Political News: ಉಡುಪಿಯಲ್ಲಿಂದು ಮಾಧ್ಯಮದೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪೌರತ್ವ ಕಾಯ್ದೆಯನ್ನು ಕೇವಲ ಚುನಾವಣೆಯ ದೃಷ್ಡಿಯಿಂದ ಕೇಂದ್ರ ಬಿಜೆಪಿ ಸರ್ಕಾರ ಜಾರಿ ಮಾಡಿದ್ದು, ಬಿಜೆಪಿಯವರಿಗೆ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಭಯ ಕಾಡುತ್ತಿರುವುದರಿಂದ ಈ ರೀತಿಯ ಗಿಮಿಕ್ಸ್ ಗಳನ್ನು ಮಾಡಿದ್ದಾರೆ ಎಂದರು.
ಇಷ್ಟು ವರ್ಷಗಳ ಕಾಲ ಸಿಎಎ ಬಗ್ಗೆ ಮೌನವಹಿಸಿ, ಚುನಾವಣೆಯ ಹೊಸ್ತಿಲಲ್ಲಿ ಜಾರಿಗೊಳಿಸಿದ್ದಾರೆ. ರಾಜ್ಯದಲ್ಲಿ ಸಿಎಎ ಜಾರಿ ಬಗ್ಗೆ ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಜಯಪ್ರಕಾಶ್ ಹೆಗಡೆಯವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಕರಾವಳಿ ಪ್ರದೇಶದಲ್ಲಿ ಪಕ್ಷಕ್ಕೆ ಬಲ ತುಂಬಿದಂತಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕಾಯ್ದೆ ಪ್ರಕಾರ, 2014ಕ್ಕೂ ಮುನ್ನ ಯಾರು ಭಾರತಕ್ಕೆ ಬಂದು ನೆಲೆಸಿದ್ದಾರೋ, ಅವರು ಭಾರತಕ್ಕೆ ಬಂದು 6 ವರ್ಷ ಪೂರ್ಣಗೊಂಡಿದ್ದರೆ, ಅವರಲ್ಲಿ ಮುಸ್ಲಿಮೇತರರಿಗೆ ಅಂದ್ರೆ, ಕ್ರಿಶ್ಚಿಯನ್, ಸಿಕ್, ಬೌದ್ಧ ಪಾರ್ಸಿ, ಜೈನ ಸಮುದಾಯದವರಿಗೆ ಭಾರತೀಯ ಪೌರತ್ವ ನೀಡಲಾಗುತ್ತದೆ.
ಯುವರಾಜರೇ ರಾಜರಾಗಿರಿ ಮಂತ್ರಿಯಾಗಬೇಡಿ: ಯದುವೀರ್ ಒಡೆಯರ್ ಅಭಿಮಾನಿಗಳ ಅಭಿಯಾನ
ಸರಕಾರಿ ಕಾರ್ಯಕ್ರಮಕ್ಕೆ ಬರದಿದ್ದರೆ ಗ್ಯಾರಂಟಿ ಯೋಜನೆ ಬಂದ್: ಅಂಗನವಾಡಿ ಕಾರ್ಯಕರ್ತೆಯ ‘ಗ್ಯಾರಂಟಿ’ ಬೆದರಿಕೆ

