Wednesday, November 29, 2023

Latest Posts

ಸಿಎಂ ರಾಜೀನಾಮೆಗೆ ಆಗ್ರಹಿಸಿ ನಾಳೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

- Advertisement -

ಬೆಂಗಳೂರು: ಸಚಿವರುಗಳ ಸಾಮೂಹಿಕ ರಾಜೀನಾಮೆ ಪಡೆಯೋ ಮೂಲಕ ಸಚಿವ ಸಂಪುಟ ಪುನಾರಚಿಸಿ ಅತೃಪ್ತರನ್ನು ಒಲಿಸಿಕೊಳ್ಳೋ ದೋಸ್ತಿಗಳ ನಡೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಸಿಎಂ ರಾಜೀನಾಮೆ ನೀಡಬೇಕು ಅಂತ ಆಗ್ರಹಿಸಿ ನಾಳೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಲಿದೆ.

ರಾಜಕೀಯ ಚದುರಂಗದಾಟದಲ್ಲಿ ಮುಳುಗಿಹೋಗಿರೋ ರಾಜ್ಯ ರಾಜಕಾರಣಿಗಳ ಒಂದೊಂದೂ ನಡೆ ಒಂದೊಂದು ರೀತಿಯ ತಿರುವು ಪಡೆದುಕೊಳ್ತಿದೆ. ಸಚಿವರುಗಳ ರಾಜೀನಾಮೆ ಪಡೆದು ಅತೃಪ್ತರನ್ನು ಸಾಮಾಧಾನ ಮಾಡೋಣ ಅಂತ ಎಣಿಸಿದ್ದ ದೋಸ್ತಿಗಳ ನಡೆ ಬಿಜೆಪಿಯನ್ನು ಕಂಗೆಡಿಸಿದೆ. ಸದ್ದಿಲ್ಲದೆ ಅಪರೇಷನ್ ನಡೆಸ್ತಿರೋ ಕಮಲ ನಾಯಕರು ಇನ್ನೇನು ಮೈತ್ರಿ ಸರ್ಕಾರ ಪತನವಾಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ರು. ಆದ್ರೆ ದೋಸ್ತಿಗಳು ಸಾಮೂಹಿಕ ರಾಜೀನಾಮೆ ತಂತ್ರ ಅನುಸರಿಸಿ ಪಾರಾಗುವ ಯತ್ನ ನಡೆಸಿದ್ರು. ಆದ್ರೆ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರೋ ಬಿಜೆಪಿ ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಅಂತ ಆಗ್ರಹಿಸಿ ನಾಳೆ ಪ್ರತಿಭಟನೆ ನಡೆಸಲಿದೆ. ಈ ಕುರಿತು ಮಾಹಿತಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ರಾಜ್ಯದಲ್ಲಿ ಸರ್ಕಾರವೇ ಇಲ್ಲದಂತಾಗಿದೆ, ಅಲ್ಲದೆ ಸಚಿವರೂ ಇಲ್ಲದೆ ಇರೋದ್ರಿಂದ ಸಿಎಂ ಕೂಡಲೇ ರಾಜೀನಾಮೆ ನೀಡಬೇಕು, ಈ ಕುರಿತಂತೆ ನಾಳೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಲಿದೆ ಅಂತ ಹೇಳಿದ್ರು.

ಯಾರಾಗ್ತಾರೆ ಮುಂದಿನ ಸಿಎಂ..?ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=Q0csvcKK3qc
- Advertisement -

Latest Posts

Don't Miss