Saturday, April 12, 2025

Latest Posts

ಟಿಕೇಟ್ ಗೊಂದಲದ ನಡುವೆಯೂ ಸ್ವರೂಪ್ ಬರ್ತ್‌ಡೇ ಸೆಲೆಬ್ರೇಷನ್..

- Advertisement -

ಹಾಸನ : ಟಿಕೆಟ್ ಗೊಂದಲದ ನಡುವೆಯೂ ನೂರಾರು ಅಭಿಮಾನಿಗಳು, ಬೆಂಬಲಿಗರು ಎಚ್.ಪಿ.ಸ್ವರೂಪ್ ಹುಟ್ಟುಹಬ್ಬ ಆಚರಿಸಿದ್ದಾರೆ. 40ನೇ ವಸಂತಕ್ಕೆ ಕಾಲಿಟ್ಟಿರುವ ಸ್ವರೂಪ್, ತಮ್ಮ ನಿವಾಸದೆದುರು ಇಂದು ಕೇಕ್ ಕತ್ತರಿಸುವ ಮೂಲಕ ಜೆಡಿಎಸ್ ಕಾರ್ಯಕರ್ತರು, ತಮ್ಮ ಬೆಂಬಲಿಗರೊಂದಿಗೆ ಹುಟ್ಟುಹಬ್ಬವನ್ನ ಸೆಲೆಬ್ರೇಟ್ ಮಾಡಿದ್ದಾರೆ.

ಜೆಡಿಎಸ್ ಟಿಕೇಟ್‌ ಆಕಾಂಕ್ಷಿ, ಸ್ವರೂಪ್ ಮನೆ ಬಳಿ ಬಂದ ನೂರಾರು ಬೆಂಬಲಿಗರು ತನ್ನ ಹತ್ತಕ್ಕೂ ಹೆಚ್ಚು ಕೇಕ್‌ಗಳನ್ನ ಸ್ವರೂಪ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ನಂತರ ಮಾತನಾಡಿದ ಅವರು, ಪ್ರತಿ ವರ್ಷ ನಮ್ಮ ಸ್ನೇಹಿತರು, ಕುಟುಂಬಸ್ಥರು ಖುಷಿಯಿಂದ  ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದೆವು. ಚುನಾವಣೆ ಹತ್ತಿರ ಇರುವುದರಿಂದ ನೀತಿ ಸಂಹಿತೆ ಜಾರಿಯಾಗಿದೆ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸ್ನೇಹಿತರು ಬಂದಿಲ್ಲ. ಆದರು ಕುಟುಂಬದವರು, ಸ್ನೇಹಿತರು ಒಗ್ಗಟ್ಟಾಗಿ ಕೇಕ್ ಕಟ್ ಮಾಡಿದ್ದಾರೆ. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದೇನೆ, ಎಲ್ಲರಿಗೂ ಒಳ್ಳೆದಾಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಅವರು ಹೇಳಿರುವುದನ್ನು ನಾನು ಮಾಧ್ಯಮದಲ್ಲಿ ಗಮನಿಸಿದ್ದೇನೆ. ದೇವೇಗೌಡರು, ಕುಮಾರಣ್ಣ, ರೇವಣ್ಣ ಅವರು ಎರಡನೇ ಪಟ್ಟಿಯಲ್ಲಿ ಘೋಷಣೆ ಮಾಡ್ತಾರೆ. ಅಂತಿಮವಾಗಿ ಯಾರಿಗೆ ಟಿಕೆಟ್ ಘೋಷಣೆ ಮಾಡಿದರೂ ನಾವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡ್ತೇವೆ. ನೂರಕ್ಕೆ ನೂರು ಭಾಗ ಜೆಡಿಎಸ್ ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ, ಹಾಸನದಲ್ಲಿ ಈ ಭಾರಿ ಜೆಡಿಎಸ್ ಗೆಲುವು ಸಾಧಿಸುತ್ತೆ. ಎರಡನೇ ಪಟ್ಟಿ ಬಿಡುಗಡೆ ಆಗಬೇಕು, ಇನ್ನೂ ಎರಡನೇ ಪಟ್ಟಿ ಬಿಡುಗಡೆ ಆಗಿಲ್ಲ. ಹಿರಿಯರೆಲ್ಲಾ ಅಂತಿಮವಾಗಿ ಯಾರು ಅಭ್ಯರ್ಥಿ ಅಂಥ ಘೋಷಣೆ ಮಾಡ್ತಾರೆ ಅವರಿಗೆ ನಾವೆಲ್ಲ ಕೆಲಸ ಮಾಡ್ತಿವಿ. ಸಾಮಾನ್ಯ ಕಾರ್ಯಕರ್ತ ಅಂತ ಯಾರಿಗೆ ಅಂತಿಮವಾಗಿ ತೀರ್ಮಾನ ಮಾಡ್ತಾರೆ ನೋಡೋಣ ಎಂದು ಸ್ವರೂಪ್ ಹೇಳಿದ್ದಾರೆ.

