Political News: ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಎಸ್.ಈ.ಸುಧೀಂದ್ರ ಅವರು ಭಾರತ ಸರ್ಕಾರದ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲ ಅಭಿವೃದ್ಧಿ ಮತ್ತು ಶಿಕ್ಷಣ ಖಾತೆಯ ಸಚಿವರಾದ ಜಯಂತ್ ಚೌದರಿ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ, ರಾಜ್ಯದಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ, ಅಭಿವೃದ್ಧಿ ಮಂಡಳಿಯು ಕೈಗೊಂಡಿರುವ ಜೈವಿಕ ಇಂಧನ ಕಾರ್ಯಯೋಜನೆಗಳ ಉನ್ನತೀಕರಣ, ಮತ್ತು ವಾಾಣಿಜ್ಯೀಕರಣ ಚಟುವಟಿಕೆಗಳ ಕುರಿತು, ಸವಿಸ್ತಾರವಾಗಿ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಮಂಡಳಿಯ ಅಧ್ಯಕ್ಷರು ರಾಾಜ್ಯದಲ್ಲಿ ಜೈವಿಕ ಇಂಧನ ಅಭಿವೃದ್ಧಿಗೆ ಅಗತ್ಯವಾದ ಮಾನವ ಸಂಪನ್ಮೂಲ ಅಭಿವೃದ್ಧಿ ಜೊತೆಗೆ ಕೌಶಲ್ಯಾಭಿವೃದ್ಧಿ ಸಹ ಅಷ್ಟೇ ಪ್ರಮುಖವಾಗಿದೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು. ರಾಜ್ಯದಲ್ಲಿ ಬಯೋಡೀಸೆಲ್, ಕಂಪ್ರೆಸ್ಡ್ ಬಯೋಗ್ಯಾಸ್, ಗ್ರೀನ್ ಐಡ್ರೋಜನ್ ಮುಂತಾದ ಜೈವಿಕ ಇಂಧನಗಳ ಉತ್ಪಾದನೆಗೆ ಉತ್ಪಾದನಾ ನಿರ್ಮಾಣಕ್ಕೆ ಆಸಕ್ತಿ ತೋರುತ್ತಿದ್ದು, ಈ ಸಂಂದರ್ಭದಲ್ಲಿ ಮಂಡಳಿಯು ಅಗತ್ಯ ಮಾನವ ಸಂಪನ್ಮೂಲ ಘಟಕಗಳ ನಿರ್ಮಾಣ, ಉತ್ಪಾದನೆಗೆ ಪೂರಕವಾಗಿ ನಿರ್ಮಾಣ ಕಾರ್ಯ, ಉತ್ಪಾದನೆ, ವಿವಿಧ ಯಂತ್ರೋಪಕರಣಗಳ ಜೋಡಣೆ, ರಿಪೇರಿ ಕಾರ್ಯಗಳು, ಯಂತ್ರಗಳ ದುರಸ್ತಿ ಸಂಬಂಧಿಸಿದಂತೆ ತರಬೇತಿಯನ್ನು ನೀಡುವುದರೊಂದಿಗೆ ಕೌಶಲ್ಯ ಸೃಜನೆಗೆ ಒತ್ತು ನೀಡಿ, ಸಿದ್ಧಗೊಳಿಸಬೇಕಾಗಿರುವುದು ಅಗತ್ಯವಾಗಿದೆ ಎಂದು ಕೇಂದ್ರ ಸಚಿವರ ಮುಂದೆ ಮಂಡಳಿಯ ಅಧ್ಯಕ್ಷರು ಪ್ರತಿಪಾದಿಸಿದರು.
ಮಂಡಳಿಯು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿರುವ ಜೈವಿಕ ಇಂಧನ ಸಂಶೋಧನೆ ಮತ್ತು ಗುಣಮಟ್ಟ ಖಾತ್ರಿ, ಪ್ರಯೋಗ ಶಾಲೆ ಮತ್ತು ಕೈಗೊಳ್ಳಲಾಗುತ್ತಿರುವ ಪರೀಕ್ಷೆ, ನೀಡುವಿಕೆ, ಎನ್ಎನ್ಎಬಿಎಲ್ ಆ್ಯಕ್ರಿಡೇಶನ್ ಹೊಂದಿರುವ ಕುರಿತು ಸಹ ವಿವರಿಸಿದರು.