ಮಂಡ್ಯ:ಮಂಡ್ಯದ ಪಾಂಡವಪುರದಲ್ಲಿಂದು ಬಿ.ವೈ ವಿಜಯೇಂದ್ರ ಪ್ರಚಾರ ನಡೆಸಿದ್ದು, ಮಂಡ್ಯ ಜಿಲ್ಲೆಯನ್ನು ಹಾಡಿ ಹೊಗಳಿದ್ದಾರೆ.
ಶಿಕಾರಿಪುರದಲ್ಲಿ ನಾಮಪತ್ರ ಸಲ್ಲಿಸಿ ರಾಜ್ಯ ಪ್ರವಾಸ ಮಾಡಿದ್ದೇನೆ. ವಿಜಯೇಂದ್ರನನ್ನು ಪರಿಚಯ ಮಾಡಿಕೊಟ್ಟ ಹಳೆ ಮೈಸೂರು ಭಾಗದಿಂದ ಚುನಾವಣಾ ಪ್ರಚಾರ ಮಾಡಿದ್ದೇನೆ. ಯಡಿಯೂರಪ್ಪ ಅವರ ಹುಟ್ಟೂರು ಮಂಡ್ಯ ಜಿಲ್ಲೆ. ಮೋದಿಜೀ, ಯಡಿಯೂರಪ್ಪ, ಬೊಮ್ಮಾಯಿ ಅವರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಮೇಲುಕೋಟೆ ಕ್ಷೇತ್ರದ ಜನ ಬಿಜೆಪಿಗೆ ಆಶೀರ್ವಾದ ಮಾಡಬೇಕು ಎಂದು ವಿಜಯೇಂದ್ರ ಹೇಳಿದ್ದಾರೆ.
ಮೇಲುಕೋಟೆ ಬಿಜೆಪಿ ಅಭ್ಯರ್ಥಿ ಇಂದ್ರೇಶ್ ಹಲವು ವರ್ಷದಿಂದ ಸೇವೆ ಮಾಡಿಕೊಂಡು ಬರ್ತಾ ಇದ್ದಾರೆ. ಇಂದ್ರೇಶ್ ಅವರನ್ನು ಗೆಲ್ಲಿಸುವ ಮೂಲಕ ಬಿಜೆಪಿ ಬೆಂಬಲಿಸಬೇಕು. ಯಡಿಯೂರಪ್ಪ ಅವರು ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಯಾರು ಸಹ ಜಾತಿ-ಮತವನ್ನು ನೋಡಬಾರದು. ಬಿಜೆಪಿ ಎಲ್ಲಾ ವರ್ಗದ ಜನರ ಅಭಿವೃದ್ಧಿಗೆ ಬಿಜೆಪಿ ಇದೆ. ಕೆ.ಆರ್.ಪೇಟೆಯಲ್ಲಿ ಆರಂಭವಾಗಿರುವ ಬಿಜೆಪಿ ವಿಜಯಯಾತ್ರೆ ಮೇಲುಕೋಟೆಯಲ್ಲಿ ಮುಂದುವರೆಯಬೇಕು. ಎಲ್ಲಾ ಮತದಾರರು ಬಿಜೆಪಿ ಪಕ್ಷವನ್ನು ಬೆಂಬಲಿಸಬೇಕು ಎಂದು ವಿಜಯೇಂದ್ರ ಹೇಳಿದ್ದಾರೆ.
‘ನನ್ನ ಶಾಲೆಯ ಅಡ್ಮಿಷನ್‌ಗಾಗಿ ಸಿಎಂ ಕಡೆಯಿಂದ ಹೇಳಿಸಿದರೂ ನನಗೆ ಸೀಟ್ ಸಿಗಲಿಲ್ಲ’
‘ಬಿಜೆಪಿ ಏಜೆಂಟರಂತೆ ವರ್ತಿಸುತ್ತಿರುವ ಬಿಇಓ ಬಲರಾಮ್‌ರನ್ನ ವರ್ಗಾವಣೆ ಮಾಡಿ’
ಲಿಂಗಾಯಿತ ಸಿಎಂ ಭ್ರಷ್ಟಾಚಾರಿ ಎಂಬ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಬಿಜೆಪಿ ಟ್ವೀಟ್..