www.karnatakatv.net : ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ 58 ವಾರ್ಡಗಳ ಚುನಾವಣೆ ದಿನಾಂಕ ಘೋಷಣೆ ಆಗಿದ್ದು ಬೆಳಗಾವಿ ಪಾಲಿಕೆ ಚುನಾವಣೆಗೆ ಬಿಜೆಪಿ ವತಿಯಿಂದ ಟಿಕೆಟಗಾಗಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಸರತಿ ಸಾಲು . ಬೆಳಗಾವಿ ನಗರದ ಮಹಾವೀರ ಭವನದಲ್ಲಿ ಬಿಜೆಪಿ ಟಿಕೆಟಗಾಗಿ ಅಭ್ಯರ್ಥಿಗಳಿಂದ ಅರ್ಜಿ ಪಡೆದುಕೊಳ್ಳುತ್ತಿದ್ದು ಅಭ್ಯರ್ಥಿಗಳಿಂದ ಮಾಹಿತಿ ಪಡೆದುಕೊಂಡು ಅಭ್ಯರ್ಥಿಗಳ ಕಡೆಯಿಂದ ಅರ್ಜಿಯನ್ನ ಸ್ವೀಕರಿಸಿದರು.
ಈ ಸಮಯದಲ್ಲಿ ಬೆಳಗಾವಿ ಉತ್ತರ ಭಾಗದ ಶಾಸಕ ಅನಿಲ್ ಬೆನಕೆ ಮಾತನಾಡಿ ಸಮಿತಿಯ ಕೆಲ ಸದಸ್ಯರು ಬಿಜೆಪಿ ಟಿಕೆಟ್ ಕೇಳಿದ್ದಾರೆ ಬೆಳಗಾವಿ ಪಾಲಿಕೆ ರಾಜ್ಯದ ಹೆಮ್ಮೆಯ ಪಾಲಿಕೆ. ಕಳೆದ26 ವರ್ಷಗಳ ಬಳಿಕ ಪಕ್ಷದ ಚಿಹ್ನೆಯ ಮೂಲಕ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ ಹಿನ್ನೆಲೆಯಲ್ಲಿ ಪ್ರತಿ ವಾಡ್೯ನಲ್ಲಿ ಹತ್ತು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ಉತ್ತರ ಮತಕ್ಷೇತ್ರದ ಶಾಸಕ ಅನಿಲ್ ಬೆನಕೆ ಹೇಳಿದರು.
ಶುಕ್ರವಾರ ನಗರದ ಮಹಾವೀರ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಲೇ ಪಾಲಿಕೆಯ ಚುನಾವಣೆಗೆ ಪ್ರತಿ ವಾಡ್೯ನಿಂದ ಹತ್ತು ಜನ ಆಕಾಂಕ್ಷೆಗಳು ಬಿಜೆಪಿ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಚುನಾವಣೆ ಎದುರಿಸಲು ಉತ್ಸುಕ ಇರುವವರಿಗೆ ಕೌನ್ಸಿಲ್ ನಡೆಸಲಾಗುತ್ತಿದೆ. ಟಿಕೆಟ್ ಯಾರಿಗೆ ಸಿಕ್ಕರೂ ಕೊನೆಗೆ ಪಕ್ಷದ ಪರವಾಗಿ ಕೆಲಸ ಮಾಡುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.
ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣದ ಸಮಿತಿಯಿಂದ ಕಳೆದ ಬಾರಿ ಸ್ಪರ್ಧೆ ಮಾಡಿದ್ದ ಸದಸ್ಯರೂ ಸಹ ಬಿಜೆಪಿಯಿಂದ ಟಿಕೆಟ್ ಕೇಳುತ್ತಿದ್ದಾರೆ. ಅವರಿಗೂ ಸಹ ಕೌನ್ಸಿಲ್ ನಲ್ಲಿ ಭಾಗಿಯಾಗಬೇಕೆಂದು ತಿಳಿಸಿದ್ದೇವೆ. ಈ ಕುರಿತು ಪಕ್ಷ ತಿರ್ಮಾನಿಸುತ್ತೆ ಎಂದರು.
ಶಾಸಕ,ಸಚಿವರ ಬೆಂಬಲಿಗರಿಗೆ ಪಾಲಿಕೆಯ ಚುನಾವಣೆಯಲ್ಲಿ ಸ್ಪರ್ಧೆ ನಡೆಸಲು ಅವಕಾಶ ಇಲ್ಲ. ಇದು ಕಾರ್ಯಕರ್ತರ ಚುನಾವಣೆ ನಿಷ್ಠಾವಂತ, ಪ್ರಾಮಾಣಿಕ ಬಿಜೆಪಿ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗುವುದು ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ನಾಗೇಶ್ ಕುಂಬಳಿ ಕರ್ನಾಟಕ ಟಿವಿ ಬೆಳಗಾವಿ


