Political News: ನಿನ್ನೆ ಸಂಸದ ಡಿ.ಕೆ.ಸುರೇಶ್ ಮಾತನಾಡಿ, ಕೇಂದ್ರ ಸರ್ಕಾರ ಹೀಗೆ ಮಾಡಿದರೆ, ನಾವು ಮುಂದೊಂದು ದಿನ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಡಬೇಕಾಗುತ್ತದೆ ಎಂದು ಹೇಳಿದ್ದರು. ಈ ಬಗ್ಗೆ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿ, ಕಾಂಗ್ರೆಸ್ ಪಕ್ಷದ ಬಗ್ಗೆ, ಸುರೇಶ್ ಬಗ್ಗೆ ಆಕ್ರೋಶ ಹೊರಹಾಕಿದ್ದರು.
ಈ ಬೆಳವಣಿಗೆ ನಡುವೆ, ತಮ್ಮನ ಪರ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡುವ ಮೂಲಕ ಬ್ಯಾಟ್ ಬೀಸಿದ್ದಾರೆ. ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ಜನರ ಭಾವನೆ, ಬೇಸರ ಮತ್ತು ಅಭಿಪ್ರಾಯದ ಬಗ್ಗೆ ಸಂಸದ ಶ್ರೀ ಡಿ.ಕೆ.ಸುರೇಶ್ ಅವರು ಕನ್ನಡಿ ಹಿಡಿದಿರುವುದನ್ನು ಬಿಜೆಪಿಯವರು ತಿರುಚುತ್ತಿದ್ದಾರೆ. ಭಾರತದ ಐಕ್ಯತೆ, ಅಖಂಡತೆ ಬಗ್ಗೆ ನಮ್ಮ ಬದ್ಧತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ. ನಾವೆಲ್ಲಾ ಭಾರತ ಮಾತೆಯ ಮಕ್ಕಳು. ಹೀಗಿರುವಾಗ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಡಿಕೆಶಿ ಟ್ವೀಟ್ ಮಾಡಿದ್ದಾರೆ.
ನಿನ್ನೆ ನವದೆಹಲಿಯಲ್ಲಿ ಮಾತನಾಡಿದ್ದ ಸಂಸದ ಡಿ.ಕೆ.ಸುರೇಶ್, ನಮ್ಮ ದುಡ್ಡು ನಮಗೆ ಕೊಟ್ರೆ ಸಾಕಾಗಿದೆ. ನಮ್ಮ ಬೇಡಿಕೆ ಏನಿದೆ, ಜಿಎಸ್ಟಿ ಮತ್ತು ರಾಜ್ಯದಿಂದ ಬರ್ತಕ್ಕಂಥ ಕಸ್ಟಮ್ಸ್ , ಅದರ ಪಾಲನ್ನು ನಮಗೆ ಸಮವಾಗಿ ಕೊಡಬೇಕಾಗಿದೆ. ದಕ್ಷಿಣ ಭಾರತಕ್ಕೆ ಬಹಳಷ್ಟು ಅನ್ಯಾಯವಾಗುತ್ತಿರುವುದನ್ನು ನಾವು ಪ್ರತೀ ಹಂತದಲ್ಲೂ ನೋಡುತ್ತಿದ್ದೇವೆ. ಒಟ್ಟಾರೆಯ ನಮ್ಮ ಪಾಲಿನ ಅಭಿವೃದ್ಧಿಯ ಹಣ, ಉತ್ತರ ಭಾರತದ ಕಡೆ ತೆಗೆದುಕೊಂಡು ಹೋಗಿ ಹಂಚುತ್ತಿದ್ದಾರೆ.
ನಮಗೆ ಎಲ್ಲ ವಿಚಾರಗಳಲ್ಲೂ ಅನ್ಯಾಯವಾಗುತ್ತಿದೆ. ನಾವು ಮುಂದೆ ಅದನ್ನು ಖಂಡಿಸದಿದ್ದಲ್ಲಿ, ನಾವು ಮುಂದೊಂದು ದಿನ ಪ್ರತ್ಯೇಕ ರಾಷ್ಟ್ರಕ್ಕೂ ಕೂಡ ಬೇಡಿಕೆ ಇಡಬೇಕಾದ ಅನಿವಾರ್ಯ ಬಂದೊದಗುವ ಸಾಧ್ಯತೆ ಇರುತ್ತದೆ. ಇಂಥದ್ದೊಂದು ಪ್ರರಿಸ್ಥಿತಿಯನ್ನು ಹಿಂದಿ ಪ್ರದೇಶದವರು ನಮ್ಮ ಮೇಲೆ ಹೇರುತ್ತಿದ್ದಾರೆ ಎಂದು ಡಿ.ಕೆ.ಸುರೇಶ್ ಹೇಳಿದ್ದರು.
ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ಜನರ ಭಾವನೆ, ಬೇಸರ ಮತ್ತು ಅಭಿಪ್ರಾಯದ ಬಗ್ಗೆ ಸಂಸದ ಶ್ರೀ ಡಿ.ಕೆ.ಸುರೇಶ್ ಅವರು ಕನ್ನಡಿ ಹಿಡಿದಿರುವುದನ್ನು ಬಿಜೆಪಿಯವರು ತಿರುಚುತ್ತಿದ್ದಾರೆ. ಭಾರತದ ಐಕ್ಯತೆ, ಅಖಂಡತೆ ಬಗ್ಗೆ ನಮ್ಮ ಬದ್ಧತೆಯನ್ನು ಯಾರೂ ಪ್ರಶ್ನಿಸುವಂತಿಲ್ಲ. ನಾವೆಲ್ಲಾ ಭಾರತ ಮಾತೆಯ ಮಕ್ಕಳು. ಹೀಗಿರುವಾಗ…
— DK Shivakumar (@DKShivakumar) February 1, 2024
ಬಿಗ್ಬಾಸ್ ಸ್ಪರ್ಧಿ ಮಾಡಿದ್ದ ರೀಲ್ಸ್ನಿಂದ ಕಳೆದು ಹೋಗಿದ್ದ ಪುರುಷ, ಮಂಗಳಮುಖಿಯಾಗಿ ಪತ್ತೆ




