Political News: ಹಾಸನ: ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರದ ಬಗ್ಗೆ ಹಾಸನದಲ್ಲಿ ಪ್ರತಿಕ್ರಿಯಿಸಿದ ಮಾಜಿ ಶಾಸಕ ಪ್ರೀತಂ ಗೌಡ, ಜೆಡಿಎಸ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಪ್ರೀತಂ ಜೆ ಗೌಡ ರಾಜಕೀಯಕ್ಕೆ ಬಂದಿರುವಂತದ್ದು ತತ್ವ ಸಿದ್ಧಾಂತದ ಆಧಾರದ ಮೇಲೆ. ಪ್ರೀತಂ ಜೇ ಗೌಡ ಹಾಸನದಲ್ಲಿ ಚುನಾವಣೆ ಮಾಡಬೇಕೆಂದು ಬಂದಾಗ ಬಿಜೆಪಿ ಇದ್ದಿದ್ದು 6,000 ವೋಟು. ಇವಾಗ 78,000 ವೋಟಿದೆ. ನಾಲ್ಕು ಸಾವಿರ ಇರುವಂತಹ ಯಾರಾದರೂ ಹೋಗ್ತಾರಾ.? ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿ ಆಗಬೇಕೆಂದು ಆಗಲು ಕನಸು ಕಾಣುತ್ತಿರುವರಲ್ಲಿ ನಾನು ಮೊದಲಿಗ ಎಂದು ಹೇಳಿದ್ದಾರೆ.
ಬಿಜೆಪಿ ಜೆಡಿಎಸ್ ಮೈತ್ರಿ ಕುರಿತು ಮಾತನಾಡಿದ ಪ್ರೀತಂಗೌಡ, ಬಿಜೆಪಿ ಜೆಡಿಎಸ್ ಮೈತ್ರಿ ಮದುವೆಯ ನಂಟು. ಜೆಡಿಎಸ್ ಬಿಜೆಪಿ ಮೈತ್ರಿ ಸ್ವಾಗತಾರ್ಹ ಎಂದಿದ್ದಾರೆ. ಮೈತ್ರಿ ನಮ್ಮ ರಾಷ್ಟ್ರೀಯ ನಾಯಕರು ಟ್ವೀಟ್ ಮಾಡುವುದರ ಮೂಲಕ ಮೈತ್ರಿ ಆಗಿದೆ ಎಂದೂ ಮಾಹಿತಿ ಹಂಚಿಕೊಂಡಿದ್ದಾರೆ. ನಮ್ಮ ಹಿರಿಯರು ಏನು ತೀರ್ಮಾನ ಮಾಡ್ತಾರೆ ಅದಕ್ಕೆ ಒಬ್ಬ ಕಾರ್ಯಕರ್ತನಾಗಿ ನಾನು ಕೂಡ ಒಪ್ಪಿಕೊಳ್ಳ ಬೇಕಾಗಿರುವಂತದ್ದು.
ಜೆಡಿಎಸ್ ಅವ್ರು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದು. ಒಂದು ಸೀಟ್ ಅವ್ರು 303 ಸೀಟ್ ಅವರ ಜೊತೆಗೆ ಬಂದಿದ್ದಾರೆ. ಅವರು (ಜೆಡಿಎಸ್) ಬಿಜೆಪಿ ಜೊತೆಗೆ ಬಂದಿರೋ ಅಂತ ನೆಂಟರು. ನಮ್ಮಲ್ಲಿ ವಂಶ ಪಾರಂಪರ್ಯ ಆಡಳಿತಕ್ಕೆ ಕುಟುಂಬ ರಾಜಕಾರಣಕ್ಕೆ ಅವಕಾಶ ಇಲ್ಲ. ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಬೇಕೆಂದು ಬರುತ್ತಿರುವುದು ಬಹಳ ಸ್ವಾಗತ ಮಾಡುವಂತ ವಿಚಾರ ಎಂದು ಪ್ರೀತಂ ಗೌಡ ಹೇಳಿದ್ದಾರೆ.
‘ನಮಗಿಂತ ಜಾಸ್ತಿ ರೈತರಿಗೆ ಬಿಜೆಪಿ-ಜೆಡಿಎಸ್ ಅನ್ಯಾಯ ಮಾಡಿ ನೀರು ಬಿಟ್ಟಿದ್ದಾರೆ’