Friday, November 22, 2024

Latest Posts

ಬಿಜೆಪಿಯಲ್ಲಿ ಗ್ರಾಮ ಸಂಪರ್ಕ ಯಾತ್ರೆಗೆ ಸಿದ್ದತೆ!

- Advertisement -

political news :

ರಾಜ್ಯದಲ್ಲಿ ಚುನಾವಣಾ ಹತ್ತಿರ ಆಗ್ತಿದ್ದಂತೆ  ಚುನಾವಣ ಕಾವು ಮತ್ತಷ್ಟು ಹೆಚ್ಚಳವಾಗುತ್ತಿದೆ. ಈ ಪೈಕಿ ಎಲ್ಲ ಪಕ್ಷಗಳು ಕೂಡ ಒಂದಲ್ಲ ಒಂದು ರೀತಿ ಚುನಾವಣಾ ರಣತಂತ್ರಗಳನ್ನ ಎಣೆಯತ್ತಲೇ ಇವೆ. ಈ ಹಿನ್ನಲೆ ರಾಜ್ಯದಲ್ಲಿ ಗ್ರಾಮೀಣ ಜನರು ಮತಗಳನ್ನ ಪಡೆಯಲ ಬಿಜೆಪಿ ಕಾರ್ಯತಂತ್ರ ರೂಪಿಸಿದ್ದು  ಗ್ರಾಮ ಸಂಪರ್ಕ ಯಾತ್ರೆ ನಡೆಸಲು ಸಿದ್ದತೆ ನಡೆಸಿದೆ. ಮುಂದಿನ ಶುಕ್ರವಾರದಿಂದ ಹಲವು ರಾಜ್ಯಗಳಲ್ಲಿ ‘ಗ್ರಾಮ ಸಂಪರ್ಕ ಯಾತ್ರಾ’  ಆರಂಭಿಸಲು ಬಿಜೆಪಿ ಯುವ ಮೋರ್ಚಾ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಸೂಚನೆ ಮೇರೆಗೆ ಈ ನಿರ್ಧಾರ ಹೊರಬಿದ್ದಿದೆ. ಕಳೆದ ವರ್ಷಾಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯುವಮೋರ್ಚಾ ಪದಾಧಿಕಾರಿಗಳನ್ನು ಭೇಟಿಯಾಗಿದ್ದರು. ಈ ವೇಳೆ ಮೋದಿ ಅವರು ನೀಡಿದ ಸಲಹೆಯ ಅನ್ವಯ ಈ ಸಂಪರ್ಕ ಕಾರ್ಯಕ್ರಮ ಆರಂಭವಾಗುತ್ತಿದೆ. ಜನವರಿ 20ರಿಂದಲೇ ಯುವ ಮೋರ್ಚಾ ಕಾರ್ಯಕರ್ತರು ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಲಿದ್ದಾರೆ. ಆರಂಭದಲ್ಲಿ ಗುಜರಾತ್, ರಾಜಸ್ಥಾನ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತ್ರಿಪುರ ರಾಜ್ಯಗಳಿಗೆ ಭೇಟಿ ನೀಡಲಿರುವ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಜಾರಿಗೆ ಬಂದಿರುವ ಹಲವು ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಯತ್ನಿಸುತ್ತಿದ್ದಾರೆ.

ಈ ಕುರಿತು ಟ್ವಿಟರ್​ನಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ‘ಗಡಿ ಗ್ರಾಮಗಳ ಸಂಪರ್ಕ ಯಾತ್ರೆಯು ಜನವರಿ 20ರಿಂದ ಆರಂಭವಾಗಲಿದೆ. ನಮ್ಮ ಯುವ ಕಾರ್ಯಕರ್ತರು ಗುಜರಾತ್, ರಾಜಸ್ಥಾನ, ಪಶ್ಚಿಮ ಬಂಗಾಳ, ಅಸ್ಸಾಂ, ತ್ರಿಪುರ ರಾಜ್ಯಗಳ ಹಲವು ಗ್ರಾಮಗಳಿಗೆ ಭೇಟಿ ನೀಡಿ ಮೋದಿ ಆಡಳಿತದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಅಧ್ಯಯನ ಮಾಡಲಿದ್ದಾರೆ. ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಸ್ಥಳೀಯರೊಂದಿಗೆ ಚರ್ಚೆ ನಡೆಸಲಿದ್ದಾರೆ’.

ರಾಜ್ಯಕ್ಕಿಂದು ಭೇಟಿ ನೀಡಲಿರುವ ಪ್ರಧಾನಿ ಮೋದಿ!

 

 

ಬೇರೆ ಪಕ್ಷದ ನಾಯಕರನ್ನು ಸಂಪರ್ಕ ಮಅಡುವ ಮುಖಾಂತರ ಬಿಜೆಪಿಗೆ ಸಳೆಯಲು ಮುಂದಾದ ಕಮಲ

- Advertisement -

Latest Posts

Don't Miss