ ಒಲರಿನೊಯ್ ಅವರು 203ಕೆ.ಜಿ. (92-111ಕೆಜಿ)ಎತ್ತಿ ಚಿನ್ನ ಪಡೆದರು. ಇಲ್ಲಿನ ಸ್ಥಳೀಯ ಪ್ರತಿಭೆ ಫ್ರೇರ್ ಮಾರೊ ಒಟ್ಟು 198 (86-109ಕೆಜಿ) ಭಾರ ಎತ್ತಿ ಕಂಚಿಗೆ ತೃಪ್ತಿಪಟ್ಟರು.

- Advertisement -

Latest Posts

Don't Miss