ಇನ್ನೆರಡು ದಿನಗಳಲ್ಲಿ ಬಹುತೇಕ ಎರಡನೇ ಪಟ್ಟಿ ಬಿಡುಗಡೆ ಆಗುತ್ತೆ. ಅದರಲ್ಲಿ ಗೊತ್ತಾಗುತ್ತೆ ಯಾರು ಅಭ್ಯರ್ಥಿ ಅಂತ. ಖಂಡಿತವಾಗಿಯೂ ನಾನು ಆಕಾಂಕ್ಷಿ ಇದ್ದೀನಿ, ವಿಶ್ವಾಸವಿದೆ. ಪಕ್ಷದ ಕಾರ್ಯಕರ್ತರು, ಸ್ನೇಹಿತರು ಒಗ್ಗಟ್ಟಿನಿಂದ ಕೆಲಸ ಮಾಡಲು ಕಾತುರದಿಂದ ಕಾಯ್ತ ಇದ್ದೀವಿ. ಚುನಾವಣೆ ಅಂದಮೇಲೆ ಎಲ್ಲರನ್ನೂ ಒಗ್ಗೂಡಿಸಿ, ಒಗ್ಗಟ್ಟಿನಿಂದ ಹೋದರೆ ಮಾತ್ರ ಗೆಲುವು ಸಾಧಿಸಲು ಆಗುತ್ತೆ ಎಂದು ಸ್ವರೂಪ್ ಹೇಳಿದ್ದಾರೆ.

ಇವತ್ತು ಕೂಡ ಹಾಸನಕ್ಕೆ ನಮ್ಮ ಪಕ್ಷದಿಂದ ಯಾರಿಗೆ ಟಿಕೆಟ್ ಕೊಟ್ಟರು ಗೆಲ್ಲಿಸುವ ಕೆಲಸ ಮಾಡಲು ಎಲ್ಲಾ ಕಾರ್ಯಕರ್ತರು ಕಾಯ್ತಾ ಇದ್ದಾರೆ. ಯಾರು ನನ್ನ ಜೊತೆ ಚರ್ಚೆ ಮಾಡಿಲ್ಲ, ನಾವು ಪ್ರಚಾರ ಮಾಡ್ತಾ ಇದ್ದೀವಿ. ಮಾಧ್ಯಮದವರು ಪ್ರಚಾರ ಮಾಡುತ್ತಿದ್ದಾರೆ ನಿಮಗೆಲ್ಲಾ ಧನ್ಯವಾದ ಹೇಳ್ತಿನಿ. ಈಗ ನಗರದಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದೇವೆ. ಇಲ್ಲಿ ವಿರುದ್ಧ ಪ್ರಶ್ನೆ ಉದ್ಭವವಾಗಲ್ಲ. ರೇವಣ್ಣ ಸಾಹೇಬರು ಯಾರಿಗೆ ಟಿಕೆಟ್ ಘೋಷಣೆ ಮಾಡಿದ್ರು ಕೂಡ ನಾವೆಲ್ಲ ಗೆಲ್ಲಿಸುವ ಕೆಲಸ ಮಾಡ್ತಿವಿ ಎಂದು ಸ್ವರೂಪ್ ಹೇಳಿದ್ದಾರೆ.

‘ಅಧಿಕಾರ ನಶ್ವರ, ಶಿವಲಿಂಗೇಗೌಡ್ರು ಮಾಡಿರೋ ಅಭಿವೃದ್ದಿಯ ಕೆಲಸ ಅಜರಾಮರ, ಮತದಾರರೇ ಈಶ್ವರ ‘

ಕೋಲಾರದಲ್ಲಿ ಕಾಂಗ್ರೆಸ್‌ಗೆ ಬಿಗ್ ಶಾಕ್: ಆನಂದ್ ರೆಡ್ಡಿ ಜೆಡಿಎಸ್‌ಗೆ ಸೇರ್ಪಡೆ

‘ಹೈಕಮಾಂಡ್ ಜೊತೆ ಮಾತನಾಡಿ ಟಿಕೇಟ್ ಕೊಟ್ಟೇ ಕೊಡಿಸುತ್ತೇವೆ. ಗೆಲ್ಲಿಸುವುದು ನಿಮ್ಮ ಕೆಲಸ’

- Advertisement -

Latest Posts

Don't Miss